ಸಿಪಿಎಂ ಸಮಾವೇಶ: ಕೇರಳ ಸಿಎಂ ಪಿಣರಾಯಿ ವಿಜಯನ್‌ ಇಂದು ರಾಜ್ಯಕ್ಕೆ ಭೇಟಿ

By Govindaraj S  |  First Published Sep 18, 2022, 3:30 AM IST

ಬಾಗೇಪಲ್ಲಿ ಪಟ್ಟಣದ ಹೊರವಲಯದ ಹೊಸಹುಡ್ಯ ಬಸ್‌ ಡಿಪೋ ಬಳಿ ಭಾನುವಾರ ಸಿಪಿಎಂ ರಾಜ್ಯಮಟ್ಟದ ಸಮಾವೇಶ ನಡೆಯಲಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪಾಲ್ಗೊಳ್ಳಲಿದ್ದಾರೆ. 


ಚಿಕ್ಕಬಳ್ಳಾಪುರ (ಸೆ.18): ಬಾಗೇಪಲ್ಲಿ ಪಟ್ಟಣದ ಹೊರವಲಯದ ಹೊಸಹುಡ್ಯ ಬಸ್‌ ಡಿಪೋ ಬಳಿ ಭಾನುವಾರ ಸಿಪಿಎಂ ರಾಜ್ಯಮಟ್ಟದ ಸಮಾವೇಶ ನಡೆಯಲಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೂ ಮುನ್ನ ಬೆಳಗ್ಗೆ ಪಟ್ಟಣದ ನ್ಯಾಷನಲ್‌ ಕಾಲೇಜಿಂದ ಬೃಹತ್‌ ರೋಡ್‌ ಶೋ ನಡೆಯಲಿದ್ದು, ಸಿಪಿಎಂ ಪಾಲಿಟ್‌ ಬ್ಯುರೋ ಸದಸ್ಯರಾದ ಎಂ.ಎಬೇದಿ, ಬಿ.ವಿರಾಘವುಲು ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶನಿವಾರ ಕೇರಳದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಿಣರಾಯಿ ವಿಜಯನ್‌ರನ್ನು ಜಿಲ್ಲೆಯ ಸಿಪಿಎಂ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.

ಬಾಗೇಪಲ್ಲಿ ಕೆಂಪುಕೋಟೆ ಉಳಿಸಿಕೊಳ್ಳಲು ಇಂದು ಸಿಪಿಎಂ ಸಮಾವೇಶ: ಎರಡು ಬಾರಿ ಸಿಪಿಎಂ ಶಾಸಕರಾಗಿ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನರಾದ ಬಳಿಕ ಮಾರ್ಕ್ಸ್ವಾದಿ ಕಮ್ಯೂನಿಸ್ಟ್‌ ಪಕ್ಷ (ಸಿಪಿಎಂ) ಭಾನುವಾರ ಬಾಗೇಪಲ್ಲಿ ಪಟ್ಟಣದಲ್ಲಿ ಬೃಹತ್‌ ರಾಜಕೀಯ ಸಮಾವೇಶದ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲು ಸಜ್ಜಾಗಿದೆ. 

Tap to resize

Latest Videos

ಅಧಿವೇಶನದಲ್ಲಿ ಯಾವ ಶಾಸಕರು ಏನು ಮಾತನಾಡಿದ್ದಾರೆ?: ದಳಪತಿಗಳ ವಿರುದ್ಧ ಹರಿಹಾಯ್ದ ಸುಮಲತಾ

ರಾಜಕೀಯ ಸಮಾವೇಶದ ಹಿನ್ನಲೆಯಲ್ಲಿ ಕೆಂಬಾವುಟಗಳ ರಾರಾಜಿಸುತ್ತಿರುವುದಕ್ಕೆ ಇಡೀ ಬಾಗೇಪಲ್ಲಿ ಪಟ್ಟಣ ಕೆಂಪುಮಯ ಆಗಿದ್ದು ಎಲ್ಲಿ ನೋಡಿದರೂ ಸಿಪಿಎಂ ಸಮಾವೇಶಕ್ಕೆ ಸ್ವಾಗತಿಸುವ ಪ್ಲೆಕ್ಸಿ, ಬ್ಯಾನರ್‌ಗಳು, ಬಟ್ಟಿಂಗ್ಸ್‌ಗಳು ಎದ್ದು ಕಾಣುತ್ತಿದ್ದು ಕೇರಳ ಸಿಎಂ ಪಿಣರಾಯಿ ವಿಜಯನ್‌ರನ್ನು ಸ್ವಾಗತಿಸುವ ಸ್ವಾಗತ ಕಾಮಾನುಗಳು ತಲೆ ಎತ್ತಿವೆ. ಮುಂದಿನ ಚುನಾವಣೆಯಲ್ಲಿ ತನ್ನ ಕೆಂಪುಕೋಟೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಿಪಿಎಂ ಹಮ್ಮಿಕೊಂಡಿರುವ ರಾಜಕೀಯ ಸಮಾವೇಶ ಸಹಜವಾಗಿಯೆ ಜಿಲ್ಲೆಯಲ್ಲಿ ಸಾಕಷ್ಟುಕುತೂಹಲ ಕೆರಳಿಸಿದೆ. ಹೇಳಿ ಕೇಳಿ ಇಡೀ ರಾಜ್ಯದಲ್ಲಿ ಎಡಪಕ್ಷಗಳ ಪಾಲಿಗೆ ತನ್ನದೇ ಆದ ಗಟ್ಟಿಪ್ರಭಾವ ಹೊಂದಿರುವ ಕ್ಷೇತ್ರಗಳಲ್ಲಿ ಬಾಗೇಪಲ್ಲಿ ಕ್ಷೇತ್ರ ಮೊದಲ ಸ್ಥಾನದಲ್ಲಿದೆ.

ಇಲ್ಲಿನ ಕ್ಷೇತ್ರದ ಜನತೆ ಸಿಪಿಎಂನ ಕೆಂಬಾವುಟದ ಅನೇಕ ಹೋರಾಟಗಳಿಗೆ ಹೆಚ್ಚು ಆಕರ್ಷಿತರಾಗಿ ತಮ್ಮದೇ ರಾಜಕೀಯ ಪ್ರಭಾವ ಹೊಂದಿದ್ದು ಬಾಗೇಪಲ್ಲಿ ಸಿಪಿಎಂ ಪಾಲಿಗೆ ಕೆಂಪುಕೋಟೆ ಆಗಿದೆ. ವಿದ್ಯಾರ್ಥಿ ದಿಸೆಯಿಂದಲೇ ಕಮ್ಯೂನಿಸ್ಟ್‌ ಸಿದ್ದಾಂತಗಳಿಗೆ ಪ್ರಭಾವಿತರಾಗಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಹೋರಾಟಗಳ ಮೂಲಕವೇ ಎರಡು ಬಾರಿ ವಿಧಾನಸಭೆ ಪ್ರವೇಶಿಸಿದ್ದ ಜಿ.ವಿ.ಶ್ರೀರಾಮರೆಡ್ಡಿ 2018ರ ಚುನಾವಣೆಯಲ್ಲಿ ಕೂಡ ಸಿಪಿಎಂ ಪಕ್ಷದಿಂದ ಸ್ಪರ್ದಿಸಿ 51,697 ಮತಗಳನ್ನು ಅಲ್ಪಮತಗಳ ಅಂತರದಿಂದ ಕಾಂಗ್ರೆಸ್‌ನ ಸುಬ್ಬಾರೆಡ್ಡಿ ವಿರುದ್ದ ಸೋತಿದ್ದರು. ಬಾಗೇಪಲ್ಲಿ ಕ್ಷೇತ್ರದಲ್ಲಿ ಒಟ್ಟು 9 ಬಾರಿ ಚುನಾವಣೆಗೆ ಸಿಪಿಎಂನಿಂದ ಸ್ಪರ್ಧಿಸಿದ್ದ ಜಿ.ವಿ.ಶ್ರೀರಾಮರೆಡ್ಡಿ 1996 ಹಾಗೂ 2004 ರಲ್ಲಿ ಎರಡು ಬಾರಿ ಗೆಲುವು ಸಾಧಿಸಿ ವಿಧಾನಸಭೆಗೆ ಪ್ರವೇಶಿಸಿದ್ದರು. 

Chikkamagaluru: ಸಿದ್ದರಾಮಯ್ಯ ಕಚ್ಚೆ ಹರುಕ ಎಂಬ ಸಿ.ಟಿ.ರವಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಆನಾರೋಗ್ಯದ ಕಾರಣ ಕಳೆದ ಎಪ್ರಿಲ್‌ 15 ರಂದು ಜಿ.ವಿ.ಶ್ರೀರಾಮರೆಡ್ಡಿ ನಿಧನರಾಗಿದ್ದರು. ಈಗಾಗಲೇ ಪಿಎಸ್‌ಎಸ್‌ ಸೇರಿದಂತೆ ಹಲವು ಪಕ್ಷಗಳಿಂದ ಅದರಲ್ಲೂ ಸಿಪಿಎಂ ಪಕ್ಷದಿಂದ ದೂರ ಇದ್ದ ಅನೇಕ ನಾಯಕರು ಮತ್ತೆ ಪಕ್ಷದಗೂಡಿಗೆ ಸೇರಿಕೊಂಡು ರಾಜಕೀಯ ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಭರದ ತಯಾರಿ ನಡೆಸುತ್ತಿದ್ದು ಜಿಲ್ಲೆಯ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಪಕ್ಷಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಎಂ ಇಂದಿನ ರಾಜಕೀಯ ಸಮಾವೇಶ ಸಾಕಷ್ಟುಚರ್ಚೆ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

click me!