ರಾತ್ರಿವರೆಗೂ ಮದ್ಯ ಮಾರಲು ಸಿಗಲಿದೆಯಾ ಅವಕಾಶ ?

By Kannadaprabha News  |  First Published May 2, 2021, 8:51 AM IST

ರಾಜ್ಯದಲ್ಲಿ ಜನತಾ ಕರ್ಫ್ಯೂ ಇದ್ದು ಈ ನಿಟ್ಟಿನಲ್ಲಿ ಹಲವು ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ನಿಟ್ಟಿನಲ್ಲಿ ಮದ್ಯ ಮಾರಾಟದ ಅವಧಿ ವಿಸ್ತರಣೆ ಮಾಡಬೇಕೆಂದು ಆಗ್ರಹಿಸಲಾಗಿದೆ. 


ಬೆಂಗಳೂರು (ಮೇ.02): ರಾಜ್ಯದಲ್ಲಿ ಬೆಳಗ್ಗೆ 6 ರಿಂದ 10 ಗಂಟೆಗೆ ಸೀಮಿತವಾಗಿರುವ ಮದ್ಯ ಮಾರಾಟವನ್ನು ರಾತ್ರಿ 9 ಗಂಟೆವರೆಗೆ ವಿಸ್ತರಿಸಬೇಕು ಎಂದು ಮದ್ಯ ಮಾರಾಟಗಾರರ ಸಂಘ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. 

ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯಷನ್‌ ಅಧ್ಯಕ್ಷ ಎಸ್‌. ಮರಿಸ್ವಾಮಿ, ಲಾಕ್ಡೌನ್‌ ಅವಧಿಯಲ್ಲಿ ಗಾರ್ಮೆಂಟ್ಸ್‌, ನಂದಿನಿ ಮಳಿಗೆ ಸೇರಿದಂತೆ ಹಲವರಿಗೆ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಇದ್ದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಲಾಕ್ಡೌನ್‌ ಮಾಡಿದಾಗಲೇ ಚಿಲ್ಲರೆ ಮದ್ಯ ಮಾರಾಟಗಾರರು ತೀವ್ರ ನಷ್ಟಅನುಭವಿಸಿದ್ದಾರೆ. 

Latest Videos

undefined

ಬೆಳ್ಳಂ ಬೆಳಗ್ಗೆಯೇ ಟೈಟ್‌ ಆಗಿ ನಡುರಸ್ತೆಯಲ್ಲಿ ಬಿದ್ದ ಕುಡುಕರು..! ...

ಇದೀಗ ಬೆಳಗ್ಗೆ ಮದ್ಯ ಖರೀದಿ ಮಾಡಲು ಗ್ರಾಹಕರು ಮುಜುಗರ ಅನುಭವಿಸುತ್ತಾರೆ. ಇದರಿಂದ ಮದ್ಯ ಮಾರಾಟಗಾರರಿಗೆ ಮತ್ತಷ್ಟುನಷ್ಟಉಂಟಾಗುತ್ತಿದೆ. ಕಾರಣ ಅವಧಿ ವಿಸ್ತರಿಸಿ ಎಂದು ಮನವಿ ಮಾಡಿದ್ದಾರೆ.

ಹೀಗಾಗಿ ಚಿಲ್ಲರೆ ಮದ್ಯ ಮಾರಾಟ ಸನ್ನದುದಾರರಿಗೆ ರಾತ್ರಿ 9 ಗಂಟೆವರೆಗೆ ಅಥವಾ ಸರ್ಕಾರಕ್ಕೆ ಸೂಕ್ತ ಎನಿಸುವ ಅವಧಿವರೆಗೆ ಕೇವಲ ಪಾರ್ಸೆಲ್‌ ನೀಡಲು ಅವಧಿ ವಿಸ್ತರಣೆ ಮಾಡಿ ಆದೇಶ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

click me!