
ಬೆಂಗಳೂರು (ಆ.21): ರಾಜ್ಯದಲ್ಲಿ ಇದುವರೆಗೂ ಎಷ್ಟುಪ್ರಮಾಣದ ಜನರಿಗೆ ಕೊರೋನಾ ಸೋಂಕು ಹರಡಿದೆ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ ಎಂದು ಪ್ರತಿ ಜಿಲ್ಲೆಯಲ್ಲೂ ಸರ್ವೆ ಕಾರ್ಯ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಸಮೀಕ್ಷಾ ಕಾರ್ಯಕ್ಕೆ 18 ವರ್ಷ ಮೇಲ್ಪಟ್ಟವಯಸ್ಕರನ್ನು ಬಳಸಿಕೊಳ್ಳಲು ನಿರ್ಧರಿಸಿದೆ.
ಬಿಬಿಎಂಪಿಯ ಎಲ್ಲಾ ಎಂಟು ವಲಯಗಳು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಒಟ್ಟು 38 ಘಟಕಗಳಲ್ಲಿ ಕೋವಿಡ್‌ನಿಂದ ಕಡಿಮೆ, ಮಧ್ಯಮ ಮತ್ತು ಹೆಚ್ಚಿನ ಅಪಾಯವಿರುವ ಮೂರು ವರ್ಗದ ಜನರಿಗೆ ಈ ಸರ್ವೆ ನಡೆಸಲಾಗುತ್ತದೆ.
ಕೊರೊನಾ ವಿಚಾರದಲ್ಲಿ ಗುಡ್‌ನ್ಯೂಸ್: ಕಂಟೈನ್ಮೆಂಟ್, ಬಫರ್ ಝೋನ್‌ಗಳ ನಿಯಮ ಸಡಿಲಿಕೆ...
ಈ ಸಂಬಂಧ ಇಲಾಖೆಯು ಜಿಲ್ಲಾ ಕಣ್ಗಾವಲು ಅಧಿಕಾರಿಗಳ ತರಬೇತಿ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ಗುರುವಾರ (ಆ.20) ನಗರದಲ್ಲಿ ಚಾಲನೆ ನೀಡಿದ್ದಾರೆ.
ಶೇ.51 ರಷ್ಟು ಮಂದಿಯ ಸಂಪೂರ್ಣ ಆದಾಯ ಸ್ಥಗಿತ: ಲಾಕ್‌ಡೌನ್ ಪರಿಣಾಮದ ಅಧ್ಯಯನ ವರದಿ ಬಹಿರಂಗ!..
ಎಎನ್‌ಸಿ ಚಿಕಿತ್ಸಾಲಯಗಳಿಗೆ ಬರುವ ಗರ್ಭಿಣಿಯರು, ಮಕ್ಕಳು ಸೇರಿದಂತೆ ಆಸ್ಪತ್ರೆಗಳಿಗೆ ಬರುವ ಹೊರ ರೋಗಿಗಳು (ಕಡಿಮೆ ಅಪಾಯದ ವರ್ಗ), ಬಸ್ ಕಂಡಕ್ಟರ್, ಆಟೋ ಡ್ರೈವರ್, ತರಕಾರಿ ಮಾರುಕಟ್ಟೆಗಳಲ್ಲಿನ ವ್ಯಾಪಾರಿಗಳು, ವೈದ್ಯರು, ಲ್ಯಾಬ್ ತಂತ್ರಜ್ಞರು, ರೇಡಿಯೋಗ್ರಾಫರ್‌ಗಳು, ಆಂಬ್ಯುಲೆನ್ಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲ ಆರೋಗ್ಯ ಕಾರ್ಯಕರ್ತರು, ಕಂಟೈನ್ಮೆಂಟ್ ಝೋನ್‌ಗಳಲ್ಲಿನ ಜನರು, ಮಾಲ್, ಮಾರುಕಟ್ಟೆ, ರೀಟೇಲ್ ಮಳಿಗೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಸಿಗುವ ಜನರು, ಪೌರಕಾರ್ಮಿಕರು, ವೇಸ್ಟ್ ಪಿಕ್ಕರ್ (ಮಧ್ಯಮ ಅಪಾಯದ ವರ್ಗ), 60 ವರ್ಷ ಮೇಲ್ಪಟ್ಟವಯೋವೃದ್ಧರು, ಕಿಡ್ನಿ ಸಮಸ್ಯೆ, ಹೃದ್ರೋಗ, ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಪೂರ್ವ ಕಾಯಿಲೆಗಳಿಂದ ಬಳಲುತ್ತಿರುವ ಜನರ (ಹೆಚ್ಚಿನ ಅಪಾಯದ ವರ್ಗ) ಪರೀಕ್ಷೆ ಮೂಲಕ ಈ ಸರ್ವೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸರ್ವೆ ಕಾರ್ಯದಲ್ಲಿ ನಿಮ್ಹಾನ್ಸ್ ಪ್ರಾದೇಶಿಕ ನಿರ್ದೇಶಕ ಡಾ.ವಿ.ರವಿ, ವೈರಾಣು ತಜ್ಞರಾದ ಡಾ. ಅನಿತಾ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ಡಾ. ಗಿರಿಧರ ಬಾಬು ಸೇರಿದಂತೆ ಆರೋಗ್ಯ ಕ್ಷೇತ್ರದ ತಜ್ಞರು ಸಮೀಕ್ಷೆ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ