ವಿಧಾನಸಭೆ ನಿಯಮಾವಳಿ ಬದಲಾವಣೆಗೆ ಕಾಗೇರಿ ನಿರ್ಧಾರ

By Kannadaprabha NewsFirst Published Sep 29, 2020, 9:03 AM IST
Highlights

ವಿಧಾನಸಭೆಯ ಕೆಲ ನಿಯಮಾವಳಿಗಳನ್ನು ಬದಲಾವಣೆಗಳನ್ನು ತೀರ್ಮಾನಿಸಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ

ಬೆಂಗಳೂರು (ಸೆ.29): ವಿಧಾನಸಭೆ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳನ್ನು ಪರಿಶೀಲಿಸಿ ತಿದ್ದುಪಡಿ ತರಲು ಶಿಫಾರಸು ಮಾಡುವುದಕ್ಕಾಗಿ ನಿಯಮಾವಳಿ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕಲಾಪದ ನಡವಳಿಕೆಯಲ್ಲಿ ಕೆಲ ಲೋಪದೋಷಗಳಿವೆ. ಅವುಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು ಎಂದು ಹೇಳಿದರು.

ಶನಿವಾರ ಮುಕ್ತಾಯಗೊಂಡ 15ನೇ ವಿಧಾನಸಭೆಯ 7ನೇ ಅಧಿವೇಶನದ ಕಾರ್ಯಕಲಾಪಗಳು ಆರು ದಿನಗಳ ಅವಧಿಯಲ್ಲಿ 40 ಗಂಟೆಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಒಟ್ಟು 36 ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಗಿದೆ ಎಂದು ಇದೇ ವೇಳೆ ಕಾಗೇರಿ ಮಾಹಿತಿ ನೀಡಿದರು.

ವಿಧಾನಸಭೆಯಲ್ಲಿ ಒಟ್ಟು 3071 ಪ್ರಶ್ನೆ ಸ್ವೀಕರಿಸಲಾಗಿದೆ. ಅದರಲ್ಲಿ 1109 ಪ್ರಶ್ನೆಗೆ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದೆ. ನಿಯಮ 351ರಡಿ 60 ಸೂಚನೆಗಳನ್ನು ಅಂಗೀಕರಿಸಲಾಗಿದೆ. ಅದರಲ್ಲಿ 35 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 129 ಸೂಚನೆಗಳ ಪೈಕಿ 9 ಸೂಚನೆಗಳನ್ನು ಚರ್ಚಿಸಲಾಗಿದೆ. 72 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ವಿಧಾನಮಂಡಲ ಸಮಿತಿಗಳ 6 ವರದಿಯನ್ನು ಜಂಟಿ ಪರಿಶೀಲನಾ ವಿಶೇಷ ವರದಿ, 57 ಅಧಿಸೂಚನೆಗಳು, 19 ಆದ್ಯಾದೇಶಗಳು, 62 ವಾರ್ಷಿಕ ವರದಿ, 69 ಲೆಕ್ಕ ಪರಿಶೋಧನಾ ವರದಿ, ಅನುಷ್ಠಾನ 1 ವರದಿ, 1 ಅನುಪಾಲನಾ ವರದಿ, 3 ವಿಶೇಷ ವರದಿ ಮಂಡಿಸಲಾಗಿದೆ. 4 ಅರ್ಜಿಗಳನ್ನು ಒಪ್ಪಿಸಲಾಗಿದೆ. 2020-21ನೇ ಸಾಲಿನ ಪೂರಕ ಅಂದಾಜು ಮೊದಲ ಕಂತಿನ ಬೇಡಿಕೆಗೆ ಅಂಗೀಕರಿಸಲಾಗಿದೆ ಎಂದು ವಿವರಿಸಿದರು.

ಅನಿರೀಕ್ಷಿತ ಜವಾಬ್ದಾರಿ ಕೊಟ್ಟ ಬಿಜೆಪಿ: ರಾಜೀನಾಮೆಗೆ ಸಿದ್ಧವೆಂದ ಸಿ.ಟಿ. ರವಿ ...

ವಿಧಾನಪರಿಷತ್‌ನಲ್ಲಿ ತಿದ್ದುಪಡಿಗಳೊಂದಿಗೆ 2 ಧನ ವಿನಿಯೋಗ ವಿಧೇಯಕ, 37 ವಿಧೇಯಕಗಳ ಪೈಕಿ 36 ವಿಧೇಯಕ ಅಂಗೀಕಾರವಾಗಿವೆ. 1 ವಿಧೇಯಕ ತಡೆ ಹಿಡಲಾಗಿದೆ. ನಿಯಮ 60ರ ಅಡಿ ನೀಡಿದ್ದ 3 ನಿಲುವಳಿ, 20 ಸೂಚನೆಗಳು ನಿಯಮಗಳಗಳ 69ರಡಿ ಸ್ವೀಕರಿಸಲಾಗಿದೆ. 1 ಸೂಚನೆ ಮೇಲೆ ಚರ್ಚಿಸಲಾಗಿದೆ ಎಂದರು.

ಕೋವಿಡ್‌ನಿಂದಾಗಿ ವಿಧಾನಸಭೆಯ ಅಧಿವೇಶನಕ್ಕೆ 28 ಸಚಿವರು, ಶಾಸಕರು ಸದನಕ್ಕೆ ಗೈರಾಗಿದ್ದರು. ಇದರಲ್ಲಿ ಬಿಜೆಪಿಯ 12, ಕಾಂಗ್ರೆಸ್‌ನ 19, ಜೆಡಿಎಸ್‌ನ 6 ಸದಸ್ಯರಿದ್ದಾರೆ. ಕೊರೋನಾ ಸೋಂಕು ಹಾವಳಿಯ ವೇಳೆಯಲ್ಲಿ ಸದನ ನಡೆಸಲು ಸಹಕರಿಸಿದ ಸಭಾನಾಯಕರಾದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರು ಸೇರಿದಂತೆ ಎಲ್ಲ ಶಾಸಕರಿಗೂ ಧನ್ಯವಾದಗಳು.

- ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆ ಸ್ಪೀಕರ್‌

click me!