
ಶಿವಮೊಗ್ಗ (ಮಾ.03): ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಬಿಡುಗಡೆಯಾಗಿದ್ದು ಈ ಸಂಬಂಧ ಡಿಸಿಎಂ ಅಶ್ವತ್ಥ್ ನಾರಾಯಣ್ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ ಇದು ಒಳ್ಳೆಯ ಉದ್ದೇಶ ದಿಂದ ಮಾಡುವ ಕೆಲಸವಲ್ಲ. ದುರುದ್ದೇಶದಿಂದ , ಪಿತೂರಿ, ಬ್ಲಾಕ್ ಮೇಲಿಂಗ್ , ಹನಿ ಟ್ರ್ಯಾಪಿಂಗ್ ಮಾಡ್ತಾರೆ. ಹಾಗಾಗಿ ಇದೆಷ್ಟು ಒಳ್ಳೆಯ ವಿಚಾರ ಎಂದು ಪ್ರತಿಕ್ರಿಯೆ ನೀಡಲು ಕಷ್ಟವಾಗಿದೆ ಎಂದರು.
ರಾಸಲೀಲೆ ವಿಡಿಯೋ ಬಹಿರಂಗ: ನಾನವನಲ್ಲ ಎಂದ ಜಲ ಸಚಿವ ರಮೇಶ್ ಜಾರಕಿಹೊಳಿ! ..
ಇನ್ನು ಈ ಪ್ರಕರಣ ದಲ್ಲಿ ಯಾರ ತಂತ್ರ, ಕುತಂತ್ರ ಇದೆಯೋ, ದುರುದ್ದೇಶ ಇದೆಯೋ ಎಂದು ಈಗಲೇ ಹೇಳಲಾಗುವುದಿಲ್ಲ. ರಾಜಕೀಯ ದುರುದ್ದೇಶದಿಂದ ಮಾಡಿದ್ದಾರೋ? ಸತ್ಯವೋ? ಸುಳ್ಳೋ ? ಗೊತ್ತಿಲ್ಲ. ಸತ್ಯ, ಅಸತ್ಯದ ಬಗ್ಗೆ ಕಾಲವೇ ಉತ್ತರ ನೀಡುತ್ತದೆ. ಈ ಬಗ್ಗೆ ತನಿಖೆ ಆಗಲಿ, ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
"
ಸರ್ಕಾರಕ್ಕೆ ಈ ಪ್ರಕರಣ ಧಕ್ಕೆ ತರುವುದಿಲ್ಲ , ಸರಿ ಇದ್ದರೆ ತಾನೇ ಧಕ್ಕೆ ಆಗೋದು. ಈ ಪ್ರಕರಣ ಸತ್ಯನೋ ಸುಳ್ಳೋ ಯಾರಿಗೆ ಗೊತ್ತಿದೆ. ಆಪಾದನೆ ಮಾಡಿರುವ ಬಗ್ಗೆ ರಮೇಶ್ ಜಾರಕಿಹೊಳಿ ಮಾತನಾಡೋದು ಸೂಕ್ತ ಎನಿಸುತ್ತದೆ. ಈ ಪ್ರಕರಣದ ಬಗ್ಗೆ ಈಗಲೇ ಜಡ್ಜ್ ಮೆಂಟ್ ಕೊಡೊದು, ನಿರ್ಣಯ ಕೊಡೊದು ಸೂಕ್ತ ಅಲ್ಲ ಎಂದು ಡಿಸಿಎಂ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ