Karnataka: ರಾಜ್ಯದಲ್ಲಿ 6 ಕೋಟಿ ದಾಟಿದ ಕೋವಿಡ್‌ ಟೆಸ್ಟ್‌: ದೇಶದಲ್ಲೇ 3ನೇ ಸ್ಥಾನ

By Kannadaprabha NewsFirst Published Jan 23, 2022, 6:58 AM IST
Highlights

*  ಅತಿ ಹೆಚ್ಚು ಸೋಂಕು ಪರೀಕ್ಷೆ ನಡೆಸಿದ ರಾಜ್ಯಗಳ ಪೈಕಿ ಕರ್ನಾಟಕ ನಂ.3
*  ಕೊರೋನಾ ನಿಯಂತ್ರಣದಲ್ಲಿ ಇದು ದೊಡ್ಡ ಯಶಸ್ಸು: ಸಚಿವ ಸುಧಾಕರ್‌
*  ಮಕ್ಕಳ ಪರೀಕ್ಷೆಗೆ ಒತ್ತು
 

ಬೆಂಗಳೂರು(ಜ.23): ರಾಜ್ಯದಲ್ಲಿ ಕೊರೋನಾ(Coronavirus) ಸೋಂಕು ಪರೀಕ್ಷೆಗಳು ಆರು ಕೋಟಿ ಗಡಿ ದಾಟಿದ್ದು, ಅತಿ ಹೆಚ್ಚು ಪರೀಕ್ಷೆ ನಡೆಸಿದ ರಾಜ್ಯಗಳಲ್ಲಿ ಪೈಕಿ ಕರ್ನಾಟಕಕ್ಕೆ(Karnataka) 3ನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ತಿಳಿಸಿದರು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು, ಕೊರೋನಾ ಆರಂಭವಾದಾಗ ರಾಜ್ಯದಲ್ಲಿ, ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆ (NIV) ಘಟಕದಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತಿತ್ತು. ಆದರ ಖಚಿತತೆಗಾಗಿ ಪುಣೆಯ ಎನ್‌ಐವಿ ಘಟಕಕ್ಕೆ ಮಾದರಿಗಳನ್ನು ಕಳುಹಿಸಲಾಗುತ್ತಿತ್ತು. ನಂತರ ಹಂತಹಂತವಾಗಿ ಸರ್ಕಾರಿ ಹಾಗೂ ಖಾಸಗಿ ಹೊಸ ಪ್ರಯೋಗಾಲಯಗಳನ್ನು(Lab) ಆರಂಭಿಸಲಾಯಿತು. ಸದ್ಯ ರಾಜ್ಯದಲ್ಲಿ 99 ಸರ್ಕಾರಿ ಹಾಗೂ 169 ಖಾಸಗಿ ಸೇರಿ ಒಟ್ಟು 268 ಪ್ರಯೋಗಾಲಯಗಳಲ್ಲಿ ದಿನವೊಂದರಲ್ಲಿ ಎರಡು ಲಕ್ಷಕ್ಕೂ ಅಧಿಕ ಮಾದರಿಗಳ ಪರೀಕ್ಷೆ ಮಾಡಲಾಗುತ್ತಿದೆ. ಈ ಮೂಲಕ ಸೋಂಕು ಪರೀಕ್ಷೆಯನ್ನು(Covid Test) ಸಮರ್ಥವಾಗಿ ಅನುಷ್ಠಾನ ಮಾಡಿದ್ದ ರಾಜ್ಯವು ಆರು ಕೋಟಿ ಪರೀಕ್ಷೆಯ ಮೈಲುಗಲ್ಲು ತಲುಪಿದ್ದು, ಇಡೀ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಕೊರೋನಾ ನಿಯಂತ್ರಣ ಕಾರ್ಯದಲ್ಲಿ ಇದು ದೊಡ್ಡ ಯಶಸ್ಸು ಎಂದರು.

Covid 3rd Wave: ಗರ್ಭಿಣಿಯರಿಗೆ ಹೆಚ್ಚು ಕಾಡದ ವೈರಸ್‌..!

ರೋಗ ಲಕ್ಷಣ ಇದ್ದವರ ಪರೀಕ್ಷೆ ಒತ್ತು:

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(Indian Medical Research Institute) ಮಾರ್ಗಸೂಚಿಯಂತೆ ಪ್ರಾಥಮಿಕ ಸಂಪರ್ಕ ಹಾಗೂ ರೋಗಲಕ್ಷಣ ಇರುವವರಿಗೆ ಪರೀಕ್ಷೆಗೆ ಒತ್ತು ನೀಡಲಾಗುತ್ತದೆ. ರ‍್ಯಾಪಿಡ್ ಪರೀಕ್ಷೆಯಲ್ಲಿ(Rapid Test) ನೆಗಟಿವ್‌ ವರದಿ ಬಂದರೂ ಆರ್‌ಟಿಪಿಸಿಆರ್‌(RTPCR) ಪರೀಕ್ಷೆ ನಡೆಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆ ಹೆಚ್ಚಿಸಲು ಸಂಚಾರಿ ತಂಡ, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಅವರು, ಮಾನಸಿಕ ಅಸ್ವಸ್ಥರು, ಅಂಗವಿಕಲರ ಮನೆಗೆ ಭೇಟಿ ನೀಡಿ ಪರೀಕ್ಷೆ ನಡೆಸಲಿದ್ದಾರೆ ಎಂದು ಸಚಿವರು ತಿಳಿಸಿದರು.

ಅಂಕಿ -ಅಂಶ
ಸೋಂಕು ಪರೀಕ್ಷೆಗಳು (ಈವರೆಗೂ)
ರ‍್ಯಾಪಿಡ್ ಆಂಟಿಜೆನ್‌ 1,14,12,162
ಆರ್‌ಟಿಪಿಸಿಆರ್‌ 4,87,02,653
ಇತರೆ ಸೇರಿ ಒಟ್ಟು 6,01,14,815
ವರ್ಷ - ಸೋಂಕು ಪರೀಕ್ಷೆಗಳು
2020 1.42 ಕೋಟಿ
2021 4.24 ಕೋಟಿ
2022 (ಜ.21) 36 ಲಕ್ಷ

ಆಸ್ಪತ್ರೆ ದಾಖಲಾತಿ ಹೆಚ್ಚಾದರೆ ಕಠಿಣ ಕ್ರಮ: ಡಾ. ಸುಧಾಕರ್‌

ಜನರ ಜೀವ ಹಾಗೂ ಜೀವನ ಎರಡೂ ಮುಖ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಸಿ ನಿರ್ಬಂಧಗಳಿಂದ ವಿನಾಯ್ತಿ ನೀಡಿದ್ದಾರೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದ್ದು, ಜನರು ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಅರಿತು ನಡೆಯಬೇಕು. ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಿ ಮಾಸ್ಕ್‌ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಒಂದು ವೇಳೆ ಮತ್ತೆ ಕೊರೋನಾ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುವುದು ಗಣನೀಯವಾಗಿ ಹೆಚ್ಚಾದರೆ ಸರ್ಕಾರ ಬೇರೆ ದಾರಿ ಇಲ್ಲದೆ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಿದೆ ಎಂದು ಆರೋಗ್ಯ ಸಚಿವರು ಎಚ್ಚರಿಸಿದರು.

Corona Vaccine: 1ನೇ ಡೋಸ್‌ ಲಸಿಕೆ: ಶೇ.100 ಸಾಧನೆ ಹೊಸ್ತಿಲಲ್ಲಿ ಕರ್ನಾಟಕ!

20,000 ಜನಸಂಖ್ಯೆಗೆ ಒಂದರಂತೆ ಒಟ್ಟು 3,678 (ಸರ್ಕಾರಿ 3,102 ಮತ್ತು ಖಾಸಗಿ 666) ಗಂಟಲು ದ್ರವ ಮಾದರಿ ಸಂಗ್ರಹ ಕೇಂದ್ರಗಳನ್ನು ತೆರೆಯಲಾಯಿತು. ಜತೆಗೆ ಸರ್ಕಾರಿ ಆಸ್ಪತ್ರೆ, ಮೆಡಿಕಲ್‌ ಕಾಲೇಜು, ಖಾಸಗಿ ಆಸ್ಪತ್ರೆ, ಲ್ಯಾಬ್‌ಗಳಲ್ಲಿ ಪರೀಕ್ಷೆ ಆರಂಭಿಸಲಾಯಿತು. ಒಟ್ಟು 63 ವೈದ್ಯಕೀಯ ಕಾಲೇಜುಗಳಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ಆರಂಭವಾದವು. ಆರಂಭದಲ್ಲಿ 10-12 ಸರ್ಕಾರಿ ಸರ್ಕಾರಿ ಪ್ರಯೋಗಾಲಯಗಳಲ್ಲಿ ಮಾತ್ರ ಆರ್‌ಟಿಪಿಸಿಆರ್‌ ಪರೀಕ್ಷಾ ವ್ಯವಸ್ಥೆ ಇದ್ದು, ಈಗ ಆ ಸಂಖ್ಯೆ 57ಕ್ಕೆ ಹೆಚ್ಚಿದೆ. ಕೊರೋನಾ ಮೂರನೇ ಅಲೆ(Corona 3rd Wave) ನಿರ್ವಹಣೆಗಾಗಿ ಜನವರಿ 18 ರಿಂದ ದಿನದ ಪರೀಕ್ಷಾ ಗುರಿ 2 ಲಕ್ಷಕ್ಕೆ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಕ್ಕಳ ಪರೀಕ್ಷೆಗೆ ಒತ್ತು:

ಕೊರೋನಾ 3 ನೇ ಅಲೆ ಮಕ್ಕಳ(Children) ಮೇಲೆ ಹೆಚ್ಚು ಪರಿಣಾಮ ಬೀರುವ ಅಭಿಪ್ರಾಯದ ಹಿನ್ನೆಲೆಯಲ್ಲಿ, ಮಕ್ಕಳಿಗೆ ಹೆಚ್ಚಿನ ಪರೀಕ್ಷೆ ನಡೆಸಲು ಕ್ರಮವಹಿಸಲಾಗಿದೆ. ಡಿ.1 ರಿಂದ ಜನವರಿ 20ರ ಅವಧಿಯಲ್ಲಿ ನಡೆಸಲಾದ ಒಟ್ಟು ಪರೀಕ್ಷೆಯಲ್ಲಿ, ಶೇ.29 ರಷ್ಟು ಮಕ್ಕಳಿಗೆ ಮಾಡಿದ ಪರೀಕ್ಷೆಗಳಾಗಿವೆ. 15 ದಿನಕ್ಕೊಮ್ಮೆ ಕಾಲೇಜು, ಪ್ರೌಢಶಾಲೆ, ಹೋಟೆಲ್‌, ರೆಸ್ಟೋರೆಂಟ್‌, ಅಡುಗೆ ಸಿಬ್ಬಂದಿ ಮೊದಲಾದವರಿಗೆ ರ‌್ಯಾಂಡಮ್‌ ಪರೀಕ್ಷೆ(Random Test) ಮಾಡಲಾಗುತ್ತಿದೆ ಎಂದು ತಿಳಿಸಿದರು.

click me!