ಕರ್ನಾಟಕದಲ್ಲಿ ಕೊರೋನಾ ಭಾರೀ ಇಳಿಕೆ: ಪಾಸಿಟಿವಿಟಿ ದರ ಶೇ.0.43

By Suvarna News  |  First Published Oct 8, 2021, 7:19 PM IST

* ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಇಳಿಕೆ
* ರಾಜ್ಯದಲ್ಲಿ ಶೇ.0.43ಕ್ಕೆ ಇಳಿದ ಪಾಸಿಟಿವಿಟಿ ದರ 
* ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ


ಬೆಂಗಳೂರು, (ಅ.08): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ (Covid Second Wave) ಪ್ರಕರಣಗಳ ಸಂಖ್ಯೆಯಲ್ಲಿ ಇಂದು (ಅ.08) ಇಳಿಕೆಯಾಗಿದೆ. ಕೇವಲ 397 ಪಾಸಿಟಿವ್ ಕೇಸ್‌ ಪತ್ತೆಯಾಗಿದ್ದು, 5 ಜನರು ಸೋಂಕಿಗೆ ಬಲಿಯಾಗಿದ್ದಾರೆ. 

ಇದರೊಂದಿಗೆ ಸೋಂಕಿತರ ಸಂಖ್ಯೆ 29,80,170ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ ಸಾವಿನ (Death Case) ಸಂಖ್ಯೆ 37,866ಕ್ಕೆ ಏರಿಕೆಯಾಗಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ (Karnataka Health Department) ಮಾಹಿತಿ ಮಾಡಿದ್ದಾರೆ.

Latest Videos

undefined

ಕೋವಿಡ್‌ ಬಗ್ಗೆ ಇನ್ನೂ 3 ತಿಂಗಳು ಎಚ್ಚರ

ಇನ್ನು ಬೆಂಗಳೂರಿನಲ್ಲಿ (Bengaluru) ಇಂದು (ಶುಕ್ರವಾರ) 140 ಮಂದಿಗೆ ಸೋಂಕು ದೃಢಪಟ್ಟಿದ್ದು, 3 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,47,970ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 603 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ (Hospital) ಡಿಸ್ಚಾರ್ಜ್  (Discharges)ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,30,867ಕ್ಕೆ ಏರಿಕೆಯಾಗಿದೆ. ಇನ್ನು11,408 ಸಕ್ರಿಯ ಪ್ರಕರಣಗಳಿವೆ (Active cases). ಇದರೊಂದಿಗೆ  ಪಾಸಿಟಿವಿಟಿ ದರ (Positivity Rate) ಶೇ.0.43ರಷ್ಟು ಇದ್ರೆ,  ಡೆತ್ ರೇಟ್ 1.25 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ‍್ಯೆ :
ಜಿಲ್ಲಾವಾರು ಪ್ರಕರಣಗಳ ಸಂಖ‍್ಯೆ ನೋಡುವುದಾದ್ರೆ ಶುಕ್ರವಾರ ಆರು ಜಿಲ್ಲೆಗಳಲ್ಲಿ ಯಾವುದೇ ಕೊರೋನಾ ಪಾಸಿಟಿವ್ ಕೇಸ್ ದೃಢಪಟ್ಟಿಲ್ಲ. ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕೇಸ್ ಎನ್ನುವುದು ಈ ಕೆಳಗಿನಂತಿವೆ.

Covid cases fall to lowest level in second wave:
◾New cases in State: 397
◾New cases in B'lore: 140
◾Positivity rate: 0.43%
◾Discharges: 603 (B'lore- 148)
◾Deaths: 05 (B'lore- 03)
◾Active cases in State: 11,408
◾Tests: 91,772

— Dr Sudhakar K (@mla_sudhakar)

ಬಾಗಲಕೋಟೆ-0, ಬಳ್ಳಾರಿ-5, ಬೆಳಗಾವಿ-5, ಬೆಂಗಳೂರು ಗ್ರಾಮಾಂತರ-6, ಬೆಂಗಳೂರು ನಗರ-140, ಬೀದರ್-1, ಚಾಮರಾಜನಗರ-1, ಚಿಕ್ಕಬಳ್ಳಾಪುರ-12, ಚಿಕ್ಕಮಗಳೂರು-12, ಚಿತ್ರದುರ್ಗ-4, ದಕ್ಷಿಣ ಕನ್ನಡ-39, ದಾವಣಗೆರೆ-2, ಧಾರವಾಡ-6, ಗದಗ-0, ಹಾಸನ-27, ಹಾವೇರಿ-0, ಕಲಬುರಗಿ-2, ಕೊಡಗು-1, ಕೋಲಾರ-4, ಕೊಪ್ಪಳ-0, ಮಂಡ್ಯ-3, ಮೈಸೂರು-53, ರಾಯಚೂರು-0, ರಾಮನಗರ-3, ಶಿವಮೊಗ್ಗ-11, ತುಮಕೂರು-20, ಉಡುಪಿ-23, ಉತ್ತರ ಕನ್ನಡ-23, ವಿಜಯಪುರ-1, ಯಾದಗಿರಿ-0.

click me!