
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಆ.23): ನನ್ನ ಮಗಳು ಅನನ್ಯಾ ಭಟ್‌ಳದ್ದು ಎಂದು ನಮ್ಮ ತಂಗಿ ವಸಂತಿ ಫೋಟೋ ತೋರಿಸಿದ್ದ ಸುಜಾತ ಭಟ್ ಆಕೆಯ ಡೆತ್ ಸರ್ಟಿಫಿಕೇಟ್‌ಳನ್ನು ಕೊಂಡೊಯ್ದಿರುವುದು ಏಕೆ. ನನ್ನ ತಂಗಿಯ ಸಾವಿನ ಹಿಂದೆ ಸುಜಾತ ಭಟ್ ಕೈವಾಡ ಇರಬಹುದು. ಅದನ್ನು ಸರಿಯಾಗಿ ತನಿಖೆ ಮಾಡಿ ಮಾಡಿ ಎಂದು ಮೃತೆ ಕೊಡಗಿನ ವಸಂತಿಯ ಸಹೋದರ ವಿಜಯ್ ಆಗ್ರಹಿಸಿದ್ದಾರೆ.
ವಿರಾಜಪೇಟೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್ ವತಂತಿಯ ಮತ್ತೊಂದು ಫೋಟೋವನ್ನು ತೋರಿಸಿದ್ದಾರೆ. ಹಾಗೂ ಶ್ರೀವತ್ಸ ಅವರೊಂದಿಗೆ ವಸಂತಿ ವಿವಾಹವಾಗಿದ್ದ ಮದುವೆ ಆಮಂತ್ರಣ ಪತ್ರಿಕೆಯನ್ನು ತೋರಿಸಿದ್ದಾರೆ. ಸುಜಾತ ಭಟ್ ಎರಡು ವರ್ಷಗಳ ಹಿಂದೆ ವಿರಾಜಪೇಟೆಗೆ ಬಂದು ನನ್ನ ತಂಗಿಯ ಡೆತ್ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾಳೆ. ನಮಗೆ ಗೊತ್ತಿಲ್ಲದಂತೆ ಆಕೆ ಹೇಗೆ ಮತ್ತು ಯಾವ ಉದ್ದೇಶಕ್ಕಾಗಿ ಡೆತ್ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾಳೆ. ಇದರ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
ನನ್ನ ತಂಗಿಯ ಫೋಟೋವನ್ನು ಆಕೆ ಬಳಸಿಕೊಂಡಿರುವುದನ್ನು ಸುವರ್ಣ ನ್ಯೂಸ್ ಎಳೆಎಳೆಯಾಗಿ ಪ್ರತಿಯೊಂದನ್ನು ಬಯಲು ಮಾಡಿದೆ. ಸುವರ್ಣ ನ್ಯೂಸ್ ಗೆ ಮೊದಲು ಥ್ಯಾಂಕ್ಸ್ ಹೇಳುತ್ತೇನೆ ಎಂದು ವಸಂತಿ ಅವರ ಸಹೋದರ ವಿಜಯ್ ಹೇಳಿದ್ದಾರೆ. ನನ್ನ ತಂಗಿ ಡೆತ್ ಆದಾಗ ಆಕೆ ಮೈಮೇಲೆ ಸಾಕಷ್ಟು ಚಿನ್ನಾಭರಣ ಇದ್ದವು, ಆಕೆಯ ಖಾತೆಯಲ್ಲೂ ಸಾಕಷ್ಟು ಹಣವಿತ್ತು. ಅದನ್ನೆಲ್ಲಾ ಆಕೆ ಕ್ಲೈಂ ಮಾಡಿಕೊಳ್ಳುವುದಕ್ಕಾಗಿ ಡೆತ್ನೋಟ್ ತೆಗೆದುಕೊಂಡು ಹೋಗಿರಬಹುದು ಎಂದು ವಿಜಯ್ ಆರೋಪಿಸಿದ್ದಾರೆ.
2004 ರಿಂದಲೇ ಸುಜಾತಭಟ್ ಗೆ ರಂಗಪ್ರಸಾದ್ ಪರಿಚಯವಿತ್ತು. ಶ್ರೀವತ್ಸ ಅವರನ್ನು ಮದುವೆ ಆದ ಬಳಿಕ ನನ್ನ ತಂಗಿ ಸಾವನ್ನಪ್ಪಿದ್ದು 2007ರಲ್ಲಿ. ಅಂದ ಮೇಲೆ ನನ್ನ ತಂಗಿಯ ಸಾವಿನಲ್ಲಿ ಸುಜಾತ ಭಟ್ ಕೈವಾಡವಿದೆ. ಆಕೆ ಹೋದಲೆಲ್ಲಾ ಸಾಕಷ್ಟು ಜನರ ಸಾವುಗಳಾಗಿವೆ. ಯಾರೋ ಸೇಟು ಇದ್ರು ಅವರ ಸಾವಾಗಿದೆ, ರಂಗಪ್ರಸಾದ್, ನನ್ನ ತಂಗಿ ಹಾಗೆಯೇ ಶ್ರೀವತ್ಸ ಸಾವಾಗಿದೆ. ಇದೆಲ್ಲವನ್ನೂ ನೋಡಿದಾಗ ಈಕೆಯದ್ದೇ ಏನೆಲ್ಲಾ ಸಮಸ್ಯೆ ಇದೆ. ಈಕೆಯನ್ನು ಸರಿಯಾಗಿ ತನಿಖೆ ಮಾಡಿದರೆ ಎಲ್ಲವೂ ಬಯಲಾಗುತ್ತದೆ ಎಂದು ಆಗ್ರಹಿಸಿದ್ದಾರೆ.
ಸುಜಾತಭಟ್ ರಾತ್ರಿ ಅನನ್ಯಭಟ್ ನನ್ನ ಮಗಳಲ್ಲ ಎನ್ನುತ್ತಾಳೆ. ಬೆಳಿಗ್ಗೆ ಪುನಃ ನನ್ನ ಮಗಳು ಎನ್ನುತ್ತಾಳೆ. ಈಕೆಯನ್ನು ನೋಡಿದರೆ ನಮಗೆ ನಾಚಿಕೆ ಆಗುತ್ತದೆ. ನಾವೊಂದು ಸುಸಂಸ್ಕೃತ ಕುಟುಂಬದಿಂದ ಬಂದವರು. ಆದರೆ ಈಕೆ ನನ್ನ ತಂಗಿಯ ಫೋಟೋವನ್ನು ಹೀಗೆ ದುರ್ಬಳಕೆ ಮಾಡಿಕೊಂಡು ನಮ್ಮ ಕುಟುಂಬದ ಮರ್ಯಾದೆಯನ್ನು ತೆಗೆಯುತ್ತಿದ್ದಾಳೆ ಕೊಡಗಿನ ವಿರಾಜಪೇಟೆಯಲ್ಲಿ ವಸಂತಿ ಸಹೋದರ ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ