
ಬೆಂಗಳೂರು (ಫೆ.20): ಮುಡಾ ಪ್ರಕರಣದ ಬಗ್ಗೆ ನಾನು ಆರಂಭದಲ್ಲೇ ಹೇಳಿದ್ದೆ. ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ಮಾಡಿದಾಗಲೇ ಇದೊಂದು ರಾಜಕೀಯ ಪ್ರೇರಿತ ಅಂತಾ ಹೇಳಿದ್ದೆ. ಆದರೀಗ ಲೋಕಾಯುಕ್ತರೇ ಈ ಕೇಸ್‌ನಲ್ಲಿ ಯಾವುದೇ ಸಾಕ್ಷ್ಯ ಇಲ್ಲ ಎಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಮುಡಾ ಕೇಸಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರಿಗೆ ಕ್ಲೀನ್ ಚಿಟ್ ನೀಡಿರುವ ವಿಚಾರ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು, ಇದು ಸಿದ್ದರಾಮಯ್ಯಗೆ ಸಂಬಂಧವಿಲ್ಲದ್ದು. ಅವರದ್ದು ಅವರು ಕ್ಲೇಮ್ ಮಾಡಿದ್ದಾರೆ.ಇಂಥದ್ದೇ ಜಾಗ ಕೊಡಿ ಎಂದು ಕೇಳಿಲ್ಲ. ಇದು ರಾಜಕೀಯ, ಅಧಿಕಾರ ಪ್ರಭಾವ ಬಳಸಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಕೇಸ್‌ನಲ್ಲಿ ಯಾವುದೇ ಎವಿಡೆನ್ಸ್ ಇಲ್ಲ ಎಂದು ಲೋಕಾಯುಕ್ತ ಅಧಿಕಾರಿಗಳು ತನಿಖೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ: Muda case: ಸಿದ್ದರಾಮಯ್ಯಗೆ ಕ್ಲೀನ್‌ಚಿಟ್, ಲೋಕಾಯುಕ್ತರು ಸತ್ಯ ಹೇಳಿದ್ದಾರೆ: ಜಿಟಿ ದೇವೇಗೌಡ
ಹೈಕೋರ್ಟ್ ಕೂಡ ಇದೊಂದು ರಾಜಕೀಯ ಪ್ರೇರಿತ ಎಂದು ಈಗಾಗಲೇ ಹೇಳಿದೆ. ಇಂಡಿಪೆಂಡಂಟ್ ಬಾಡಿ ಎಂದು ಹೈಕೋರ್ಟ್ ತಿಳಿಸಿದೆ. ಪ್ರತಿಯೊಬ್ಬ ಅಧಿಕಾರಿಗಳು ಸಿಎಂ ಹೇಳಿದಂತೆ ಕೇಳ್ತಾರಾ? ಲೋಕಾಯುಕ್ತ ಸ್ವತಂತ್ರ ಸಂಸ್ಥೆ, ಇದರಲ್ಲಿ ಯಾವುದೇ ಪ್ರಭಾವ ಇಲ್ಲ ಎಂದರು. ಇದೇ ವೇಳೆ ವಿಜಯೇಂದ್ರ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ವಿಜಯೇಂದ್ರನ ವಿಚಾರ, ಇರಿಗೇಶನ್ ವಿಚಾರ ಆಮೇಲೆ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ: Muda case: ಲೋಕಾಯುಕ್ತ ಅಧಿಕಾರಿಗಳು ನನಗಷ್ಟೇ ಅಲ್ಲ, ದೇಶದ ನ್ಯಾಯಾಂಗಕ್ಕೇ ಮೋಸ ಮಾಡಿದ್ದಾರೆ: ಸ್ನೇಹಮಯಿ ಕೃಷ್ಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ