ಗೋವಿಂದ ಕಾರಜೋಳಗೆ ಕೊರೋನಾ ಸೋಂಕು ದೃಢ| ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲು| ನನ್ನ ಸಂಪರ್ಕದಲ್ಲಿರುವವರು ಮುಂಜಾಗೃತೆ ವಹಿಸಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಕ್ವಾರಂಟೈನ್‌ನಲ್ಲಿದ್ದು, ಮುಂಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದ ಡಿಸಿಎಂ|
ಬೆಂಗಳೂರು(ಸೆ.23): ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಮಂಗಳವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋವಿಡ್ 19 ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಎಂದು ದೃಢ ಪಟ್ಟಿದ್ದು,
ತಮ್ಮೆಲ್ಲರ ಹಾರೈಕೆಯಿಂದ ಕೊರೊನಾ ವೈರಾಣುವಿನಿಂದ ಶೀಘ್ರವಾಗಿ ಗುಣಮುಖವಾಗಿ ಎಂದಿನಂತೆ ಕಾರ್ಯಪ್ರೌವೃತ್ತನಾಗುತ್ತೇನೆ.
2/2
undefined
ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ. ತಮ್ಮೆಲ್ಲರ ಹಾರೈಕೆಯಿಂದಾಗಿ ಸೋಂಕಿನಿಂದ ಶೀಘ್ರ ಗುಣಮುಖನಾಗಿ ಎಂದಿನಂತೆ ಕಾರ್ಯ ಪ್ರವೃತ್ತನಾಗುತ್ತೇನೆ ಎಂದು ತಿಳಿಸಿದ್ದಾರೆ.
ಕೋವಿಡ್ 19 ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಎಂದು ದೃಢ ಪಟ್ಟಿದ್ದು, ನನಗೆ ಯಾವುದೇ ರೋಗಲಕ್ಷಣಗಳು ಇಲ್ಲದಿದ್ದರೂ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ.
ನನ್ನ ಸಂಪರ್ಕದಲ್ಲಿದ್ದವರು ಮುಂಜಾಗ್ರತೆವಹಿಸಿ, ಕೋವಿಡ್ ಪರೀಕ್ಷೆಗೊಳಪಟ್ಟು ಕ್ವಾರಂಟೈನ್ ನಲ್ಲಿರುವಂತೆ ಎಂದು ಕೋರುತ್ತೇನೆ.
1/2
ನನ್ನ ಸಂಪರ್ಕದಲ್ಲಿರುವವರು ಮುಂಜಾಗೃತೆ ವಹಿಸಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಕ್ವಾರಂಟೈನ್‌ನಲ್ಲಿದ್ದು, ಮುಂಜಾಗ್ರತೆ ವಹಿಸಬೇಕು ಎಂದು ಕಾರಜೋಳ ಅವರು ಟ್ವೀಟರ್ ಮೂಲಕ ಮನವಿ ಮಾಡಿದ್ದಾರೆ.