ಮೋಟರ್ ಆನ್ ಮಾಡಲು ಕೆರೆಗೆ ಇಳಿದ ರೈತನ ಎಳೆದೊಯ್ದ ಮೊಸಳೆ!

By Ravi Janekal  |  First Published Nov 5, 2023, 8:32 PM IST

ಮೋಟರ್ ಆರಂಭಿಸಲು ಕೆರೆಗೆ ಇಳಿದಿದ್ದ ವೇಳೆ ರೈತನೋರ್ವ ಮೊಸಳೆಗೆ ಬಲಿಯಾದ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ.


ಬಾಗಲಕೋಟೆ (ನ.5): ಮೋಟರ್ ಆರಂಭಿಸಲು ಕೆರೆಗೆ ಇಳಿದಿದ್ದ ವೇಳೆ ರೈತನೋರ್ವ ಮೊಸಳೆಗೆ ಬಲಿಯಾದ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ.

ನಾಗಪ್ಪ (27) ಎಂಬ ರೈತನನ್ನ ಮೊಸಳೆ ಹೊತ್ತೊಯ್ದಿರೋ ಶಂಕೆ. ಇಂದು ಸಹೋದರನ ಜೊತೆಯಲ್ಲಿ ಕೆರೆ ಬಳಿ ತೆರಳಿದ್ದ ರೈತ ನಾಗಪ್ಪ. ಮೋಟರ್ ಆನ್ ಮಾಡಲು ಕೆರೆಗೆ ಇಳಿದಿದ್ದಾನೆ. ಈ ವೇಳೆ ಮೊಸಳೆ ಎಳೆದೊಯ್ದಿರೋ ಬಗ್ಗೆ ಸಹೋದರನಿಂದ ಮಾಹಿತಿ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ. ರೈತ ನಾಗಪ್ಪನ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿಸಿರೋ ಅಗ್ನಿಶಾಮಕ ದಳದ ಸಿಬ್ಬಂದಿ.

Latest Videos

undefined

ಮೊಸಳೆ ಎಳೆದೊಯ್ದ ಬಗ್ಗೆ ಸುದ್ದಿ ಕೇಳಿ ಇತ್ತ ನಾಗಪ್ಪನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕೆರೆಗೆ ದಂಡೆಗೆ ಬಂದು ಕುಳಿತ ಕುಟುಂಬಸ್ಥರು. ನಾಗಪ್ಪನ ಜೀವಂತ ಉಳಿಸಿಕೊಡುವಂತೆ ಕುಟುಂಬಸ್ಥರ ಗೋಳಾಟ.

ವಿಜಯಪುರ: ಕರೆಂಟ್ ಕಾಟಕ್ಕೆ ಬೇಸತ್ತು ಹೆಸ್ಕಾಂ ಕಚೇರಿಗೆ‌ ಮೊಸಳೆ ತಂದು ಬಿಟ್ಟ ರೈತ..!

ವಿರಿಜಾ ನಾಲೆ ಏರಿಮೇಲೆ ಮೊಸಳೆ ಪ್ರತ್ಯಕ್ಷ: ಆತಂಕ

ಶ್ರೀರಂಗಪಟ್ಟಣ: ತಾಲೂಕಿನ ಬೊಮ್ಮೂರು ಅಗ್ರಹಾರ ಬಳಿಯ ವಿರಿಜಾ ನಾಲೆ ಏರಿಮೇಲೆ ಮೊಸಳೆ ಪ್ರತ್ಯೇಕ್ಷಗೊಂಡು ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ತಂದೊಡ್ಡಿದೆ.

ವಿರಿಜಾ ನಾಲೆ ಸಂಪೂರ್ಣವಾಗಿ ಗಿಡ ಗಂಟಿಗಳಿಂದ ಆವರಿಸಿಕೊಂಡಿದೆ. ಶನಿವಾರ ಮಧ್ಯಾಹ್ನ ಭಾರೀ ಗಾತ್ರದ ಮೊಸಳೆ ಕಾಣಿಸಿಕೊಂಡಿದೆ. ಇದರಿಂದ ರೈತರು ಹಾಗೂ ಸಾರ್ವಜನಿಕರು ಭಯಭೀತರಾಗಿ ಸಂಬಂಧಪಟ್ಟ ಅಧಿಕಾರಿಗಳು ಮೊಸಳೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಮ್ಯಾಚ್‌ ನೋಡಲು ಮೊಸಳೆಯೊಂದಿಗೆ ಸ್ಟೇಡಿಯಂಗೆ ಬಂದ ಅಭಿಮಾನಿ: ದಂಗಾದ ಭದ್ರತಾ ಸಿಬ್ಬಂದಿ

ಬೊಮ್ಮೂರು ಗ್ರಾಮದ ಬಳಿಯ ಫನ್‌ಫರ್ಟ್ ಬಳಿಯ ವಿರಿಜಾ ನಾಲೆ ಬಳಿ ಬೆಳಗ್ಗಿನ ವೇಳೆಯಲ್ಲೆ ಮೊಸಳೆ ನಾಲೆ ಏರಿ ಮೇಲೆ ಓಡಾಡುತ್ತಿದ್ದು, ರೈತರು ತಮ್ಮ ಜಮೀನುಗಳಿಗೆ ತೆರಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಈ ನಾಲೆ ಸುತ್ತಲು ಆಳೆತ್ತರದ ಗಿಡಗಂಟಿಗಳು ಬೆಳೆದಿರುವುದ ಮೊಸಳೆ ಅವಿತುಕುಳಿತುಕೊಳ್ಳುವ ಸಾಧ್ಯತೆಗಳಿವೆ. ಸ್ವಚ್ಛಗೊಳಿಸುವ ಜೊತೆಗೆ ಮೊಸಳೆ ಸೆರೆ ಹಿಡಿಯುವಂತೆ ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

click me!