ಚಾಮರಾಜನಗರ ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ದಂತಹ ಪಿಡುಗು ಇನ್ನೂ ಜೀವಂತವಾಗಿದೆ. ಇದೀಗ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕುಟುಂಬವೊಂದಕ್ಕೆ 6 ಲಕ್ಷ ರೂಪಾಯಿ ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ವಿಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ವರದಿ: ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಮಾ.5): ಚಾಮರಾಜನಗರ ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ದಂತಹ ಪಿಡುಗು ಇನ್ನೂ ಜೀವಂತವಾಗಿದೆ. ಇದೀಗ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕುಟುಂಬವೊಂದಕ್ಕೆ 6 ಲಕ್ಷ ರೂಪಾಯಿ ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ವಿಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇಂದಿಗೂ ಸಹ ಸಾಮಾಜಿಕ ಬಹಿಷ್ಕಾರದಂತಹ ದರಿದ್ರ ಪದ್ಧತಿಗಳು ಜೀವಂತವಾಗಿ ಇವೆ. ಇದೀಗ ಕೊಳ್ಳೇಗಾಲ ತಾಲೋಕಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ದಲಿತ ಯುವತಿ ವಿವಾಹವಾಗಿದ್ದಕ್ಕೆ ಉಪ್ಪಾರ ಸಮುದಾಯದ ಕುಟುಂಬವೊಂದಕ್ಕೆ ಅದೇ ಸಮುದಾಯದವರು ಸಾಮಾಜಿಕ ಬಹಿಷ್ಕಾರ ವಿಧಿಸಿದ್ದಾರೆ. ಗ್ರಾಮದ ಉಪ್ಪಾರ ಸಮುದಾಯದ ಗೋವಿಂದಶೆಟ್ಟಿ ಎಂಬುವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೋಕು ಹೂವಿನಕೊಪ್ಪಲು ಗ್ರಾಮದ ಪರಿಶಿಷ್ಯ ಜಾತಿಯ ಶ್ವೇತ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು.
undefined
ಮಳವಳ್ಳಿ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ನೊಂದಣಿ ಆಗಿತ್ತು. ಈ ದಂಪತಿ ಮಳವಳ್ಳಿಯಲ್ಲಿ ವಾಸವಿದ್ದರು. ಇವರ ಅಂತರ್‌ಜಾತಿ ಮದುವೆ ಬಗ್ಗೆ ಗೊತ್ತಾಗಿ ಇತ್ತೀಚೆಗೆ ನ್ಯಾಯಪಂಚಾಯಿತಿ ಮಾಡಿದ ಗ್ರಾಮದ ಯಜಮಾನರು 1 ಲಕ್ಷ 25 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ದಂಡ ಪಾವತಿಸಿದ ಗೋವಿಂದರಾಜು ಮತ್ತೆ ಗ್ರಾಮಕ್ಕೆ ಬರಲು ಬೇಸರವಾಗಿ ಮಳವಳ್ಳಿಯಲ್ಲೇ ವಾಸವಿದ್ದರು. ಇತ್ತೀಚೆಗೆ ಗೋವಿಂದರಾಜು ದಂಪತಿ ಕುಣಗಳ್ಳಿ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಈ ಮಾಹಿತಿ ಅರಿತ ಗ್ರಾಮದ ಯಜಮಾನರು ಗೋವಿಂದಶೆಟ್ಟಿ ಅವರ ತಂದೆ ವೆಂಕಟಶೆಟ್ಟಿ ತಾಯಿ ಸಂಗಮ್ಮ ಹಾಗು ದಂಪತಿಗೆ ಮತ್ತೆ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದರು. ಮಾರ್ಚ್ 3 ರೊಳಗೆ ದಂಡದ ಹಣ ಪಾವತಿಸುವಂತೆ ಸೂಚಿಸಿದ್ದರು.
ಆದರೆ ಗೋವಿಂದರಾಜು ದಂಡ ಪಾವತಿಸಲು ಸಾಧ್ಯವಾಗದೆ ಕೊಳ್ಳೇಗಾಲ ಡಿವೈಎಸ್ಪಿ ಕಚೇರಿಗೆ ದೂರು ಸಲ್ಲಿಸಿದ್ದರು. ತಮ್ಮ ವಿರುದ್ದ ದೂರು ನೀಡಿದ ಕಾರಣ ಸಮುದಾಯದ ಯಜಮಾನರು ದಂಡದ ಮೊತ್ತವನ್ನು 6 ಲಕ್ಷ ರೂಪಾಯಿಗೆ ಹೆಚ್ಚಿಸಿದ್ದಾರೆ. ಗ್ರಾಮಸ್ಥರ ಜೊತೆ ಮಾತನಾಡುವಂತಿಲ್ಲ, ಅಂಗಡಿ ಗಳಲ್ಲಿ ದಿನಸಿ ಹಾಲು, ತರಕಾರಿ ಖರೀದಿಸುವಂತಿಲ್ಲ ನಲ್ಲಿಯಲ್ಲಿ ನೀರನ್ನು ತೆಗೆದುಕೊಳ್ಳುವಂತಿಲ್ಲ ಎಂದು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಗೋವಿಂದರಾಜು ಆರೋಪಿಸಿದ್ದಾರೆ.
ಮಾಜಿ ಪತಿಗಾಗಿ ಎರಡನೇ ಪತಿ ಮನೆಯಲ್ಲಿಯೇ ದರೋಡೆ, ಲಕ್ಷಾಂತರ ಹಣ-ಚಿನ್ನ ಕದ್ದು ಓ
ಆದರೆ ತಾವು ಯಾವುದೇ ರೀತಿಯ ಬಹಿಷ್ಕಾರ ಹಾಕಿಲ್ಲ ಹಾಗು ಅವರು ಇಲ್ಲಿ ವಾಸವಾಗಿಲ್ಲ. ಅದು ಅವರ ಕುಟುಂಬಕ್ಕೆ ಸಂಭಂದ ಪಟ್ಟ ವಿಷಯ ಗೋವಿಂದರಾಜುವನ್ನು ಅವರ ತಂದೆಯೇ ಮನೆಗೆ ಸೇರಿಸುತ್ತಿಲ್ಲ. ಹಾಗಾಗಿ ತಂದೆಯ ಮೇಲೆ ದೂರು ನೀಡುವ ಬದಲು ತಮ್ಮ ಮೇಲೆ ದೂರು ನೀಡಿದ್ದಾರೆ. ನಾವು ಇದುವರೆಗೂ ಯಾವುದೇ ರೀತಿಯ ದಂಡವನ್ನು ವಿಧಿಸಿಲ್ಲ. ಎಂದು ಉಪ್ಪಾರ ಸಮುದಾಯದ ಯಜಮಾನರು ಪ್ರತ್ಯಾರೋಪ ಮಾಡುತ್ತಿದ್ದಾರೆ.
MYSURU: ದಶಕದ ದಾಂಪತ್ಯಕ್ಕೆ ಅಡ್ಡ ಬಂದವನ ರುಂಡ ತುಂಡರಿಸಿದ ಗಂಡ!
ಇದೀಗ ಗೋವಿಂದರಾಜು ತಮಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಬಗ್ಗೆ ಮಾಂಬಳ್ಳಿ ಪೊಲೀಸ್ ಠಾಣೆ ಗೆ ದೂರು ಸಲ್ಲಿಸಿ ತಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಗ್ರಾಮದ ಉಪ್ಪಾರ ಸಮುದಾಯದ ಯಜಮಾನರು ಸೇರಿದಂತೆ 15 ಮಂದಿಯ ಮೇಲೆ ಎಫ್.ಐ.ಆರ್. ದಾಖಲಿಸಿದ್ದು ಕಾನೂನು ಕ್ರಮ ಜರುಗಿಸಿದ್ದಾರೆ.