ಬಿಜೆಪಿ ಶಾಸಕನ ಮೇಲೆ ಲೋಕಾಯುಕ್ತ ದಾಳಿ: ನಮಗೂ ಇದಕ್ಕೂ ಸಂಬಂಧವಿಲ್ಲ ಎಂದ ಡಿಸಿಎಂ, 'ಇಕ್ಬಾಲ್ ಬಾಯಿ ಮುಚ್ಚು' ಎಂದಿದ್ದೇಕೆ ಡಿಕೆಶಿ?

Published : Feb 22, 2026, 05:30 PM IST
DCM DK Shivakumar Mocks BJP After MLA Chandru Lamani s Arrest in Lokayukta Bribery Case

ಸಾರಾಂಶ

ಬಿಜೆಪಿ ಶಾಸಕ ಚಂದ್ರು ಲಮಾಣಿ ಮೇಲಿನ ಲೋಕಾಯುಕ್ತ ದಾಳಿಯು ಸ್ವತಂತ್ರ ಸಂಸ್ಥೆಯ ತನಿಖೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಅನಗತ್ಯ ಹೇಳಿಕೆ ನೀಡುತ್ತಿರುವ ಸ್ವಪಕ್ಷದ ಶಾಸಕರಿಗೆ ಬಾಯಿ ಮುಚ್ಚುವಂತೆ ಎಚ್ಚರಿಕೆ ನೀಡಿದರು.

ಕಾರವಾರ (ಫೆ.22): ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ವಿಚಾರ ಗೊತ್ತಾಗಿದೆ. ಲೋಕಾಯುಕ್ತ ದಾಳಿಗೂ ನಮಗೂ ಸಂಬಂಧವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಶಾಸಕ ಚಂದ್ರು ಲಮಾಣಿ ಮೇಲಿನ ಲೋಕಾಯುಕ್ತ ದಾಳಿ ಹಾಗೂ ಕಾಂಗ್ರೆಸ್ ಶಾಸಕರ ಹೇಳಿಕೆಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು..

ಲೋಕಾಯುಕ್ತ ದಾಳಿ:ನಮಗೂ ಇದಕ್ಕೂ ಸಂಬಂಧವಿಲ್ಲ

ಲೋಕಾಯುಕ್ತ ಎಂಬುದು ಒಂದು ಸ್ವತಂತ್ರ ಸಂಸ್ಥೆ. ಅವರ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಅಲ್ಲಿ ಏನು ತಪ್ಪಾಗಿದೆ ಎಂಬುದರ ಬಗ್ಗೆ ಅವರವರೇ ವ್ಯಾಖ್ಯಾನ ಮಾಡಿಕೊಳ್ಳಬೇಕು. ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ಬಿಜೆಪಿಯವರೇ ಇದರ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಇಕ್ಬಾಲ್ ಹುಸೇನ್‌ಗೆ 'ಬಾಯಿ ಮುಚ್ಚು' ಎಂದ ಡಿಕೆಶಿ!

ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ನೀಡುತ್ತಿರುವ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, 'ಇಕ್ಬಾಲ್ ಹುಸೇನ್ ಬಾಯಿ ಮುಚ್ಚಿಕೊಂಡು ಇರಬೇಕು. ಅಷ್ಟೇ ಅಲ್ಲ, ರವಿ ಮತ್ತು ಶಿವಗಂಗಾ ಬಸವರಾಜ್ ಕೂಡ ಅನಗತ್ಯವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಅವರು ಸುಮ್ಮನಿದ್ದರೆ ನನಗೂ ಒಳ್ಳೆಯದು, ಪಕ್ಷಕ್ಕೂ ಒಳ್ಳೆಯದು ಎಂದು ಸ್ವಪಕ್ಷದ ಶಾಸಕರಿಗೇ ಬಹಿರಂಗವಾಗಿ ಕ್ಲಾಸ್ ತಗೆದುಕೊಂಡರು.

ವಿದೇಶ ಪ್ರವಾಸದ ಬಗ್ಗೆ ಹೈಕಮಾಂಡ್ ಹದ್ದಿನ ಕಣ್ಣು

ಇದೇ ವೇಳೆ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ವಿದೇಶ ಪ್ರವಾಸಕ್ಕೆ ಹೋದವರೆಲ್ಲರೂ ನಮ್ಮವರೇ. ಅದರಲ್ಲಿ ಯಾವುದೇ ಗುಟ್ಟಿಲ್ಲ. ಆದರೆ ಅವರು ವಾಪಸ್ ಬಂದ ತಕ್ಷಣ, ಅವರು ಯಾವ ಉದ್ದೇಶಕ್ಕಾಗಿ ಹೋಗಿದ್ದರು, ಅಲ್ಲಿ ಏನು ಮಾಡಿದರು ಎಂಬುದನ್ನು ಖುದ್ದಾಗಿ ಕೇಳಿ ಸ್ಪಷ್ಟನೆ ಪಡೆಯುತ್ತೇವೆ' ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

ಸ್ವತಂತ್ರ ಲೋಕಾಯುಕ್ತ: ಕ್ರಮ ಅನಿವಾರ್ಯ

ಲೋಕಾಯುಕ್ತ ಕಾರ್ಯಾಚರಣೆಯ ಬಗ್ಗೆ ಮಾತನಾಡುತ್ತಾ, 'ಪ್ರಕರಣ ದಾಖಲಾದ ಮೇಲೆ ಕಾನೂನುಬದ್ಧವಾಗಿ ಕ್ರಮ ಜರುಗುವುದು ಅನಿವಾರ್ಯ. ನಾವು ಯಾರ ಪರವಾಗಿಯೂ ಮಾತನಾಡುವುದಿಲ್ಲ ಅಥವಾ ಯಾರ ವಿಚಾರಕ್ಕೂ ಹೋಗುವುದಿಲ್ಲ. ಕಾನೂನು ತನ್ನ ಕೆಲಸ ತಾನು ಎಂದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲಂಚ ಪಡೆದು ಶಾಸಕ ಲಮಾಣಿ ಜೈಲಿಗೆ, ಇದರ ಬೆನ್ನಲ್ಲೇ ಗುತ್ತಿಗೆದಾರನಿಗೆ ಧಮ್ಕಿ ಹಾಕೋ ಆಡಿಯೋ ವೈರಲ್, ಎಲ್ಲಾ ಬೀಪ್ ಸೌಂಡ್!
ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಲು ಚಿಂತನೆ, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಕುಲಪತಿಗಳ ತೀವ್ರ ವಿರೋಧ