
ಚಿಕ್ಕಮಗಳೂರು (ಡಿ.5): ದ್ವೇಷ ಭಾಷಣ (Hate Speech) ನಿಯಂತ್ರಣಕ್ಕೆ ಮಸೂದೆ ಜಾರಿಗೆ ತರುವ ವಿಚಾರದ ಕುರಿತು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ಸಿಟಿ ರವಿ ಅವರು ಕಾಂಗ್ರೆಸ್ ಮತ್ತು 'ಇಂಡಿಯಾ' ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದ್ವೇಷ ಭಾಷಣದ ವಿರುದ್ಧ ಮಸೂದೆ ತರುವ ಮೊದಲು ಡಿಎಂಕೆ ಪಕ್ಷವನ್ನು ಮೈತ್ರಿಕೂಟದಿಂದ ಹೊರಹಾಕಲಿ ಎಂದು ಅವರು ಸವಾಲು ಹಾಕಿದ್ದಾರೆ.
ಇತ್ತೀಚೆಗೆ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಸಿದ್ದ ಡಿಎಂಕೆ ನಾಯಕರ ಹೇಳಿಕೆಯನ್ನು ಪ್ರಸ್ತಾಪಿಸಿದ ಸಿ.ಟಿ.ರವಿ ಅವರು, ಮೊದಲು ಇಂಡಿಯಾ ಅಲೈಯನ್ಸ್‌ನಿಂದ ಡಿಎಂಕೆ ಪಕ್ಷವನ್ನು ಹೊರಹಾಕಲಿ. ಸನಾತನ ಧರ್ಮವನ್ನು ಡೆಂಗ್ಯೂ-ಮಲೇರಿಯಾಗೆ ಹೋಲಿಸಿದವರ ಜೊತೆ ಮೈತ್ರಿ ಮಾಡಿಕೊಂಡವರಿಗೆ ದ್ವೇಷ ಭಾಷಣ ನಿಯಂತ್ರಣಕ್ಕೆ ಮಸೂದೆ ತರುವ ನೈತಿಕತೆ ಏನಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಮಸೂದೆ ತರುವ ಕಾಂಗ್ರೆಸ್ ಸರ್ಕಾರದ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ನೇರ ಸವಾಲು ಸವಾಲು ಹಾಕಿದ ಸಿಟಿ ರವಿ ಅವರು, ಇವರಿಗೆ(ಕಾಂಗ್ರೆಸ್) ತಾಕತ್ತಿದ್ದರೆ, ದ್ವೇಷವನ್ನೇ ಹುಟ್ಟಿಸಿಕೊಂಡು ಹುಟ್ಟಿರುವ ಮತಗಳು ಮತ್ತು ಮತಗ್ರಂಥಗಳನ್ನ ಮೊದಲು ನಿಷೇಧಿಸಲಿ. ಮತಗ್ರಂಥಗಳ ಹೆಸರಿನಲ್ಲಿ ಎಷ್ಟು ಭಯೋತ್ಪಾದನೆ ನಡೆದಿದೆ? ಎಳೆ ಮಕ್ಕಳಿಗೆ ದ್ವೇಷವನ್ನು ಕಲಿಸುತ್ತಿದ್ದಾರೆ. ಇದರ ಬಗ್ಗೆ ಎಲ್ಲ ಆಧಾರ ಸಹಿತ ಬಿಚ್ಚಿಡ್ತೀವಿ. ಇವರಿಗೆ ಧಮ್ ಇದ್ರೆ ಆ ಮತಗಳು, ಮತಗ್ರಂಥಗಳನ್ನ ನಿಷೇಧಿಸಲಿ. ಆಧಾರ ಸಹಿತ ನಿರೂಪಿಸಿದ ಮೇಲೆ ನಿಷೇಧ ಮಾಡಬೇಕಲ್ವಾ? ದ್ವೇಷ ಹೇಳಿಕೊಡುವವರನ್ನು ಮೊದಲು ಒದ್ದು ಒಳಗೆ ಹಾಕಬೇಕಲ್ವಾ? ಎಳೆ ಮಕ್ಕಳನ್ನೇ ಭಯೋತ್ಪಾದಕರನ್ನಾಗಿ ಮಾಡುವವರನ್ನು ಒದ್ದು ಒಳಹಾಕಬೇಕಲ್ವಾ? ಆದರೆ ಮಸೂದೆ ತರಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಂತಹ ಧಮ್ ಇದೆಯಾ? ಎಂದು ಪ್ರಶ್ನಿಸಿದರು.
ಧಮ್ ಇದ್ರೆ ಮಾಡಲಿ. ಇಲ್ಲ ಇವರು ಹೇಡಿಗಳು, ಇವರಿಗೆ ಧಮ್ ಇಲ್ಲ ಅನ್ನೋದು ಅರ್ಥವಾಗುತ್ತೆ ಎಂದು ನೇರ ಸವಾಲು ಹಾಕಿದರು. ಈ ಬಗ್ಗೆ ಇಲ್ಲಿ ಮಾತಾಡೋದು ಸೂಕ್ತವಲ್ಲ. ಮಸೂದೆ ಚರ್ಚೆಗೆ ಬಂದಾಗ ತಾವು ಸದನದಲ್ಲಿ ಈ ಎಲ್ಲಾ ವಿಚಾರಗಳನ್ನು ಆಧಾರ ಸಹಿತ ಚರ್ಚೆ ಮಾಡುವುದಾಗಿ ಸಿ.ಟಿ.ರವಿ ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ