ಪ್ರಜ್ವಲ್ ರೇವಣ್ಣ ಪುರುಷತ್ವ ಪರೀಕ್ಷೆಗೆ ಕೋರ್ಟ್ ಗ್ರೀನ್ ಸಿಗ್ನಲ್!

By Suvarna News  |  First Published Jun 5, 2024, 3:57 PM IST

ಹಾಸನ ಮಾಜಿ ಸಂಸದ, ಪೆನ್‌ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಪುರುಷತ್ವ ಪರೀಕ್ಷೆಗೆ ಕೋರ್ಟ್ ಒಪ್ಪಿಗೆ ನೀಡಿದೆ.


ಬೆಂಗಳೂರು (ಜೂ.5): ಹಾಸನ ಮಾಜಿ ಸಂಸದ, ಪೆನ್‌ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಪುರುಷತ್ವ ಪರೀಕ್ಷೆಗೆ ಕೋರ್ಟ್ ಒಪ್ಪಿಗೆ ನೀಡಿದೆ. ಅತ್ಯಾಚಾರ ಆರೋಪದಲ್ಲಿ ಪ್ರಜ್ವಲ್ ರೇವಣ್ಣಗೆ ಇಂದು ಪುರುಷತ್ವ ಪರೀಕ್ಷೆ ನಡೆಯಲಿದೆ. ಪ್ರಜ್ವಲ್ ಪುರುಷತ್ವ ಪರೀಕ್ಷೆಗೆ ಮಂಡಗಳವಾರ ಕೋರ್ಟ್ ನಲ್ಲಿ  ಎಸ್ ಐ ಟಿ ತಂಡ ಪರ್ಮಿಷನ್ ಪಡೆದುಕೊಂಡಿದೆ.

ಹಾಸನದಲ್ಲಿ ಪೆನ್ ಡ್ರೈವ್ ಕಮಾಲ್, ಪ್ರಜ್ವಲ್‌ಗೆ ಸೋಲು, 2 ದಶಕಗಳ ನಂತರ ಕಾಂಗ್ರೆಸ್‌ಗೆ ಭರ್ಜರಿ ಗೆಲವು!

Tap to resize

Latest Videos

undefined

ಜೂನ್‌ 6 ರಂದು ಪ್ರಜ್ವಲ್ ಕಸ್ಟಡಿ ಅಂತ್ಯ ಹಿನ್ನೆಲೆ ಇಂದು ಪುರುಷತ್ವ ಪರೀಕ್ಷೆ ನಡೆಸಲು ಎಸ್ ಐ ಟಿ ನಿರ್ಧಾರ ಮಾಡಿದೆ. ಕಾನೂನಿನ ಪ್ರಕಾರ ಅತ್ಯಾಚಾರ ಆರೋಪಿಗಳಿಗೆ ಪುರುಷತ್ವ ಪರೀಕ್ಷೆ ಮಾಡಿಸಲಾಗುತ್ತದೆ. ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಜ್ವಲ್ ಗೆ ಪುರುಷತ್ವ ಪರೀಕ್ಷೆ ನಡೆಯಲಿದೆ.  

ತನಿಖೆಗೆ ಪ್ರಜ್ವಲ್ ಸ್ಪಂದಿಸದ ಹಿನ್ನೆಲೆಯಲ್ಲಿ ಹಾಸನ ಹಾಗೂ ಬಸವನಗುಡಿಯ ಮನೆಗೆ ಕರೆದೊಯ್ದು ಎಸ್‌ಐಟಿ ಸ್ಪಾಟ್ ಮಹಜರ್ ನಡೆಸಬೇಕು. ಹೀಗಾಗಿ ನಾಳೆ ಮತ್ತೆ ಕಸ್ಟಡಿಗೆ ಪಡೆಯಲು ಎಸ್ ಐ ಟಿ ನಿರ್ಧಾರ ಮಾಡಿದೆ.

ಪ್ರದೀಪ್‌ ಈಶ್ವರ್ ಕೆಲವೇ ಕ್ಷಣಗಳಲ್ಲಿ ರಾಜೀನಾಮೆ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್!

ಎಸ್‌ಐಟಿ ಅಧಿಕಾರಿಗಳ ಮೂಲಕ ಸೋಲಿನ ಸುದ್ದಿ ತಿಳಿದ ಪ್ರಜ್ವಲ್‌
ತಾವು ಲೋಕಸಭಾ ಚುನಾವಣೆಯಲ್ಲಿ ಪರಾಜಿತರಾದ ಸುದ್ದಿಯನ್ನು ವಿಶೇಷ ತನಿಖಾ ದಳದ ಅಧಿಕಾರಿಗಳಿಂದ ಮಾಹಿತಿ ತಿಳಿದು ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮಂಗಳವಾರ ನಿರಾಸೆಗೊಂಡಿದ್ದಾರೆ. ಚುನಾವಣಾ ಫಲಿತಾಂಶ ತಿಳಿಯಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಪ್ರಜ್ವಲ್ ರೇವಣ್ಣ ಕೋರಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ಫಲಿತಾಂಶದ ಕುರಿತು ಅವರಿಗೆ ನಿರಂತರವಾಗಿ ಅಧಿಕಾರಿಗಳು ಮಾಹಿತಿ ಒದಗಿಸಿದ್ದರು. ಮತ ಎಣಿಕೆ ಶುರುವಾದ ಆರಂಭದಲ್ಲಿ ಸಮಾಧಾನದಿಂದಲೇ ಇದ್ದ ಪ್ರಜ್ವಲ್ ಅವರಿಗೆ ನಾಲ್ಕೈದು ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಗೆಲುವಿನ ಅಂತರ ಏರಿಕೆಯಾಗುತ್ತಿದ್ದಂತೆ ನಿರಾಸೆಗೊಂಡಿದ್ದಾರೆ. ಅಂತಿಮವಾಗಿ ಸೋಲುಂಡ ವಿಚಾರ ತಿಳಿದು ಪ್ರಜ್ವಲ್ ಅವರ ಮುಖವೂ ಕಳಹೀನವಾಯಿತು ಎಂದು ಮೂಲಗಳು ಹೇಳಿವೆ.

click me!