Covid-19: ಒಂದೇ ದಿನ 70 ಜನ ಸಾವು: 3ನೇಅಲೆಯ ದಾಖಲೆ

By Kannadaprabha NewsFirst Published Jan 30, 2022, 4:45 AM IST
Highlights

ಹೊಸ ಸೋಂಕಿನ ಪ್ರಮಾಣದಲ್ಲಿ ಇಳಿಕೆ
ಮರಣ ಪ್ರಮಾಣದಲ್ಲಿ ಕೊಂಚ ಏರಿಕೆ
ಮೂರನೇ ಅವಧಿಯ ವೇಳೆ ಇದು ದಾಖಲೆಯ ಸಾವು

ಬೆಂಗಳೂರು (ಜ. 29): ಕೋವಿಡ್‌ (Covid 19) ಸೋಂಕಿನ ಪ್ರಸರಣ ಕಡಿಮೆ ಆಗುತ್ತಿದ್ದರೂ, ಮಹಾಮಾರಿಗೆ ಬಲಿಯಾಗುವವ ಸಂಖ್ಯೆ ಹೆಚ್ಚುತ್ತಿದ್ದು, ಶನಿವಾರ ಒಂದೇ ದಿನ 70 ಮಂದಿ ಮರಣವನ್ನಪ್ಪಿದ್ದಾರೆ. ಇದು ಓಮಿಕ್ರೋನ್‌ (Omicron) ಪ್ರೇರಿತ ಮೂರನೇ ಅಲೆಯ ಅವಧಿಯ ದಾಖಲೆ ಸಾವು. ಈ ಮುನ್ನ ಜ. 25ರಂದು 52 ಮಂದಿ ಸಾವನ್ನಪ್ಪಿದ್ದು, ಮೂರನೇ ಅಲೆಯ ಅತಿ ಹೆಚ್ಚಿನ ಸಾವಾಗಿತ್ತು. ಇನ್ನು ಶನಿವಾರ 33,337 ಮಂದಿಯಲ್ಲಿನ ಸೋಂಕು ಪತ್ತೆಯಾಗಿದ್ದು 69,902 ಮಂದಿ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 2.52 ಲಕ್ಷಕ್ಕೆ ಕುಸಿದಿದೆ.

ಸಾವು ಏರಿಕೆ ಆತಂಕ: ಮೂರನೇ ಅಲೆಯ ವೇಳೆ ಸಾವಿನ ಸಂಖ್ಯೆ ಈ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ತಜ್ಞರಿಗೂ ಆತಂಕ ಮೂಡಿಸಿದೆ. ಕೋವಿಡ್‌ ಎರಡನೇ ಅಲೆ ವೇಳೆ ಸಾವಿನ ಸಂಖ್ಯೆ ವಿಪರೀತವಿತ್ತು. ಇದಕ್ಕೆ ಆಸ್ಪತ್ರೆಯಲ್ಲಿ ಹಾಸಿಗೆಗಳ ಲಭ್ಯತೆ ಹಾಗೂ ಆಕ್ಸಿಜನ್‌ (Oxigen) ಕೊರತೆ ಮುಖ್ಯ ಕಾರಣವಾಗಿತ್ತು. ಆದರೆ, ಮೂರನೇ ಅಲೆ ವೇಳೆ ಸಾಕಷ್ಟುಹಾಸಿಗೆ, ಔಷಧಿ ಲಭ್ಯವಿದ್ದರೂ ದಿನದಿಂದ ದಿನಕ್ಕೆ ಕೋವಿಡ್‌ನಿಂದ ಮರಣವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಮೂರನೇ ಅಲೆಯಲ್ಲಿ ಈ ಪ್ರಮಾಣದಲ್ಲಿ ಸಾವು ಇದುವರೆಗೂ ಆಗಿರಲಿಲ್ಲ. ಎರಡನೇ ಅಲೆಯ ಕೊನೆಗೊಳ್ಳುವ ವೇಳೆ ಅಂದರೆ 7ರಂದು 75 ಮಂದಿ ಸಾವನ್ನಪ್ಪಿದ್ದ ಬಳಿಕದ ಗರಿಷ್ಠ ಸಾವಿನ ನಂತರದ ಅತಿ ಹೆಚ್ಚಿನ ಸಾವು ಶನಿವಾರ ವರದಿಯಾಗಿದೆ.

ಶನಿವಾರ ಒಟ್ಟು 1.72 ಲಕ್ಷ ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ ಶೇ.19.37ಕ್ಕೆ ಕುಸಿದಿದೆ. ಜ. 22ರ ಬಳಿಕ ಮೊದಲ ಬಾರಿಗೆ ಶೇ.20ರೊಳಗೆ ಪಾಸಿಟಿವಿಟಿ ದರ ಬಂದಿದೆ. ಆದರೆ ಶುಕ್ರವಾರ 31,198 ಇದ್ದ ಪ್ರಕರಣ ಏರಿಕೆ ಕಂಡಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 2.52 ಲಕ್ಷಕ್ಕೆ ಕುಸಿದಿದೆ. ಈ ಪೈಕಿ 5,519 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 186 ಮಂದಿ ಐಸಿಯು ವೆಂಟಿಲೇಟರ್‌ನಲ್ಲಿ ಮತ್ತು 534 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 16,586, ಮೈಸೂರು 2,431, ಧಾರವಾಡ 1,278, ತುಮಕೂರು 1,192 ಮತ್ತು ಹಾಸನ ಜಿಲ್ಲೆಯಲ್ಲಿ 1,039 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದೆಲ್ಲ ಜಿಲ್ಲೆಗಳಲ್ಲಿ ಮೂರಂಕಿಯಲ್ಲಿ ಪ್ರಕರಣ ಪತ್ತೆಯಾಗಿದೆ.

ಬೆಂಗಳೂರು ನಗರದಲ್ಲಿ 13, ಮೈಸೂರು 9, ಉಡುಪಿ, ಕಲಬುರಗಿ ಮತ್ತು ದಕ್ಷಿಣ ಕನ್ನಡ ತಲಾ 5, ಬಳ್ಳಾರಿ ಮತ್ತು ತುಮಕೂರು ತಲಾ 4, ರಾಮನಗರ, ಬೆಳಗಾವಿ ತಲಾ 3, ಬಾಗಲಕೋಟೆ, ಮಂಡ್ಯ ಮತ್ತು ರಾಯಚೂರು ತಲಾ 2, ವಿಜಯಪುರ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಕೋಲಾರ, ಹಾವೇರಿ, ಹಾಸನ, ಗದಗ, ಧಾರವಾಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 37.57 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು 34.65 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 38,874 ಮಂದಿ ಮರಣವನ್ನಪ್ಪಿದ್ದಾರೆ.

Covid Crisis: ಬೆಂಗ್ಳೂರಲ್ಲಿ ಕೊರೋನಾ ಸೋಂಕು ಇಳಿಕೆ..!
1.99 ಲಕ್ಷ ಮಂದಿಗೆ ಲಸಿಕೆ: ರಾಜ್ಯದಲ್ಲಿ ಶನಿವಾರ 1.99 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 34,021 ಮಂದಿ ಮುನ್ನೆಚ್ಚರಿಕೆ ಡೋಸ್‌, 44,428 ಮಂದಿ ಮೊದಲ ಡೋಸ್‌ ಮತ್ತು 1.20 ಲಕ್ಷ ಎರಡನೇ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 9.50 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

Covid Testing Guidelines ಕೊರೋನಾ ಪರೀಕ್ಷೆ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ
ಕೋವಿಡ್‌ ನಿಯಂತ್ರಣ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ
ಗದಗ:
ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ಆರೋಗ್ಯ ನಿರ್ವಹಣೆ ಸಂಶೋಧನಾ ಸಂಸ್ಥೆ, ಎಸ್‌ಬಿಸಿಸಿ ಕಾರ್ಯಕ್ರಮದ ಸಂಯುಕ್ತಾಶ್ರಯದಲ್ಲಿ ಐಇಸಿ, ಎಸ್‌ಬಿಸಿಸಿ ಕಾರ್ಯಕ್ರಮ ಅಡಿ ಸಮೀ​ಪದ ಹೊಂಬಳ ಗ್ರಾಮದಲ್ಲಿ ಕೋವಿಡ್‌-19 ಸೋಂಕು ತಡೆಗಟ್ಟಲು ಬೀದಿನಾಟಕದ ಮೂಲಕ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಜರುಗಿತು. ಉದ್ಘಾ​ಟನೆ ನೆರ​ವೇ​ರಿ​ಸಿದ ಹೊಂಬಳ ಗ್ರಾಪಂ ಅಧ್ಯಕ್ಷೆ ಸರಸ್ವತಿ ಬಳ್ಳಾರಿ ಮಾತನಾಡಿ, ಕೋವಿಡ್‌-19 ಕಾರ್ಯಕ್ರಮ ಹಾಗೂ ಕೊರೋನಾ ಮೂರನೇ ಅಲೆಯ ಕುರಿತು ಜನರು ಜಾಗೃತಿ ವಹಿಸಬೇಕು. ಎಲ್ಲರೂ ಲಸಿಕೆ ಪಡೆ​ಯ​ಬೇಕು. ಅರ್ಹರು ಬೂಸ್ಟರ್‌ ಡೋಸ್‌ಗಳನ್ನು ಪಡೆ​ಯ​ಬೇಕು ಎಂದು ಸಲಹೆ ನೀಡಿ​ದರು. ಉಪಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬಳೆ ಹಾಗೂ ಗ್ರಾಪಂ ಸದಸ್ಯರು, ಗ್ರಾಮ​ಸ್ಥರು ಇದ್ದರು.

click me!