
ಚಿಕ್ಕಮಗಳೂರು (ಮಾ.11) : ಪಕ್ಷ ದ್ರೋಹ ಮಾಡಿದರೆ ಅವರವರ ಕರ್ಮ ಅವರ ಬೆನ್ನು ಹಿಡಿದು ಕಾಡುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿಯವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಸೇರಿ ಸಿ.ಟಿ.ರವಿ ಅವರನ್ನು ಶೋಭಾ ಕರಂದ್ಲಾಜೆ ಸೋಲಿಸಿದರು ಎಂಬ ಸಾರ್ವಜನಿಕ ಚರ್ಚೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.
ಬಿಜೆಪಿ ಕಛೇರಿಯಲ್ಲಿ ಮತ್ತೆ 'ಗೋ ಬ್ಯಾಕ್ ಶೋಭಾ' ಘೋಷಣೆ; ಟಿಕೆಟ್ ಬದಲಾವಣೆಗೆ ಕಾರ್ಯಕರ್ತರು ಪಟ್ಟು!
ಇದನ್ನು ನಾನು ಸಾರ್ವಜನಿಕ ಚರ್ಚೆ ವಿಷಯವಾಗಿ ಮಾಡಲು ಬಯಸುವುದಿಲ್ಲ, ನನ್ನ ಗ್ರಹಚಾರ ಸರಿ ಇರಲಿಲ್ಲ, ನನ್ನದೇ ತಪ್ಪಿರಬಹುದೆಂದು ಈಗಾಗಲೇ ಹೇಳಿದ್ದೇನೆ ಎಂದರು.
ನಾನು ಇನ್ನೊಬ್ಬರ ಕಡೆ ಬೊಟ್ಟು ಮಾಡಿ ತೋರಿಸಲು ಹೋಗುವುದಿಲ್ಲ, ಅವರ ಕರ್ಮವನ್ನು ಅವರೇ ಅನುಭವಿಸಬೇಕು. ನನ್ನ ತಪ್ಪಿನಿಂದ ಸೋತಿದ್ದೇನೆಂದು ಈಗಾಗಲೇ ಹೇಳಿಕೊಂಡಿದ್ದೇನೆ. ಯಾರಾದರೂ ಪಕ್ಷದ್ರೋಹ ಕೆಲಸ ಮಾಡಿದ್ದರೆ ಅವರ ಕರ್ಮ ಅವರ ಬೆನ್ನು ಹಿಡಿದು ಕಾಡುತ್ತದೆ. ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ಇಚ್ಚಿಸುವುದಿಲ್ಲ ಎಂದರು.
ಗೋ ಬ್ಯಾಕ್ ಅಭಿಯಾನದಿಂದ ನನಗೆ ಅನುಕೂಲ ಆಗಿದೆ: ಶೋಭಾ ಕರಂದ್ಲಾಜೆ
ಮೆಡಿಕಲ್ ಕಾಲೇಜು ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ನಿರ್ಮಾಣ, ಕೆರೆ ತುಂಬಿಸುವ ಯೋಜನೆಗಳು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರಿಂದ ಜನ ನನ್ನನ್ನು ಕೈ ಬಿಡುವುದಿಲ್ಲ ಎಂಬ ಅತಿಯಾದ ವಿಶ್ವಾಸ ಇತ್ತು. ಅತಿಯಾದ ವಿಶ್ವಾಸ ಕೂಡ ಹೀಗೊಮ್ಮೆ ಸೋಲಿಗೆ ಕಾರಣ ಆಗುತ್ತದೆ ಎಂದು ಕೊಂಡಿರಲಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ