ಸಿಕ್ಕಾಪಟ್ಟೆ ಆಂಬುಲೆನ್ಸ್ ಹಣ ದಾಹಕ್ಕೆ ಸರ್ಕಾರ ಬ್ರೇಕ್

Published : May 21, 2021, 11:09 AM IST
ಸಿಕ್ಕಾಪಟ್ಟೆ ಆಂಬುಲೆನ್ಸ್  ಹಣ ದಾಹಕ್ಕೆ ಸರ್ಕಾರ ಬ್ರೇಕ್

ಸಾರಾಂಶ

ಸಾಕಷ್ಟು ಸುಲಿಗೆ ಮಾಡುತ್ತಿದ್ದ ಆಂಬುಲೆನ್ಸ್ ಗಳ ಹಣ ದಾಹಕ್ಕೆ ಕೊನೆಗೂ  ಬ್ರೇಕ್ ರಾಜ್ಯ ಸರ್ಕಾರ ಆಂಬುಲೆನ್ಸ್ ಗೆ ದರ ನಿಗದಿ ಮಾಡಿ ಆದೇಶ  ಮನಸ್ಸಿಗೆ ಬಂದಷ್ಟು ಹಣ ವಸೂಲಿ ಮಾಡುತ್ತಿರುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ 

 ಬೆಂಗಳೂರು (ಮೇ.21): ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಇದನ್ನೇ ದಂಧೆಯಾಗಿಸಿಕೊಂಡು ಸಾಕಷ್ಟು ಸುಲಿಗೆ ಮಾಡುತ್ತಿದ್ದ ಆಂಬುಲೆನ್ಸ್ ಗಳ ಹಣ ದಾಹಕ್ಕೆ ಕೊನೆಗೂ  ಬ್ರೇಕ್ ಬಿದ್ದಿದೆ. 

ರೋಗಿಗಳನ್ನು ಸಾಗಿಸುವಾಗ ಮನಸ್ಸಿಗೆ ಬಂದಷ್ಟು ಹಣ ವಸೂಲಿ ಮಾಡುತ್ತಿರುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿದ್ದು,  ರಾಜ್ಯ ಸರ್ಕಾರ ಆಂಬುಲೆನ್ಸ್ ಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. 

ಖಾಸಗಿ ಅಂಬ್ಯುಲೆನ್ಸ್‌ಗಳಿಗೆ ಏಕರೂಪದ ದರ ನಿಗದಿ ..

10 ಕಿಲೋ ಮೀಟರ್ ಗೆ ಒಂದೂವರೆ ಸಾವಿರ ದರ ನಿಗದಿ ಮಾಡಿದ್ದು, 10 ಕಿ.ಮೀ. ನಂತರ ಕಿಲೋಮೀಟರ್ ಗೆ 120 ರು. ಚಾರ್ಜ್ ಮಾಡಬೇಕು. ವೈಯ್ಟಿಂಗ್ ಚಾರ್ಜ್ ಪ್ರತಿ ಗಂಟೆಗೆ 200 ರು. ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

ಉಚಿತ ಆ್ಯಂಬುಲೆನ್ಸ್ ಸೇವೆ ನೀಡುತ್ತಿರುವ ಏಕೈಕ ನಟ ಅರ್ಜುನ್ ಗೌಡ ಸಂದರ್ಶನ!  

ಲೈಫ್ ಸಪೋರ್ಟ್ ಇರುವ ಆಂಬುಲೆನ್ಸ್ ಪ್ರತಿ 10 ಕಿಲೋ ಮೀಟರ್‌ಗೆ 2000 ರು. ದರ ನಿಗದಿ ಮಾಡಲಾಗಿದೆ. ನಂತರದ ಕಿಲೋ ಮೀಟರ್ ಗಳಿಗೆ 120 ರು. ದರ ಪಡೆಯಬೇಕೆಂದು ಸೂಚಿಸಿದೆ. ವೈಯ್ಟಿಂಗ್ ಚಾರ್ಜ್ 250 ರು.ಪಡೆಯಬೇಕೆಂದು ಸೂಚನೆ ನೀಡಲಾಗಿದೆ.

ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ವೈದ್ಯಕೀಯ ಸಚಿವ ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಜಾಗದ ಮಾಲೀಕರಿಗೆ ಬಿಗ್ ರಿಲೀಫ್, ಇ-ಆಸ್ತಿ 2.0 ಜಾರಿ, ಆಸ್ತಿ ವಿಂಗಡಣೆ ಮತ್ತು ಲೇಔಟ್ ನಿಯಮ ಸರಳ
ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕಿ ಸೌಮ್ಯ ರೆಡ್ಡಿ ರಾಜೀನಾಮೆ, ಮುಂದಿನ ನಡೆ ಏನು?