ಭಜರಂಗದಳವನ್ನು ನಿಷೇಧ ಮಾಡುವ ಭರವಸೆವನ್ನು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಇದರ ಬೆನ್ನಲ್ಲಿಯೇ ಟ್ವಿಟರ್‌ನಲ್ಲಿ ದೇಶದ ಬಲ ಭಜರಂಗದಳ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.
ಬೆಂಗಳೂರು (ಮೇ.2): ಅಧಿಕಾರಕ್ಕೆ ಬಂದರೆ, ಪಿಎಫ್‌ಐ ರೀತಿ ರಾಜ್ಯದಲ್ಲಿ ಭಜರಂಗದಳವನ್ನು ನಿಷೇಧ ಮಾಡುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲಿಯೇ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಲಾಗಿದೆ. ಸ್ವತಃ ಪ್ರಧಾನಿ ಮೋದಿ ಕೂಡ ಹನುಮ ಹುಟ್ಟಿದ ನಾಡಿನಲ್ಲಿ ಭಜರಂಗದಳವನ್ನು ನಿಷೇಧ ಮಾಡುವ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ ಎನ್ನುವ ಬಗ್ಗೆ ಕಿಡಿಕಾರಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ ಕೂಡ ಪ್ರಣಾಳಿಕೆಯಲ್ಲಿ ತಾವು ಪ್ರಕಟಿಸಿದ ಅಂಶವನ್ನು ತಪ್ಪಾಗಿ ಗ್ರಹಿಕೆ ಮಾಡಲಾಗಿದೆ ಎಂದು ತಿಳಿಸಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮುಸ್ಲಿಂ ಓಲೈಕೆ ಮಾಡಲು ನಿಂತಿದೆ ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಚಿದಂಬರಂ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದೂ ಎಲ್ಲೂ ಹೇಳಿಲ್ಲ. ಬದಲಾಗಿ ಮತೀಯ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೇವೆ ಎನ್ನುವ ಮೂಲಕ ವಿವಾದವನ್ನು ತಣ್ಣಗೆ ಮಾಡುವ ಮಾಡುವ ಪ್ರಯತ್ನ ಮಾಡಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ವಿರುದ್ಧ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ದೇಶದ ಬಲ ಭಜರಂಗದಳ ಎನ್ನುವ ಹೆಸರಲ್ಲಿ ಇದನ್ನು ಟ್ರೆಂಡ್ ಮಾಡುತ್ತಿದ್ದಾರೆ.
ರಾಷ್ಟ್ರೀಯವಾದಿ ಸಂಘಟನೆ ಬಜರಂಗ ದಳವನ್ನು ಪಿಎಫ್‌ಐಯಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ಸಮೀಕರಿಸಿದ್ದೇ ದೊಡ್ಡ ತಪ್ಪು.. ಹೆಚ್ಚೂ ಕಡಿಮೆ ಕರ್ನಾಟಕ ಚುನಾವಣೆ ಮುಕ್ತಾಯವಾದಂತಾಗಿದೆ. ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಲ್ಲಿಯವರೆಗೂ ಪಟ್ಟ ಶ್ರಮವನ್ನೆಲ್ಲಾ ಒಂದೇ ಹಂತದಲ್ಲಿ ಮೋರಿಗೆ ಚೆಲ್ಲಿಬಿಟ್ಟಿದ್ದಾರೆ ಎಂದು ಪ್ರವೀಣ್ ಪಾಟೀಲ್ ಎನ್ನುವವರು ಬರೆದುಕೊಂಡಿದ್ದಾರೆ.
'ಬಜರಂಗದಳ ಬ್ಯಾನ್ ಮಾಡುವುದಾಗಿ ಘೋಷಿಸುವ ಮೂಲಕ, ಕಾಂಗ್ರೆಸ್ ಮತ್ತೆ ಹಿಂದೂ ವಿರೋಧಿ ಪಕ್ಷ ಎಂದು ಸಾಬೀತುಮಾಡಿದೆ. ಪಿಎಫ್‌ಐನಂತಹ ಭಯೋತ್ಪಾದಕ ಸಂಘಟನೆಯನ್ನು ಬಜರಂಗದಳದೊಂದಿಗೆ ಹೋಲಿಸಿ ಅವರು ಘೋರ ತಪ್ಪು ಮಾಡಿದ್ದಾರೆ. ಸ್ವಾಭಿಮಾನಿ ಹಿಂದುಗಳು ಇದೆನ್ನ ಎಂದು ಕ್ಷಮಿಸೋಲ್ಲ!' ಎಂದು ಸುನೀಲ್ ಎನ್ನುವವರು ಬರೆದಿದ್ದಾರೆ. ದೇಶಾದ್ಯಂತ ಈಗ ಕಾಂಗ್ರೆಸ್ ಪಕ್ಷಕ್ಕೆ ನಿಷೇಧ ಹೇರಲಾಗುತ್ತಿದೆ. ಈಗ ಭಜರಂಗದಳವನ್ನು ಬ್ಯಾನ್ ಮಾಡುವ ಬಗ್ಗೆ ಹಗಲುಕನಸು ಕಾಣುತ್ತಿದೆ' ಎಂದು ಆಶೀಶ್ ಭಾರದ್ವಾಜ್ ಎನ್ನುವವರು ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷ ಎಂದಿಗೂ ಹಿಂದು ವಿರೋಧಿಯಾಗಿತ್ತು. ಬಹುಶಃ ಮುಂದೆಯೂ ಕೂಡ ಅದು ಹಿಂದು ವಿರೋಧಿಯಾಗಿಯೇ ಇರಲಿದೆ. ವಿದೇಶದ ವ್ಯಕ್ತಿ ಮೊದಲು ರಾಮನ ಎದುರು ಸೋತಿದ್ದರು. ಈಗ ಭಜರಂಗಬಲಿಯ ಎದುರು ಸೋಲೋಕೆ ಸಿದ್ಧವಾಗಿದ್ದಾರೆ. ಇವರೆಲ್ಲರೂ ಹಿಂದು ವಿರೋಧಿ. ರಾಮ ಎಂದಿಗೂ ಶಾಂತ ಸ್ವಭಾವದವನು. ಆದರೆ, ಹನುಮಂತನ ಬಗ್ಗೆ ನಿಮಗೆ ಈಗಾಗಲೇ ಗೊತ್ತಿರಬೇಕು ಎಂದು ಗುಡ್ಡು ಮಂಡಲ್ ಎನ್ನುವವರು ಬರೆದಿದ್ದಾರೆ.
ಲವ್ ಜಿಹಾದ್ ಅನ್ನು ಬಂದ್ ಮಾಡಿಸಿದ್ದು ಭಜರಂಗದಳ, ಗೋವು ಕಳ್ಳಸಾಗಣೆಯನ್ನು ನಿಲ್ಲಿಸಿದ್ದು ಭಜರಂಗದಳ. ದೇಶ, ಧರ್ಮ ಮತ್ತು ಸಂಸ್ಕೃತಿಗಾಗಿ ಧ್ವನಿ ಎತ್ತುವ ಸಂಸ್ಥೆ ಬಜರಂಗದಳ. ಪ್ರತಿಯೊಬ್ಬ ಸನಾತನಿಗೂ ಬಜರಂಗದಳದ ಬಗ್ಗೆ ಹೆಮ್ಮೆಯಿದೆ. ಹಿಂದುಗಳೆಲ್ಲರೂ ಬಜರಂಗದಳ ಸೇರಿ ಎಂದು ಈ ಹಂತದಲ್ಲಿ ಇನ್ನೊಬ್ಬರು ಮನವಿ ಮಾಡಿದ್ದಾರೆ. 'ಭಜರಂಗದಳದ ತಂಟೆಗೆ ಬಂದು ಕಾಂಗ್ರೆಸ್ ಕ್ಷಮಿಸಲಾಗದ ಅಪರಾಧ ಮಾಡಿದೆ...!' ಎಂದು ವಿನಯ್ ಪ್ರಭು ಎನ್ನುವವರು ಬರೆದಿದ್ದಾರೆ.
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಈವರೆಗೂ ಮುನ್ನಡೆಯಲ್ಲಿತ್ತು ಎಂದು ನನಗನಿಸಿತ್ತು. ಬಹುಶಃ ಕಾಂಗ್ರೆಸ್‌ಗೆ ಕೂಡ ಇದು ಅನಿಸಿರಲಿಕ್ಕಿಲ್ಲ. ಆದರೆ, ಈಗ ಭಜರಂಗದಳವನ್ನು ಪಿಎಫ್‌ಐ ಜೊತೆ ಹೋಲಿಸುವ ಮೂಲಕ ಸೆಲ್ಫ್ ಗೋಲು ಹೊಡೆದುಕೊಂಡಿದೆ. ಇದೇ ರೀತಿಯಲ್ಲಿ ಕಾಂಗ್ರೆಸ್ ಎಡಪಂಥೀಯವಾದಿಗಳ ಬೊಂಬೆಯಾಗಿ ವರ್ತನೆ ಮಾಡಿದರೆ, ಶೀಘ್ರದಲ್ಲಿಯೇ ಕಾಂಗ್ರೆಸ್‌ನ ಕಥೆ ಮುಕ್ತಾಯವಾಗಲಿದೆ ಎಂದು ರುದ್ರ ವಿಕ್ರಮ್ ಸಿಂಗ್ ಎನ್ನುವವರು ಬರೆದಿದ್ದಾರೆ.
ಬಜರಂಗದಳ ಬ್ಯಾನ್ ಮಾಡುವುದಾಗಿ
ಘೋಷಿಸುವ ಮೂಲಕ, ಕಾಂಗ್ರೆಸ್ ಮತ್ತೆ ಹಿಂದೂ ವಿರೋಧಿ ಪಕ್ಷ ಎಂದು ಸಾಬಿತು ಮಾಡಿದೆ.
ಪಿಎಫ್‌ಐನಂತಹ ಭಯೋತ್ಪಾದಕ ಸಂಘಟನೆಯನ್ನು ಬಜರಂಗದಳದೊಂದಿಗೆ ಹೋಲಿಸಿ ಅವರು ಘೋರ ತಪ್ಪು ಮಾಡಿದ್ದಾರೆ. ಸ್ವಾಭಿಮಾನಿ ಹಿಂದುಗಳು ಇದೆನ್ನ ಎಂದು ಕ್ಷಮಿಸೋಲ್ಲ! 🚩
karnataka election ಕಾಂಗ್ರೆಸ್ ಪ್ರಣಾಳಿಕೆಗೂ ನಮಗೂ ಸಂಬಂಧವಿಲ್ಲ:ಎಚ್ ಡಿ ದೇವೇಗೌಡ
ಇಲ್ಲಿಯವರೆಗೂ ಬಹುತೇಕ ಈ ಚುನಾವಣೆಯಲಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಕಾಣಿಸಿಕೊಳ್ಳುವ ಸೂಚನೆ ನೀಡಿತ್ತು. ಆದರೆ, ಕಾಂಗ್ರೆಸ್ ಪ್ರಣಾಳಿಕೆ ಘೋಷಣೆ ಮಾಡಿದ ಬೆನ್ನಲ್ಲಿಯೇ ಬಿಜೆಪಿ ಬಹುಮತ ಪಡೆದುಕೊಳ್ಳುವ ಸಾಧ್ಯತೆ ಕಾಣುತ್ತಿದೆ. ಥ್ಯಾಂಕ್ ಯು ಬಜರಂಗದಳ ಎಂದು ಇನ್ನೊಬ್ಬರು ಬರೆದಿದ್ದಾರೆ.
ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹನುಮ ಜನ್ಮಸ್ಥಳದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ!
ಕಾಂಗ್ರೆಸ್ ನಿಂದ ಭಜರಂಗದಳ ಬ್ಯಾನ್ ವಿಚಾರದಿಂದ ಯೂಟರ್ನ್..?: ಡ್ಯಾಮೇಜ್ ಕಂಟ್ರೋಲ್ ಗೆ ಕೈ ನಾಯಕರ ಪ್ರಯತ್ನ ಪಡುತ್ತಾರೆ ಎನ್ನಲಾಗಿದೆ. ಭಜರಂಗದಳ ಬ್ಯಾನ್ ವಿಚಾರವನ್ನು ಪ್ರಣಾಳಿಕೆಯಿಂದ ಕೈ ಬಿಡುವ ಸಾಧ್ಯತೆ ಇದ್ದು, ಇಂದು ರಾತ್ರಿ ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದೆ. ನಾಳೆ ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ