ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಕ್ಷೇತ್ರವನ್ನು .120 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕಾಗಿ 60 ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಇದರ ವ್ಯಾಪ್ತಿಯಲ್ಲಿ 28 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ.
ಗಂಗಾವತಿ (ಜೂ.14): ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಕ್ಷೇತ್ರವನ್ನು .120 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕಾಗಿ 60 ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಇದರ ವ್ಯಾಪ್ತಿಯಲ್ಲಿ 28 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ. ಸೋಮವಾರ ಅಂಜನಾದ್ರಿಗೆ ಭೇಟಿ ನೀಡಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಕುರಿತು ಚರ್ಚಿಸಲು ಜೂ.15ರಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಈ ದೇವಸ್ಥಾನ ಬರುವುದರಿಂದ ಅದರ ಅಡಿ ಕಾನೂನು ಪಾಲಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು. ಒಟ್ಟು 28 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಪ್ರಮುಖವಾಗಿ ಯಾತ್ರಿ ನಿವಾಸ, 600 ಕೊಠಡಿಗಳ ನಿರ್ಮಾಣ, ತಂಗುದಾಣ, ಸಿಬ್ಬಂದಿಗೆ 20 ಕೊಠಡಿಗಳ ನಿರ್ಮಾಣ, ಸಮುದಾಯ ಭವನ, ವಸತಿಗೃಹ, ಭೋಜನ ಶಾಲೆ, ದೇವಾಲಯ ನವೀಕರಣ, ರಸ್ತೆ ಅಗಲೀಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು. ಇದೊಂದು ಪ್ರೇಕ್ಷಣೀಯ ಸ್ಥಳದ ಜತೆಗೆ ರಾಮಾಯಣ, ಅಂಜನಾದ್ರಿ ಬಗ್ಗೆ ತಿಳಿಹೇಳುವ ಇತಿಹಾಸ ಸೃಷ್ಟಿಸಲಾಗುತ್ತದೆ.
ಅಂಜನಾದ್ರಿ ಅಭಿವೃದ್ಧಿ: ಶೀಘ್ರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ
ಇಲ್ಲಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೂಲ ಸೌಕರ್ಯ ಒದಗಿಸಲು ಎಲ್ಲ ಏರ್ಪಾಡು ಮಾಡುತ್ತಿದೆ ಎಂದರು. ವಯಸ್ಸಾದ ಪ್ರವಾಸಿಗರು ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ ವೀಕ್ಷಣೆಗೆ ಅನುಕೂಲವಾಗುವಂತೆ ರೋಪ್ ವೇ ನಿರ್ಮಾಣ ಮಾಡಬೇಕೆನ್ನುವ ಉದ್ದೇಶ ಇದ್ದು, ಇದನ್ನು ನಿರ್ಮಿಸಿದರೆ ಮಹತ್ವ ಕಳೆದುಕೊಳ್ಳುತ್ತದೆ ಎಂಬ ಮಾತೂ ಕೇಳಿ ಬರುತ್ತಿದೆ. ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಇದರ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಆಂಜನೇಯ ಜನ್ಮಸ್ಥಳ ವಿವಾದ, ಆಂಧ್ರ ಆಯ್ತು ಈಗ ಮಹಾರಾಷ್ಟ್ರ ಕಿರಿಕ್
ಜಿಲ್ಲಾಡಳಿತದಿಂದ ಪ್ರಸ್ತಾವನೆ: ಸಿಎಂ ಬೊಮ್ಮಾಯಿ ಅವರು ಅಂಜನಾದ್ರಿ ಅಭಿವೃದ್ಧಿ ಕುರಿತು ಸಭೆ ಕರೆದಿರುವುದರಿಂದ ಜಿಲ್ಲಾಡಳಿತ ಈ ಕುರಿತು ಖಾಸಗಿ ಏಜೆನ್ಸಿ ಮೂಲಕ ಸಿದ್ಧ ಮಾಡಿದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ಪ್ರಸ್ತಾವನೆಯ ಪ್ರಕಾರ ರೋಪ್‌ವೇ ನಿರ್ಮಾಣ ಮಾಡುವುದು ಖಚಿತ. ಆದರೆ, ಇದನ್ನು ಪಿಪಿಪಿ ಯೋಜನೆ ಮೂಲಕ ಮಾಡಬೇಕೇ ಅಥವಾ ರಾಜ್ಯ ಸರ್ಕಾರದಿಂದ ಮಾಡಬೇಕೇ ಎನ್ನುವ ಕುರಿತು ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ. ಆದರೆ, ಸರ್ಕಾರದಿಂದಲೇ ಮಾಡುವುದು ಸೂಕ್ತ ಎನ್ನುವ ಮಾತು ಬಲವಾಗಿದೆ. ಯೋಜನೆಗಾಗಿ 700 ಎಕ್ರೆ ಭೂಮಿಸ್ವಾಧೀನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.