ನಿಮಗೆ ಗೊತ್ತಿರದ BSY ಖಾಸಗಿ ಬದುಕಿನ ಕುತೂಹಲದ ವಿಚಾರ

By Kannadaprabha News  |  First Published Feb 27, 2021, 1:13 PM IST

ಇದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ 79ನೇ ಜನ್ಮ ದಿನದ ಈ ಸಂದರ್ಭ. ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಜೀವನದಲ್ಲಿರುವ ಬಿಎಸ್‌ವೈ ಅನೇಕ ರೀತಿಯ ಏರಿಳಿತಗಳನ್ನು ಕಂಡಿದ್ದಾರೆ. ಅವರ ಖಾಸಗಿ ಜೀವನದ ಕೆಲವು ಸಂಗತಿಗಳು ಇಲ್ಲಿವೆ. 


 ಶಿವಮೊಗ್ಗ (ಫೆ.27): ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ತಮ್ಮ 79ನೇ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಜೀವನದಲ್ಲಿರುವ ಬಿಎಸ್‌ವೈ ಅನೇಕ ರೀತಿಯ ಏರಿಳಿತಗಳನ್ನು ಕಂಡಿದ್ದಾರೆ. ಕರ್ನಾಟಕದಲ್ಲಿ ರಾಜಾಹುಲಿ ಎನಿಸಿಕೊಳ್ಳುವ ಈ ನಾಯಕನ ಕೆಲವು ಖಾಸಗಿ ಬದುಕಿನ ಕುತೂಹಲದ ಸಂಗತಿಗಳು ಇಲ್ಲಿವೆ.

ರಾಜಕಾರಣಕ್ಕೂ ಮೊದಲು ರೈಸ್‌ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಎಸ್‌ವೈ ಬಳಿಕ ರೈತ ನಾಯಕನಾಗಿ ಬೆಳೆದರು. ಮಂಡ್ಯದಲ್ಲಿ ಹುಟ್ಟಿ ಶಿಕಾರಿಪುರದಲ್ಲಿ ಜೀವನ ಕಟ್ಟಿಕೊಂಡು ರಾಜ್ಯದ ರಾಜಕೀಯದ ಧೀಮಂತ ನಾಯಕನಾಗಿ ಬೆಳೆದರು. 

Tap to resize

Latest Videos

ಮುಖ್ಯಮಂತ್ರಿ ಯಡಿಯೂರಪ್ಪಗೆ 79ರ ಹುಟ್ಟುಹಬ್ಬ : ಗಣ್ಯರಿಂದ ಸಿಎಂಗೆ ಶುಭ ಹಾರೈಕೆ ..

ಬೆಳ್ಳಿ ಮೋಡ ಇಷ್ಟದ ಸಿನಿಮಾ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬೆಳ್ಳಿಮೋಡ ಅತ್ಯಂತ ಮೆಚ್ಚಿನ ಸಿನಿಮಾ . ಸಿನಿಮಾ ನೋಡುವ ಹವ್ಯಾಸ ಇರಿಸಿಕೊಮಡಿದ್ದ ಅಚರಯಯ ಬಿಡುವಿದ್ದಾಗ ಪತ್ನಿ ಮೈತ್ರಾದೇವಿ ಅವರ ಜೊತೆ ಸದ್ದಿಲ್ಲದೇ ಚಿತ್ರಮಂದಿರಕ್ಕೆ ಹೊರಟುಬಿಡುತ್ತಿದ್ದರು.

ಡೈಲಾಗ್ ಉರುಹೊಡೆಯದೇ ನಾಟಕದಲ್ಲಿ ಪಾತ್ರ ಮಾಡಿದ್ದರು. ಕಾಲೇಜಿನಲ್ಲಿ ಓದುವಾಗ ಸಖತ್ ಆಕ್ಟಿಂಗ್ ಮಾಡುತ್ತಿದ್ದರು. 

ದೇಶದ ಇತಿಹಾಸದಲ್ಲೇ ಒಂದು ರಾಜ್ಯದ ಮುಖ್ಯಮಂತ್ರಿ ಒಂದು ವಾರದಲ್ಲಿ ಎರಡು ಬಾರು ವಿಶ್ವಾಸ ಮತ ಗೆದ್ದ ಉದಾಹರಣೆಗೆ ಬಿಎಸ್‌ವೈ ಮಾತ್ರ.

ಚಿಕ್ಕಣ್ಣ ಜೋಯಿಸ್ ಎಂಬುವವರು ಬಿಎಸ್‌ವೈ ಕಾರಿಗೆ ಕೆಲ ಕಾಲ ಸಾರಥಿಯಾಗಿದ್ದರು. ಆಗ ಎಲ್ಲಿಗೆ ಹೊರಟರೂ 80-90 ಕಿಮೀ ವೇಗದಕ್ಕೇ ಹೋಗಬೇಕಿತ್ತು.

click me!