
ಬೆಂಗಳೂರು (ಮಾ.1): ಉತ್ತಮ ಸಾಹಿತ್ಯ, ಸಂಗೀತ, ಸಿನಿಮಾ, ನಮ್ಮ ಸಂಸ್ಕೃತಿಯೇ ನಮ್ಮ ಆಸ್ತಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅಭಿಪ್ರಾಯಪಟ್ಟರು.
'ಸರ್ವಜನಾಂಗದ ಶಾಂತಿಯ ತೋಟ' ಎಂಬ ಶೀರ್ಷಿಕೆ ಯಡಿ ಬೆಂಗಳೂರಿನಲ್ಲಿ ನಡೆಯುತ್ತಿರುವ 16 ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಹಾಜರಾಗಿರುವ ಎಲ್ಲರಿಗೂ ಸರ್ಕಾರದ ಪರವಾಗಿ ಧನ್ಯವಾದಗಳನ್ನ ತಿಳಿಸಿದರು.
ಡಿಸಿಎಂ ನಗೆ ಚಟಾಕಿ:
ಸುಮಾರು 18% ರಷ್ಟು ಉದ್ಯೋಗ ಸೃಷ್ಟಿ ಮಾಡೋದು ನಮ್ಮ ಸಿನಿಮಾ ಇಂಡಸ್ಟ್ರಿ ಎಂಬುದು ಮರೆಯಬಾರದು. ನಾನೊಬ್ಬ ಡಿಸ್ಟ್ರೂಬ್ಯೂಟರ್. ಆದರೆ ಈಗ ಅದೆಲ್ಲವನ್ನು ಬಿಟ್ಟಿದ್ದೇನೆ. ಹೀಗಾಗಿ ನನಗೂ ಬಹಳ ರಾಜಕಾರಣಿಗಳಿಗೂ ಈ ಸಿನಿಮಾ ನಂಟು ಇದೆ. ನಮ್ಮ ರಾಜ್ಯದವರು ಬೇರೆ ರಾಜ್ಯದಲ್ಲಿ ಹೋಗಿ ಬೆಳೆದಿದ್ದಾರೆ. ಯಾರೂ ಎಲ್ಲಿ ಬೇಕಾದರೂ ಸಿನಿಮಾ ಮಾಡಬಹುದು. ನೀವೆಲ್ಲಾ ಬಣ್ಣ ಹಚ್ಚಿಕೊಂಡು ನಾಟಕ ಮಾಡ್ತೀರಾ, ಆದ್ರೆ ನಾವೆಲ್ಲ ಬಣ್ಣ ಹಚ್ಚಿಕೊಂಡು ಸಿನಿಮಾ ಮಾಡಿದವರು ಅಲ್ಲ ಎಂದು ನಗೆ ಚಟಾಕಿ ಹಾರಿಸಿದರು.
ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂರಿಂದ ಚಾಲನೆ
ನನಗೆ ಸಿನಿಮಾದವರ ಮೇಲೆ ಸಿಟ್ಟು ಎಂ ಡಿಸಿಎಂ!
ನನಗೆ ಸಿನಿಮಾದವರ ಮೇಲೆ ಸಿಟ್ಟಿದೆ ಎಂದು ಒಂದು ಕ್ಷಣ ನೆರೆದವರಲ್ಲಿ ಅಚ್ಚರಿ ಮೂಡಿಸಿದರು. ಸಿನಿಮಾದವರ ಮೇಲೆ ಯಾಕೆ ಸಿಟ್ಟು ಬಂತಪ್ಪಾ ಇವರಿಗೆ ಅಂತಾ ಯೋಚಿಸುವಾಗಲೇ ಅದಕ್ಕೂ ಕಾರಣ ನೀಡಿದ ಡಿಕೆ ಶಿವಕುಮಾರ ಅವರು, ಮೇಕೆದಾಟು ಪಾದಯಾತ್ರೆಗೆ ಹೋದಾಗ ಈ ಸಿನಿಮಾದವರು ಯಾರೂ ಬರಲಿಲ್ಲ. ವಿಜಿ ಹಾಗೂ ಸಾಧುಕೋಕಿಲ ಇಬ್ಬರು ಮಾತ್ರ ಬಂದಿದ್ದರು. ಉಳಿದವರು ಯಾರೂ ಬರಲಿಲ್ಲ. ಇದೇ ಕಾರಣಕ್ಕೆ ನಾವು ಸಾಧುಕೋಕಿಲರನ್ನು ಗುರುತಿಸಿ ಇವತ್ತು ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಇದನ್ನ ಗಮನದಲ್ಲಿಟ್ಟುಕೊಳ್ಳಿ ಎಂದರು.
ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಬೇಕಾದ 15 ಸಿನಿಮಾಗಳು!
ನೇರವಾಗಿ ಸಿನಿಮಾ ಕಲಾವಿದರ ವಿರುದ್ಧ ಆಕ್ರೋಶ:
ನಾವು ಎಲ್ಲವನ್ನೂ ನೋಡ್ತಾ ಇರ್ತೇವೆ, ನೋಡಿಲ್ಲ ಅಂದುಕೊಳ್ಳಬೇಡಿ ಎಂದು ನೇರವಾಗಿ ಸಿನಿಮಾ ಕಲಾವಿದರ ವಿರುದ್ದ ಆಕ್ರೋಶ ಹೊರಹಾಕಿದ ಡಿಸಿಎಂ ಡಿಕೆ ಶಿವಕುಮಾರ, ಇಂಥ ಕಾರ್ಯಕ್ರಮಗಳಿಗೆ ಸಿನಿಮಾದವರು ಬಂದಿಲ್ಲ ಅಂದ್ರೆ ಹೇಗೆ? ನಾಯಕರು, ನಿರ್ದೇಶಕರು, ನಿರ್ಮಾಪಕರು ಬರಬೇಕಿತ್ತು. ಆದ್ರೆ ಬರೀ ಹತ್ತಾರು ಜನ ಮಾತ್ರ ಬಂದಿದ್ದಾರೆ. ಉಳಿದವರೆಲ್ಲಿ? ಹಾಲಿವುಡ್, ಬಾಲಿವುಡ್ ಎಲ್ಲರೂ ನಮ್ಮ ಕರ್ನಾಟಕದ ಕಡೆ ನೋಡುವಂತಾಗಬೇಕು ಎಂದರು.
ನಿಮಗೆ ಯಾರೂ ಫೈನಾನ್ಸ್ ಮಾಡ್ತಿಲ್ಲ ಅಂತಾ ನನಗೆ ಗೊತ್ತು. ನಾವು ಐದು ಗ್ಯಾರಂಟಿಗಳನ್ನು ತಂದಿದ್ದೇವೆ. ಆ ಮೂಲಕ ಜನರಿಗೆ 56 ಸಾವಿರ ಕೋಟಿ ಕೊಟ್ಟಿದ್ದೇವೆ. ಇದರ ಬಗ್ಗೆ ಯಾರಾದ್ರೂ ತೋರಿಸಿದ್ರಾ? ಎನ್ನುವ ಮೂಲಕ ಪರೋಕ್ಷವಾಗಿ ಸಿನಿಮಾದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ