Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, 12,000 ಹೊಸ ಕೇಸ್ ಪತ್ತೆ

Published : Jan 09, 2022, 09:03 PM IST
Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, 12,000 ಹೊಸ ಕೇಸ್ ಪತ್ತೆ

ಸಾರಾಂಶ

* ಕರ್ನಾಟಕದಲ್ಲಿ ಕೊರೋನಾ ಸ್ಫೋಟ,  * 24 ಗಂಟೆಗಳಲ್ಲಿ 12,000 ಹೊಸ ಕೇಸ್ ಪತ್ತೆ * ಮಾಹಿತಿ ನೀಡಿದ ಆರೋಗ್ಯ ಇಲಾಖೆ

ಬೆಂಗಳೂರು, (ಜ.09): ಕರ್ನಾಟಕದಲ್ಲಿ(Karnataka) ಕೊರೋನಾ ಸೋಂಕು (Coronavirus) ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. 

ಇಂದು (ಜ.09)  1,89,499 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಬರೋಬ್ಬರಿ 12,000 ಹೊಸ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಅದರಲ್ಲೂ ಬೆಂಗಳೂರಲ್ಲಿ 9,020 ಹೊಸ ಕೇಸ್‍ಗಳು ದೃಢಪಟ್ಟಿವೆ.

IIT Madras Analysis: ಫೆಬ್ರವರಿ 1ರಿಂದ 15ರೊಳಗೆ ಕೋವಿಡ್‌ ಪರಾಕಾಷ್ಠೆ

ಈ ಮೂಲಕ ಕೊರೋನಾ ಸೋಂಕಿರ ಸಂಖ್ಯೆ 3051958ಕ್ಕೆ ಏರಿದ್ರೆ,  38370 ಜನರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 901 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 29,63,957 ಮಂದಿ ಗುಣಮುಖರಾಗಿದ್ದಾರೆ.

ಇನ್ನು ರಾಜ್ಯದಲ್ಲಿ 49,602 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಪಾಸಿಟಿವಿ ರೇಟ್ 6.33ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬಾಗಲಕೋಟೆ 10, ಬಳ್ಳಾರಿ 107, ಬೆಳಗಾವಿ 105, ಬೆಂಗಳೂರು ಗ್ರಾಮಾಂತರ 98, ಬೆಂಗಳೂರು ನಗರ 9020, ಬೀದರ್ 20, ಚಾಮರಾಜನಗರ 26, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 78, ಚಿತ್ರದುರ್ಗ 24, ದಕ್ಷಿಣ ಕನ್ನಡ 298, ದಾವಣಗೆರೆ 30, ಧಾರವಾಡ 147, ಗದಗ 7, ಹಾಸನ 182, ಹಾವೇರಿ 8, ಕಲಬುರಗಿ 98, ಕೊಡಗು 29, ಕೋಲಾರ 83, ಕೊಪ್ಪಳ 19, ಮಂಡ್ಯ 261, ಮೈಸೂರು 398, ರಾಯಚೂರು 7, ರಾಮನಗರ 20, ಶಿವಮೊಗ್ಗ 198, ತುಮಕೂರು 190, ಉಡುಪಿ 340, ಉತ್ತರ ಕನ್ನಡ 94, ವಿಜಯಪುರ 49 ಹಾಗೂ ಯಾದಗಿರಿಯಲ್ಲಿ 10 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 

ರಾಜ್ಯದಲ್ಲಿ ಕೊರೋನಾ ಜತೆಗೆ ಒಮಿಕ್ರಾನ್ ಸ್ಫೋಟವಾಗಿದ್ದು,  ಭಾನುವಾರ  ಇಂದು 108 ಒಮಿಕ್ರಾನ್ ಕೇಸ್ ಪತ್ತೆಯಾಗಿದೆ. ಇದರೊಂದಿಗೆ
 ಕೇಸ್‍ಗಳ ಸಂಖ್ಯೆ 441ಕ್ಕೆ ಹೆಚ್ಚಿದೆ. ನಿನ್ನೆ(ಶನಿವಾರ) ಒಂದೇ ದಿನ 108 ಆಫ್ರಿಕಾ ವೈರಸ್ ಕೇಸ್ ಬೆಳಕಿಗೆ ಬಂದಿವೆ. ಸದ್ಯ ದೇಶದಲ್ಲಿ 3600ಕ್ಕೂ ಹೆಚ್ಚು ಇವೆ.

ದೇಶದಲ್ಲಿ ಕೋವಿಡ್‌ (Covid 19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ‘ಆರ್‌-ನಾಟ್‌’ (ಒಬ್ಬ ಸೋಂಕಿತ ಎಷ್ಟುಮಂದಿಗೆ ವೈರಾಣು ಪಸರಿಸುತ್ತಾನೆ ಎಂಬ ಲೆಕ್ಕ) ದರ ಸಾರ್ವಕಾಲಿಕ ದಾಖಲೆಯ 4ಕ್ಕೇರಿದೆ ಎಂದು ಮದ್ರಾಸ್‌ ಐಐಟಿಯ (Madras IIT) ಪ್ರಾಥಮಿಕ ಅಧ್ಯಯನ ತಿಳಿಸಿದೆ. ಇದೇ ವೇಳೆ, ಈಗ ಕಾಣಿಸಿಕೊಂಡಿರುವ ಕೊರೋನಾ (Coronavirus) ಅಲೆ ಫೆ.1ರಿಂದ 15ರೊಳಗೆ ಉತ್ತುಂಗ ತಲುಪಲಿದೆ. 

ಗಮನಾರ್ಹ ಎಂದರೆ, ಈ ಬಾರಿಯ ಅಲೆ ಮೊದಲೆರಡು ಅಲೆಗಳಿಗಿಂತ ವಿಭಿನ್ನವಾಗಿರಲಿದ್ದು, ಇದು ಪರಾಕಾಷ್ಠೆ ಮುಟ್ಟಿದಾಗ ಭಾರಿ ಸಂಖ್ಯೆಯ ಸೋಂಕಿತರು ಕಾಣಿಸಿಕೊಳ್ಳಲಿದ್ದಾರೆ ಎಂದು ಎಚ್ಚರಿಕೆಯ ಗಂಟೆ ಮೊಳಗಿಸಿದೆ. ಡಿ.25ರಿಂದ ಡಿ.31ರವರೆಗಿನ ವಾರದಲ್ಲಿ ರಾಷ್ಟ್ರೀಯ ‘ಆರ್‌-ನಾಟ್‌’ ದರ 2.9ರಷ್ಟಿತ್ತು. ಜ.1ರಿಂದ 6ರವರೆಗಿನ ವಾರದಲ್ಲಿ ಇದು 4ಕ್ಕೆ ಹೆಚ್ಚಳವಾಗಿದೆ ಎಂದು ಕಂಪ್ಯೂಟರ್‌ ಮಾದರಿಯನ್ನು ವಿಶ್ಲೇಷಣೆಗೊಳಪಡಿಸಿ ಮದ್ರಾಸ್‌ ಐಐಟಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್