
ಬೆಂಗಳೂರು (ಜ.28): ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಿದ್ದಾರೆ. ಗ್ಯಾರಂಟಿ ಫ್ರೀ ಕೊಡ್ತಿದ್ದೇವೆ, ಬೆಂಗಳೂರಿನ ಹಲವು ಏರಿಯಾಗಳಲ್ಲಿ ನೀರು ಫ್ರೀಯಾಗಿ ಕೊಡ್ತಿದ್ದೇವೆ ಎಲ್ಲ ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಸಬೇಕು? ಇನ್ಮೇಲೆ ಫ್ರೀಯಾಗಿ ಕೊಡೋಕೆ ಆಗೋಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಉಚಿತ ಯೋಜನೆಗಳಿಂದ ಸರ್ಕಾರಕ್ಕಾಗಿರುವ ಹೊರೆ ಬಗ್ಗೆ ನೋವು ಹೊರಹಾಕಿದ್ದಾರೆ.
ಇಂದು ಕಾವೇರಿ ಭವನದಲ್ಲಿ ಡಿಸಿಎಂ ಡಿಕೆ ಶಿವಕುಮಾರ ನೇತೃತ್ವದಲ್ಲಿ ನಡೆದ ಬಿಬಿಎಂಪಿ, ಬಿಡಿಎ,BWSSB ಅಧಿಕಾರಿಗಳ ಜೊತೆಗಿನ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಾರೆ, ವಿದ್ಯುತ್ ಫ್ರೀ, ನೀರು ಫ್ರೀ ಅಂದ್ರೆ ಹೇಗೆ ಒಂದು ಪೈಸೆ ಆದ್ರೂ ಬಿಲ್ ಕಟ್ಟಬೇಕಲ್ವ? ಎಲ್ಲಾ ಸರಿದೂಗಿಸಿಕೊಂಡು ಹೋಗಬೇಕಲ್ವಾ? ಎಲ್ಲನೂ ಫ್ರೀ ಕೊಟ್ಟರೆ ಸರ್ಕಾರ ನಡೆಸೋದು ಹೇಗೆ? ಇನ್ಮೇಲೆ ಫ್ರೀ ಕೊಡೋಕಾಗೋಲ್ಲ. ಶೀಘ್ರವೇ ನೀರಿನ ದರ ಏರಿಕೆ ಮಾಡೋಕೆ ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ: 'ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಶತಸಿದ್ಧ..' ಎಂದ ಜೈನ ಮಹಾಮುನಿ
ಬೇಸಿಗೆ ಶುರುವಾಗ್ತಿದೆ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಕಳೆದ ಬಾರಿ ನೀರಿನ ಅಭಾವದಿಂದ ದೊಡ್ಡ ಮಟ್ಟದಲ್ಲಿ ನೀರಿನ ಸಮಸ್ಯೆ ಆಗಿತ್ತು. ಆದ್ರೆ ಈ ಭಾರಿ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನೂ ಜಲಮಂಡಳಿ ವಾರ್ಷಿಕವಾಗಿ 1 ಸಾವಿರ ಕೋಟಿ ನಷ್ಷದಲ್ಲಿದೆ. ನಷ್ಟ ಸರಿದೂಗಿಸಲು ಹಾಗೂ ಸಂಸ್ಥೆ ಉಳಿಯಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ಇನ್ನೂ ಕೆಲ ಮನೆಗಳು ಮತ್ತು ಅಪಾರ್ಟ್ಮೆಂಟ್ ಗಳಲ್ಲಿ ನೀರಿನ ಹೊಸ ಕನೆಕ್ಷನ್ ತಗೊಂಡಿಲ್ಲ. ಇದುವರೆಗೂ ಕೆವಲ 15 ಸಾವಿರ ಹೊಸ ಕನೆಕ್ಷನ್ ಕೊಡಲಾಗಿದೆ. ಅಪಾರ್ಟ್ಮೆಂಟ್ ನವರು ಕೂಡ ಕನೆಕ್ಷನ್ ತಗೋಬೇಕಾಗುತ್ತೆ. ಪ್ರತಿ ಮನೆಗೆ ಹೋಗಿ ಅಪಾರ್ಟ್ಮೆಂಟ್ ಹೋಗಿ ಕನೆಕ್ಷನ್ ಕೊಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜಲಮಂಡಳಿಗೆ ವರ್ಷಕ್ಕೆ 1 ಸಾವಿರ ಕೋಟಿ ಲಾಸ್ ಆಗ್ತದೆ. ಇದರಿಂದ ಬ್ಯಾಂಕ್ ನವರು ಕೂಡ ಇದೀಗ ಲೋನ್ ಕೊಡಲು ಒಪ್ಪುತ್ತಿಲ್ಲ. ಒಂದು ಲೀಟರ್ ಗೆ ಒಂದು ಪೈಸೆ ನಾದ್ರೂ ಕೊಟ್ಟು ಸಹಕರಿಸಬೇಕು. ಬಡವರಾಗಿರಬಹುದು ಸ್ಲಾಮ್ ನವರು ಆಗಿರಬಹುದು ಒಂದು ಪೈಸೆನಾದ್ರೂ ಕೊಟ್ಟು ನೀರು ಬಳಕೆ ಮಾಡಬೇಕು ಎಲ್ಲನೂ ಫ್ರೀ ಕೊಡೋಕೆ ಆಗೋಲ್ಲ ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ತ್ಯಾಗದ ಪಾಲಿಟಿಕ್ಸ್ | Belagavi Congress Session 2025 | Suvarna News Hour
2014ರ ನಂತರ ನೀರಿನದ ದರ ಏರಿಕೆ ಮಾಡಿಲ್ಲ. ತಿಂಗಳಿಗೆ 85 ಕೋಟಿಯಂತೆ ವಾರ್ಷಿಕ ಸಾವಿರಾರು ಕೋಟಿ ರೂಪಾಯಿ ಜಲಮಂಡಳಿಗೆ ನಷ್ಟವಾಗ್ತಿದೆ. ಹೀಗಾಗಿ ಈ ಬಾರಿ ನೀರಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಶೀಘ್ರವೇ ನೀರಿನ ದರ ಏರಿಕೆ ಮಾಡಲಾಗುತ್ತದೆ. ಇಲ್ಲದಿದ್ರೆ ಜಲಮಂಡಳಿ ಉಳಿಯೋಲ್ಲ. ಜಲಮಂಡಳಿ ಉಳಿಸಬೇಕು ಎಂದರೆ ನೀರಿನ ದರ ಅನಿವಾರ್ಯವಾಗಿದೆ ಎಂದರು.
ಸಭೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ, ಎಸಿಎಸ್ ಉಮಾಶಂಕರ್, ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮುನಿಶ್ ಮೌದ್ಗೀಲ್, ಬಿ ಡಬ್ಲ್ಯೂ ಎಸ್ ಎಸ್ ಬಿ ಚೇರ್ಮನ್ ಡಾ ರಾಮಪ್ರಸಾತ್ ಮನೋಹರ್, ಡಿಸಿಎಂ ಕಾರ್ಯದರ್ಶಿ, ಬಿಎಂಆರ್ಡಿಎ ಕಮಿಷನರ್ ರಾಜೇಂದ್ರ ಚೋಳನ್ ಭಾಗಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ