ಗಂಡನ ಮನೆಗೆ ಹೋಗುವಂತೆ ತಾಯಿ ಬುದ್ಧಿವಾದ ಹೇಳಿದ ಮಾತಿಗೆ ಮನನೊಂದು ಮಗಳು ಐಶ್ವರ್ಯಾ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಉಪ್ಪಾರ ಬೀದಿಯಲ್ಲಿ ನಡೆದಿದೆ.
ತುಮಕೂರು (ನ.14): ಇತ್ತೀಚಿನ ದಿನಗಳಲ್ಲಿ ಯಾವ್ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವುದೇ ತಿಳಿಯುತ್ತಿಲ್ಲ. ಒಂದು ಸಣ್ಣ ಕಾರಣಕ್ಕೂ ಜೀವ ಕಳೆದುಕೊಳ್ಳುವಂತಹ ಅನೇಕ ಘಟನೆಗಳು ನಮ್ಮೆದುರಿಗೆ ನಡೆಯುತ್ತಿವೆ. ಇಂತಹ ಘಟನೆಗಳಿಗೆ ಸೇರ್ಪಡೆ ಆಗುವಂತೆ ತಾಯಿಯೊಬ್ಬರು ಮಗಳಿಗೆ ಗಂಡನೆ ಮನೆಗೆ ಹೋಗು ಎಂದು ಹೇಳಿದ್ದಕ್ಕೆ ಮನನೊಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉಪ್ಪಾರ ಬೀದಿ (Uppar Street)ಯಲ್ಲಿ ನಡೆದಿದೆ. ಅಮ್ಮನ ಬುದ್ಧಿವಾದದ (wisdom)ಮಾತನ್ನು ಕೇಳದೇ ಐಶ್ವರ್ಯ (20) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ (House wife)ಆಗಿದ್ದಾಳೆ. ಐಶ್ವರ್ಯಳನ್ನು ಕುಣಿಗಲ್ ತಾಲೂಕಿನ ಅಮೃತೂರಿನ (Amruthur)ಅನಿಲ್‌ಕುಮಾರ್‌ನೊಂದಿಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. 2021 ರಲ್ಲಿ ಐಶ್ವರ್ಯ ಗರ್ಭಿಣಿಯಾಗಿದ್ದಳು. ಈ ವೇಳೆ ಅವಳ ಮೈದುನ ಹಾಗೂ ನಾದಿನಿಗೆ ಕೊರೊನಾ (Covid-19) ಸೊಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪತಿ ಅನಿಲ್‌ಕುಮಾರ್ ಪತ್ನಿ ಐಶ್ವರ್ಯಯಳನ್ನು ಕುಣಿಗಲ್ ನ ಉಪ್ಪಾರಬೀದಿಯಲ್ಲಿರುವ ತವರು ಮನೆಗೆ ಬಿಟ್ಟು ಹೋಗಿದ್ದರು. ನಂತರ ಕೆಲವು ದಿನಗಳಲ್ಲಿ ತವರು ಮನೆಯಲ್ಲೇ ಐಶ್ವರ್ಯಳಿಗೆ ಹೆರಿಗೆ ಆಯಿತು.
undefined
ಅತ್ತೆ ಮಾವನನ್ನು ನೋಡಿಕೊಳ್ಳುವ ವಿಚಾರಕ್ಕೆ ಗಲಾಟೆ, ಸೊಸೆ ಕಾಟಕ್ಕೆ ತಾಯಿ ಮಗ ಆತ್ಮಹತ್ಯೆ!
ಬುದ್ಧಿಮಾತು ಕೇಳದೆ ಆತ್ಮಹತ್ಯೆ:
ಹೆರಿಗೆ ಆಗಿ ಹಲವು ತಿಂಗಳು ಕಳೆದರು ಐಶ್ವರ್ಯ ಗಂಡನ ಮನೆಗೆ ಗೊಗಲಿಲ್ಲ. ಎಷ್ಟಿದ್ದರೂ ಮದುವೆಯಾದ ಮಗಳು ತಾಯಿಯ ಮನೆಯಲ್ಲಿ ಇರುವುದನ್ನು ನೋಡಿ ನೆರೆಹೊರೆಯವರು (Neighbors) ಆಡಿಕೊಳ್ಳುವುದು ಹೆಚ್ಚು. ಈ ತರಹ ಬೇರೆಯವರು ಮಗಳ ಬಗ್ಗೆ ಆಡಿಕೊಳ್ಳುವಂತೆ ಆಗಬಾರದು ಎಂಬ ಮುಂದಾಲೋಚನೆಯಿಂದ, ಐಶ್ವರ್ಯಳ ತಾಯಿ, ನೀನು ಗಂಡನ ಮನೆಗೆ ಹೋಗು ಎಂದು ಬುದ್ದಿವಾದ ಹೇಳಿದ್ಧಾರೆ. ಈ ಮಾತಿನಿಂದ ಬೇಸರಗೊಂಡ ಐಶ್ವರ್ಯ, ತಾಯಿ ಮದುವೆಗೆ ಹೋಗಿದ್ದ ವೇಳೆಯಲ್ಲಿ ಮನೆಯಲ್ಲಿ ಯಾರು ಇಲ್ಲದಿರುವಾಗ ಕೋಣೆಯಲ್ಲಿ ಕುತ್ತಿಗೆಗೆ ನೇಣಿ ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ. ಈ ಘಟನೆ ಬಗ್ಗೆ ತಾಯಿ ಕುಣಿಗಲ್ (Kunigal) ಪೊಲೀಸ್ ಠಾಣೆಗೆ ತಾಯಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ (Enquiry) ಕೈಗೊಂಡಿದ್ದಾರೆ.