ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ಗೆ ಶಸ್ತ್ರಚಿಕಿತ್ಸೆಗಾಗಿ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. 7 ಷರತ್ತುಗಳನ್ನು ಪಾಲಿಸುವಂತೆ ಕೋರ್ಟ್ ಸೂಚಿಸಿದೆ.
ಬೆಂಗಳೂರು (ಅ.30): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬರೋಬ್ಬರಿ 131 ದಿನಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ ತೂಗುದೀಪಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕೋರ್ಟ್‌ನಿಂದ 6 ವಾರಗಳ ಕಾಲ ಮದ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಆದರೆ, ಜಾಮೀನು ಪಡೆದು ಹೊರಗೆ ಹೋಗುವ ಮುನ್ನ 7 ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ.
ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ನಂತರ ಅದನ್ನು ಮುಚ್ಚಿಹಾಕಲು 30 ಲಕ್ಷ ರೂ. ಹಣ ಕೊಟ್ಟು ಮೂವರನ್ನು ಪೊಲೀಸರಿಗೆ ಸರೆಂಡರ್ ಮಾಡಿಸಿದ್ದ ನಟ ದರ್ಶನ್‌ಗೆ ಆತನ ಪಾಪ ಬೆನ್ನು ಬಿಡಲಿಲ್ಲ. ನಟ ದರ್ಶನ್‌ನನ್ನು ಕೊಲೆ ಕೇಸಿನಿಂದ ರಕ್ಷಣೆ ಮಾಡುವುದಕ್ಕೆಂದು ಪೊಲೀಸರಿಗೆ ಸರೆಂಡರ್ ಆದವರೇ ನಟನ ಹೆಸರನ್ನು ಬಾಯಿ ಬಿಟ್ಟಿದ್ದರು. ಇದರ ಬೆನ್ನಲ್ಲಿಯೇ ಪೊಲೀಸರು ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ ಬರೋಬ್ಬರಿ 17 ಜನರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಆದರೆ, ನಟ ದರ್ಶನ್‌ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಲ್ಲಿನ ರೌಡಿಶೀಟರ್‌ಗಳಿಂದ ಐಷಾರಾಮಿ ವ್ಯವಸ್ಥೆಗಳು ಲಭ್ಯವಾದ ಬೆನ್ನಲ್ಲಿಯೇ ಆತನನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ರವಾನಿಸಲಾಗಿತ್ತು.
undefined
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವಾಗ ಪೊಲೀಸರಿಂದ ಕೊಲೆ ಕೇಸಿಗೆ ಸಂಬಂಧಿಸಿದಂತೆ 3,990ಕ್ಕೂ ಅಧಿಕ ಪುಟಗಳ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಕೆ ಮಾಡಲಾಗುತ್ತದೆ. ಇದರ ನಂತರ ಜಾಮೀನು ಮಂಜೂರು ಮಾಡುವಂತೆ ನಟ ದರ್ಶನ್ ಸೇರಿದಂತೆ 8 ಜನರು ಕೋರ್ಟ್‌ಗೆ ಅರ್ಜಿ ಹಾಕುತ್ತಾರೆ. ಆದರೆ, ಆಗ ನಟ ದರ್ಶನ್ ಹಾಗೂ ಆತನ ಸ್ನೇಹಿತೆ ನಟಿ ಪವಿತ್ರಾ ಗೌಡಗೆ ಜಾಮೀನು ಮಂಜೂರು ಮಾಡುವುದಕ್ಕೆ ನಿರಾಕರಣೆ ಮಾಡಲಾಯಿತು. ಇದರ ಬೆನ್ನಲ್ಲಿಯೇ ನಟ ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ವಿಪರೀತ ಬೆನ್ನುನೋವು ಕಾಣಿಸಿಕೊಂಡಿದ್ದರಿಂದ ಚಿಕತ್ಸೆಗಾಗಿ ಬೆಂಗಳೂರಿಗೆ ಹೋಗಲು ಅವಕಾಶ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಲಾಯಿತು. ಆದರೆ, ಕೋರ್ಟ್‌ನಿಂದ ಇದಕ್ಕೆ ಅವಕಾಶ ಕೊಡದೇ ಬಳ್ಳಾರಿಯಲ್ಲಿಯೇ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವಂತೆ ಆದೇಶ ನೀಡಿತು.
ಇದನ್ನೂ ಓದಿ: Breaking: ದರ್ಶನ್‌ಗೆ ಜಾಮೀನು ನೀಡಿದ ಹೈಕೋರ್ಟ್
ಬಳ್ಳಾರಿಯ ವಿಮ್ಸ್ ವೈದ್ಯರ ತಪಾಸಣೆಯ ನಂತರ ನಟ ದರ್ಶನ್‌ಗೆ ಬೆನ್ನು ಹುರಿಯಲ್ಲಿ ತೀವ್ರ ಸಮಸ್ಯೆ ಉಂಟಾಗಿದ್ದು, ಸಕಾಲಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ಪ್ಯಾರಾಲಿಸಿಸ್, ಸ್ಟ್ರೋಕ್ ಹಾಗೂ ನಂಬ್ನೆಸ್ (ಮರಗಟ್ಟುವಿಕೆ) ಕಾಯಿಲೆ ಬರಬಹುದು ಎಂದು ವೈದ್ಯರು ಕೊಟ್ಟ ವರದಿಯನ್ನು ಕೋರ್ಟ್ ಮುಂದಿಟ್ಟು ಚಿಕಿತ್ಸೆ ಪಡೆಯುದಕ್ಕೆ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಯಿತು. ಇನ್ನು ಕೋರ್ಟ್‌ನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ನೀಡಿದರೂ ನಿರಾಕರಣೆ ಮಾಡಿದ್ದು, ನಟ ದರ್ಶನ್ ಸೂಚಿಸಿದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು.
ಹೈಕೋರ್ಟ್‌ನಿಂದ ಬುಧವಾರ ನಟ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಪ್ರತಿ ವಾರವೂ ಚಿಕಿತ್ಸೆ ಪಡೆದಿದ್ದ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಇನ್ನು ಮಧ್ಯಂತರ ಜಾಮೀನು ಮಂಜೂರು ಮಾಡಿದ ಬೆನ್ನಲ್ಲಿಯೇ ಈತ ವಿದೇಶಕ್ಕೆ ಹಾರಿ ಹೋಗಬಹುದು ಅಥವಾ ಕೊಲೆ ಕೇಸಿನ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ಅನುಮಾನದಿಂದ ಕೋರ್ಟ್‌ನಿಂದ 7 ಷರತ್ತುಗಳನ್ನು ವಿಧಿಸಲಾಗಿದೆ.
ನಟ ದರ್ಶನ್ ಮಧ್ಯಂತರ ಜಾಮೀನಿಗೆ ಕೊಟ್ಟ ಸಪ್ತ ಷರತ್ತುಗಳು.
ಇದನ್ನೂ ಓದಿ : ದರ್ಶನ್‌ಗೆ ಜಾಮೀನು ಸಿಕ್ಕಿದ್ದೇ ಈ ದೇವರಿಂದ! ವಿಶೇಷ ನಮನ ಸಲ್ಲಿಸಿದ ವಿಜಯಲಕ್ಷ್ಮೀ, ಮಹಾ ಕಾರಣಿಕದ ಆ ದೇವತೆ ಯಾರು?
ನಟ ದರ್ಶನ್‌ಗೆ ಕೋರ್ಟ್‌ನಿಂದ ಜಾಮೀನು ಮಂಜೂರು ಆಗುತ್ತಿದ್ದಂತೆಯೇ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಕಾಮಾಕ್ಯ ಶಕ್ತಿಪೀಠದ ಫೋಟೋವನ್ನು ಹಂಚಿಕೊಂಡು ಧನ್ಯವಾದವನ್ನು ಅರ್ಪಿಸಿದ್ದಾರೆ.