ಸಾವರ್ಕರ್ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸತ್ಯ ಗೊತ್ತಾಗಬೇಕಿದ್ದು ಕೂಡಲೇ ಅವರು ಸಾವರ್ಕರ್ ಅವರ ಆತ್ಮಕಥನವಾದ ‘ಆತ್ಮಾಹುತಿ’ ಓದಬೇಕು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಬೆಂಗಳೂರಿಗೆ ಹೋಗಿ ಸಿದ್ದರಾಮಯ್ಯನವರಿಗೆ ‘ಆತ್ಮಾಹುತಿ’ ಪುಸ್ತಕ ಕಳುಹಿಸಿ ಕೊಡುತ್ತೇನೆ. ಸಾವರ್ಕರ್ ಬಗ್ಗೆ ಚರ್ಚೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಧಾರವಾಡ(ಅ.24): ಸಾವರ್ಕರ್ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸತ್ಯ ಗೊತ್ತಾಗಬೇಕಿದ್ದು ಕೂಡಲೇ ಅವರು ಸಾವರ್ಕರ್ ಅವರ ಆತ್ಮಕಥನವಾದ ‘ಆತ್ಮಾಹುತಿ’ ಓದಬೇಕು. ಆತ್ಮಕಥನ ಓದಿ, ಸಾವರ್ಕರ್ ಯಾವ ಕಾರಣಕ್ಕಾಗಿ ಅಭಿನವ ಭಾರತ ಸಂಘಟನೆ ಕಟ್ಟಿದರು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಹೋಗಿ ಸಿದ್ದರಾಮಯ್ಯನವರಿಗೆ ‘ಆತ್ಮಾಹುತಿ’ ಪುಸ್ತಕ ಕಳುಹಿಸಿ ಕೊಡುತ್ತೇನೆ. ಸಾವರ್ಕರ್ ಬಗ್ಗೆ ಚರ್ಚೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಧಾರವಾಡ: ಪ್ರವಾಸೋದ್ಯಮ ನೀತಿ ರೂಪಿಸಲು ಚಿಂತನೆ
ಸಾವರ್ಕರ್‌ಗೆ ಉಗಿದರೆ ಅದು ಅವರ ಮುಖಕ್ಕೆ ತಾವೇ ಉಗಿದುಕೊಂಡಂತಾಗುತ್ತದೆ. ಇವರು ಸಾವರ್ಕರ್ ಬಗ್ಗೆ ಮಾತನಾಡಿ ತಮಗೆ ತಾವೇ ಅಪಮಾನ ಮಾಡಿಕೊಳ್ಳುತ್ತಿದ್ದಾರೆ. ಗಾಂಧೀಜಿ ಮೇಲೆ ಗೋಡ್ಸೆ ಗುಂಡು ಹಾರಿಸಿರುವುದು ಸತ್ಯ. ಆದರೆ, ಗಾಂಧೀಜಿಯನ್ನು ಜನಮಾನಸದಿಂದ ದೂರ ಮಾಡಿದವರು ಯಾರು? ಈ ಬಗ್ಗೆಯೂ ಚರ್ಚೆ ಆಗಬೇಕಿದೆ ಎಂದಿದ್ದಾರೆ.
undefined
ಯಾವ ಕಾಂಗ್ರೆಸ್ಸಿಗರು ಗಾಂಧೀಜಿಯವರ ಹೆಸರು ಇಟ್ಟುಕೊಂಡಿದ್ದಾರೋ ಅವರೇ ಗಾಂಧೀಜಿ ತತ್ವಗಳ ಅಡಿ ಬದುಕುತ್ತಿದ್ದಾರಾ? ಎಂಬುದು ಸಹ ಚರ್ಚೆಯಾಗಬೇಕು. ಗಾಂಧೀಜಿಯವರ ಪಕ್ಷ ನಮ್ಮದು ಎಂದು ಗಾಂಧೀಜಿಯ ರಾಜಕೀಯ ವಾರಸುದಾರರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು ನಿಜಕ್ಕೂ ಅವರ ತತ್ವದ ವಾರಸುದಾರರೇ ಎಂದು ಪ್ರಶ್ನಿಸಿದ್ದಾರೆ.