400 ಕೋಟಿ ವೆಚ್ಚದಲ್ಲಿ ಕರ್ನಾಟಕದ ಕೆರೆಗಳ ಅಭಿವೃದ್ಧಿ: ಸಚಿವ ಮಾಧುಸ್ವಾಮಿ

By Girish Goudar  |  First Published Mar 11, 2022, 10:34 AM IST

*  ಸಣ್ಣ ನೀರಾವರಿ ಇಲಾಖೆಯಿಂದ ಕೆರೆಗಳ ಸಾಮರ್ಥ್ಯ ಹೆಚ್ಚಳ
*  ಹಂತ ಹಂತವಾಗಿ ಹೂಳು ತೆಗೆಯುವ ಕೆಲಸ ಮಾಡಬೇಕಾಗುತ್ತದೆ
*  ತಕ್ಷಣ ಹೂಳೆತ್ತುವ ಕಾಮಗಾರಿ ಆರಂಭಿಸಬೇಕು 
 


ಬೆಂಗಳೂರು(ಮಾ.11): ರಾಜ್ಯದಲ್ಲಿರುವ(Karnataka) ಕೆರೆಗಳನ್ನು(Lake) 400 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ(JC Madhuswamy) ತಿಳಿಸಿದರು. ಜೆಡಿಎಸ್‌ನ(JDS) ಸಿ.ಎನ್‌. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾವೇರಿ(Kaveri) ಅಚ್ಚುಕಟ್ಟು ಪ್ರದೇಶದ ಕೆರೆಗಳ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಳ ಮಾಡಲು ಆಗುವುದಿಲ್ಲ. ಒಂದು ವೇಳೆ ಅಂತಹ ಕಾಮಗಾರಿ ಮಾಡಲು ಮುಂದಾದರೆ ಕಾವೇರಿ ನಿರ್ವಹಣಾ ಸಮಿತಿ ಮುಂದೆ ಉತ್ತರಿಸುವ ಸ್ಥಿತಿ ಬರುತ್ತದೆ. ಹೀಗಾಗಿ ಹಂತ ಹಂತವಾಗಿ ಹೂಳು ತೆಗೆಯುವ ಕೆಲಸ ಮಾಡಬೇಕಾಗುತ್ತದೆ ಎಂದರು.

ಮೈಸೂರು(Mysuru) ಜಿಲ್ಲೆಯ ಬನ್ನೂರು ಕೆರೆ ತುಂಬಿಸುವ ಯೋಜನೆಯನ್ನು ಜಲಸಂಪನ್ಮೂಲ ಇಲಾಖೆಯಿಂದ ಮಾಡಬೇಕೇ ಅಥವಾ ಸಣ್ಣ ನೀರಾವರಿ ಇಲಾಖೆಯಿಂದ ಮಾಡಬೇಕೇ ಎಂಬುದನ್ನು ಚರ್ಚಿಸಿ ಅನುಷ್ಠಾನ ಮಾಡಲಾಗುವುದು ಎಂದರು.

Tap to resize

Latest Videos

Karnataka Assembly Session: ಮಾಧುಸ್ವಾಮಿ ಹೇಳಿಕೆಯಿಂದ ಸದನದಲ್ಲಿ ಕೋಲಾಹಲ

ಇದಕ್ಕೂ ಮುನ್ನ ಮಾತನಾಡಿದ ಮಂಜೇಗೌಡ ಅವರು ಸಣ್ಣ ನೀರಾವರಿ ಇಲಾಖೆಯಡಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳಿದ್ದರೂ, ಬಹುತೇಕ ಹೂಳು ತುಂಬಿರುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ತಕ್ಷಣ ಹೂಳೆತ್ತುವ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರದಿಂದ ಗುಜರಾತ್‌ಗೆ ಹೆಚ್ಚು, ನಮಗೆ ಕಮ್ಮಿ ಹಣ ಏಕೆ?

ಗುಜರಾತ್‌(Gujarat) ಅಭಿವೃದ್ಧಿ ಹೊಂದಿದ ರಾಜ್ಯವೇ ಅಥವಾ ಹಿಂದುಳಿದ ರಾಜ್ಯವೇ ಎಂಬ ಕುರಿತು ಬುಧವಾರ ಸದನದಲ್ಲಿ ಚರ್ಚೆ ನಡೆದಿದ್ದು, ‘ಗುಜರಾತ್‌ನ ಮರುಭೂಮಿ ಸುತ್ತಲಿನ ಭಾಗ ಸೇರಿದಂತೆ ಹಲವು ಭಾಗ ಈಗಲೂ ಹಿಂದುಳಿದಿದೆ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌(Congress) ಶಾಸಕಾಂಗ ಪಕ್ಷದ ಉಪ ನಾಯಕ ಯು.ಟಿ.ಖಾದರ್‌, ‘ಗುಜರಾತ್‌ ಹಿಂದುಳಿದ ರಾಜ್ಯವಾದರೆ ಗುಜರಾತ್‌ ಮಾದರಿ ಎಂದು ಏಕೆ ಸುಳ್ಳು ಪ್ರಚಾರ ಮಾಡುತ್ತೀರಿ? ಗುಜರಾತ್‌ ಮಾದರಿಯನ್ನು ನಮ್ಮಲ್ಲಿ ಅನುಷ್ಠಾನ ಮಾಡಬೇಕು ಎಂದು ಏಕೆ ಹೇಳುತ್ತೀರಿ?’ ಎಂದು ಪ್ರಶ್ನಿಸಿದರು.

ಮಾ.8 ರಂದು ಬಜೆಟ್‌(Karnataka Budget) ಮೇಲಿನ ಚರ್ಚೆ ವೇಳೆ ಮಾತನಾಡಿದ ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರದಿಂದ ತೆರಿಗೆ(Tax) ಪಾಲು ನೀಡುವಲ್ಲಿ ತೀವ್ರ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯ 100 ರು. ತೆರಿಗೆ ಪಾವತಿಸಿದರೆ 40 ರು. ವಾಪಸು ನೀಡಲಾಗುತ್ತದೆ. ಅದೇ ಗುಜರಾತ್‌ ಹಾಗೂ ರಾಜಸ್ಥಾನ ರಾಜ್ಯಗಳಿಗೆ ದೊಟ್ಟಮಟ್ಟದ ಅನುದಾನ ಸಿಗುತ್ತಿದೆ. ಉತ್ತರ ಪ್ರದೇಶ 100 ರು. ತೆರಿಗೆ ಪಾವತಿಸಿದರೆ 250 ರು. ಅನುದಾನ ಪಡೆಯುತ್ತಿದೆ. ನಮ್ಮ ರಾಜ್ಯಕ್ಕೆ ತೀವ್ರ ಅನ್ಯಾಯವಾಗುತ್ತಿದ್ದು, ನಾಡಿನ ಜನತೆ ತೆರಿಗೆ ಕಟ್ಟುವುದೇ ತಪ್ಪೇ ಎಂದು ಪ್ರಶ್ನಿಸಿದರು.

Karnataka Assembly : RTCಯಲ್ಲಿ ಬೆಳೆ ಜಾಗ ಖಾಲಿ ಬಿಡುವಂತೆ ಇಲ್ಲ

ಈ ವೇಳೆ ಮಧ್ಯಪ್ರವೇಶಿಸಿದ ಜೆ.ಸಿ. ಮಾಧುಸ್ವಾಮಿ, ಹಿಂದುಳಿದ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹಣಕಾಸು ಆಯೋಗದ ಸಭೆಯಲ್ಲಿ ಇವೆಲ್ಲವನ್ನೂ ನಿರ್ಧರಿಸುತ್ತದೆ. ಅನುದಾನವನ್ನು ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಹಂಚಬೇಕು ಎಂದು ಸಂವಿಧಾನ ಹೇಳುವುದಿಲ್ಲ. ಅತ್ಯಂತ ಹಿಂದುಳಿದ ರಾಜ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದರು.

ಮಧ್ಯಪ್ರವೇಶಿಸಿದ ಜೆಡಿಎಸ್‌ ಸದಸ್ಯ ಎ.ಟಿ.ರಾಮಸ್ವಾಮಿ, ‘ನಿಮ್ಮ ಅಭಿಪ್ರಾಯ ಒಪ್ಪುತ್ತೇವೆ. ಹಾಗಾದರೆ ಗುಜರಾತ್‌ ಹಿಂದುಳಿದಿದೆಯೇ? ಅತಿ ಹಿಂದುಳಿದಿದೆಯೇ? ಈ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿಲ್ಲವೇ?’ ಎಂದು ಪ್ರಶ್ನಿಸಿದರು. ಇದಕ್ಕೆ ಮಾಧುಸ್ವಾಮಿ, ‘ಹೌದು ಸರ್‌, ಗುಜರಾತ್‌ನಲ್ಲಿ ಮರುಭೂಮಿ ಹಾಗೂ ಸುತ್ತಮುತ್ತಲಿನ ಬಹಳಷ್ಟುಪ್ರದೇಶಗಳು ಈಗಲೂ ಹಿಂದುಳಿದಿವೆ’ ಎಂದು ಹೇಳಿದರು. ಕುಮಾರಸ್ವಾಮಿ ಮಾತು ಮುಂದುವರೆಸಿ ಬೇರೆ ವಿಷಯ ಕೈಗೆತ್ತಿಕೊಂಡಿದ್ದರಿಂದ ಗುಜರಾತ್‌ ಮಾಡೆಲ್‌ ಚರ್ಚೆ ಅಂತ್ಯವಾಯಿತು.
 

click me!