ಸಾರಿಗೆ ನೌಕರರ ವಜಾ, ವರ್ಗಾವಣೆ, ಅಮಾನತು ರದ್ದು ಮಾಡಿ

By Kannadaprabha NewsFirst Published Aug 26, 2021, 7:37 AM IST
Highlights
  • ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾರಿಗೆ ನಿಗಮಗಳ ನೌಕರರ ವಜಾ, ವರ್ಗಾವಣೆ ಹಾಗೂ ಅಮಾನತು ಆದೇಶಗಳನ್ನು ರದ್ದುಪಡಿಸಲು ಆಗ್ರಹ
  • ನೌಕರರ ಮೇಲಿನ ಪೊಲೀಸ್‌ ಪ್ರಕರಣಗಳನ್ನು ಹಿಂಪಡೆದು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೆ

 ಬೆಂಗಳೂರು (ಆ.26):  ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾರಿಗೆ ನಿಗಮಗಳ ನೌಕರರ ವಜಾ, ವರ್ಗಾವಣೆ ಹಾಗೂ ಅಮಾನತು ಆದೇಶಗಳನ್ನು ರದ್ದುಪಡಿಸಬೇಕು. ಜತೆಗೆ ನೌಕರರ ಮೇಲಿನ ಪೊಲೀಸ್‌ ಪ್ರಕರಣಗಳನ್ನು ಹಿಂಪಡೆದು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್‌. ಚಂದ್ರಶೇಖರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬುಧವಾರ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅವರು, ಸಾರಿಗೆ ನೌಕರರು ಹಗಲು- ಇರುಳು ಎನ್ನದೆ, ಮಳೆ-ಗಾಳಿ-ಬಿಸಿಲು ಎನ್ನದೆ ಹಬ್ಬ-ಹರಿದಿನಗಳಲ್ಲೂ ಸಾರಿಗೆ ನಿಗಮಗಳಿಗಾಗಿ ದುಡಿಯುತ್ತಿದ್ದಾರೆ.

ಟಿಕೆಟ್ ದರ, ವಿದ್ಯಾರ್ಥಿಗಳ ಬಸ್ ಪಾಸ್ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಮಾಹಿತಿ

ಆದರೆ, ಸಾರಿಗೆ ಇಲಾಖೆ ಸಿಬ್ಬಂದಿಗೆ ಹೋಲಿಸಿದರೆ ನಿಗಮಗಳ ನೌಕರರ ವೇತನ ಬಹಳ ಕಡಿಮೆ ಇದೆ. ಆರೋಗ್ಯ, ವರ್ಗಾವಣೆ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಕುರಿತು ನಾಲ್ಕು ವರ್ಷದಿಂದ ಶಾಂತಿಯು ಹೋರಾಟ ಮಾಡುತಿದ್ದೇವೆ. ಡಿಸೆಂಬರ್‌ನಲ್ಲಿ ತಮ್ಮ ಉಪಸ್ಥಿತಿಯಲ್ಲಿ ಸಾರಿಗೆ ನೌಕರರಿಗೆ ಸರ್ಕಾರ ಕೊಟ್ಟಭರವಸೆ ಈಡೇರಿಸಿಲ್ಲ.

ಹೀಗಾಗಿ ಏಪ್ರಿಲ್‌ ತಿಂಗಳಲ್ಲಿ ನಡೆಸಿದ ಶಾಂತಿಯುತ ಪ್ರತಿಭಟನೆ ವಿರುದ್ಧ ಕ್ರಮದ ನೆಪದಲ್ಲಿ ಹಲವಾರು ನೌಕರರು ದೂರದ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ. ಕೆಲವರನ್ನು ವಜಾಗೊಳಿಸಿದ್ದು ಆದಾಯದ ಮೂಲ ಕಳೆದುಕೊಂಡು ಜೀವನ್ನೇ ನಡೆಸುವುದು ಕಷ್ಟವಾಗಿದೆ.

ಕ್ಷುಲ್ಲಕ ಕಾರಣಗಳಿಗೆ ಅಮಾನತು ಮಾಡಿ ಮತ್ತಷ್ಟುಕಷ್ಟನೀಡಲಾಗುತ್ತಿದೆ. ಮುಷ್ಕರದ ಸಮಯದಲ್ಲಿ ಶೇ.95 ರಷ್ಟುನೌಕರರ ಮೇಲೆ ಸುಳ್ಳು ಪೊಲೀಸ್‌ ಪ್ರಕರಣ ದಾಖಲಿಸಿ ಜೈಲು, ಕೋರ್ಟ್‌ಗೆ ಅಲೆಸುತ್ತಿದ್ದಾರೆ. ಹಿಗಾಗಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರ ಸಲ್ಲಿಸಿದರು.

click me!