
ದಕ್ಷಿಣ ಕನ್ನಡ (ಆ.23): ಹಿಂದೂ ಧರ್ಮದ ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದಲ್ಲಿ ನೂರಾರು ಮಹಿಳಾ ಶವಗಳನ್ನು ಹೂತಿದ್ದಾಗಿ ಹೇಳಿದ ಅನಾಮಿಕ ಮುಸುಕುಧಾರಿ ಚಿನ್ನಯ್ಯನ ಅಸಲಿ ಮುಖವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ರಿವೀಲ್ ಮಾಡಿತ್ತು. ಆದರೆ, ಅದು 14 ವರ್ಷ ಹಳೆಯ ಫೋಟೋ ಆಗಿತ್ತು. ಇದೀಗ, ಮಾಸ್ಕ್ ಧರಿಸಿ ಓಡಾಡುತ್ತಿದ್ದ ಅಸಲಿ ಚಿನ್ನಯ್ಯನ ಈಗಿನ ಮುಖ ಹೇಗಿದೆ ಎಂಬ ಫೋಟೋ ರಿವೀಲ್ ಆಗಿದೆ.
ಸರ್ಕಾರ ನಿಯೋಜನೆ ಮಾಡಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಚಿನ್ನಯ್ಯನನ್ನು ಬಂಧನ ಮಾಡಿದ್ದು, ಬೆಳ್ತಂಗಡಿ ಕೋರ್ಟ್ ಮುಂದೆ ಹಾಜರುಪಡಿಸಿದೆ. ಇಲ್ಲಿ ದೂರುದಾರನನ್ನು ವಿಚಾರಣೆ ಮಾಡುವುದಕ್ಕೆ ಎಸ್‌ಐಟಿ ವಶಕ್ಕೆ ಕೇಳುವ ಸಾಧ್ಯತೆಯಿದೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಮಾಸ್ಕ್ ತೆಗೆದು ನ್ಯಾಯಾಧೀಶರ ಮುಂದೆ ಹೋದ ಚಿನ್ನಯ್ಯ:
ಚಿನ್ನಯ್ಯನ ಇನ್ ಕ್ಯಾಮರಾ ಹೇಳಿಕೆ ದಾಖಲಿಸಿ ಕೊಳ್ತಿರೋ ನ್ಯಾಯಾಧೀಶರು. ನ್ಯಾಯಾಧೀಶ ವಿಜಯೇಂದ್ರ ಇ.ಹೆಚ್ ಎದುರು ಚಿನ್ನಯ್ಯ ಹಾಜರು. ಕೇವಲ ಚಿನ್ನಯ್ಯ, ಜಡ್ಜ್ ಮತ್ತು ಸ್ಟೆನ್ನೋಗ್ರಾಪರ್ ಮಾತ್ರ ಇಲ್ಲಿದ್ದಾರೆ. ಮಾಸ್ಕ್ ತಗೆದು ಜಡ್ಜ್ ಬಳಿ ಹೋದ ಚಿನ್ನಯ್ಯ. ಪೂರ್ತಿ ಗಡ್ಡ ಬಿಟ್ಟಿರೋ ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯ. ಕೋರ್ಟ್ ನಲ್ಲಿ ನ್ಯಾಯಾಧೀಶರ ಬಳಿ ಹೇಳಿಕೆ ವಿಡಿಯೋ ರೆಕಾರ್ಡ್. ಚಿನ್ನಯ್ಯ ಅಲಿಯಾಸ್ ಚೆನ್ನನ ವಿಡಿಯೋ ರೆಕಾರ್ಡ್ ಮಾಡಲಾಗುತ್ತಿದೆ.
ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಂದ ಪೊಲೀಸರು:
ಕಾನೂನು ನಿಯಮಾವಳಿಯಂತೆ ಬಂಧಿನ ಚಿನ್ನಯ್ಯನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಇದೀಗ ಚಿನ್ನಯ್ಯನನ್ನು ಕೋರ್ಟ್ ಮೂಲಕ ವಶಕ್ಕೆ ಪಡೆದು ಕಠಿಣ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂತ್ರಧಾರಿಗಳು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್ ಹಾಗೂ ಯೂಟೂಬರ್ ಸಮೀರ್ ಎಂದು ಹೇಳಲಾಗುತ್ತಿದೆ. ಇದಕ್ಕೆ ಸುಜಾತಾ ಭಟ್ ಕೂಡ ಪಾತ್ರಧಾರಿ ಎಂಬ ಅನುಮಾನಗಳು ಮೂಡುತ್ತಿವೆ. ಇದೆಲ್ಲದ ಹಿಂದೆ ಯಾರಿದ್ದಾರೆ ಎಂಬ ಮಾಹಿತಿಯನ್ನು ಎಸ್‌ಐಟಿ ತನಿಖೆ ಮೂಲಕ ಹೊರತೆಗೆಯಬೇಕಿದೆ.
ನಾನು ನ್ಯಾಯದ ಪರ, ಧರ್ಮದ ಪರ ನಿಲ್ಲುತ್ತೇನೆ: ಡಿಕೆಶಿ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಮಾಸ್ಕ್ ಮ್ಯಾನ್‌ನ ಕುಟುಂಬದವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, 'ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ' ಎಂದು ಹೇಳಿದ್ದಾರೆ. ಬಾಲಕೃಷ್ಣ ಅವರು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದಾಗಲೂ ನಾನು ಮಾತಾಡಿರಲಿಲ್ಲ. ನಾನು ಯಾರ ಪರವೂ ಇಲ್ಲ, ಆದರೆ ಧರ್ಮದಲ್ಲಿ ರಾಜಕಾರಣ ಮಾಡಬಾರದು ಅಷ್ಟೇ,' ಎಂದು ಹೇಳಿದರು. 'ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಕೂಡ ಹೇಳಿದ್ದಾರೆ. ನಾವು ಮಾತಾಡಿದ ನಂತರವೇ ಬಿಜೆಪಿ ಅವರು ಈ ಬಗ್ಗೆ ಮಾತನಾಡಲು ಶುರು ಮಾಡಿದರು. 'ತನಿಖೆ ನಡೆಯುತ್ತಿದೆ, ನೋಡೋಣ. ನಾನು ನ್ಯಾಯದ ಪರ, ಧರ್ಮದ ಪರ ನಿಲ್ಲುತ್ತೇನೆ' ಎಂದು ಡಿ.ಕೆ. ಶಿವಕುಮಾರ್ ತಮ್ಮ ಹೇಳಿಕೆಯನ್ನು ಮುಕ್ತಾಯಗೊಳಿಸಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ