ರಾಜ್ಯದಲ್ಲಿ ಮಹಾಮಾರಿ ಕೊರೋನಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೊರೋನಾದಿಂದ ಸಾವಿನ ಸಂಖ್ಯೆಯೂ 26 ಜಿಲ್ಲೆಗಳಲ್ಲಿ ಶೂನ್ಯವಾಗಿದೆ
ಬೆಂಗಳೂರು (ನ.23): ರಾಜ್ಯದಲ್ಲಿ ಭಾನುವಾರ ಮತ್ತೆ ದಾಖಲೆ ಸಂಖ್ಯೆಯ 1.26ಲಕ್ಷಕ್ಕೂ ಹೆಚ್ಚು ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದ್ದು 1,704 ಮಂದಿಗೆ ಸೋಂಕು ದೃಢಪಟ್ಟಿದೆ. 13 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 1537 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಸೋಂಕಿಗೆ ತುತ್ತಾದ 8,73,046 ಮಂದಿ ಪೈಕಿ 8,36,505 ಮಂದಿ ಗುಣಮುಖರಾಗಿದ್ದಾರೆ. 11,654 ಜನ (19 ಅನ್ಯಕಾರಣದ ಪ್ರಕರಣ ಹೊರತುಪಡಿಸಿ) ಇದುವರೆಗೂ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಳಿದ 24,868 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಆರೋಗ್ಯ ಗಂಭೀರವಾಗಿರುವ 470 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
undefined
'ಭಾರತದಲ್ಲಿ ಕೊರೋನಾ ಲಸಿಕೆ ತೆಗೆದುಕೊಳ್ಳಲು ಜನ ಸಿದ್ಧರಿರುವುದೇ ಖುಷಿ ವಿಚಾರ' ...
ರಾಜ್ಯದಲ್ಲಿ ಭಾನುವಾರ 20,399 ರಾರಯಪಿಡ್ ಆಂ್ಯಟಿಜನ್ ಪರೀಕ್ಷೆ, 1,06,505 ಆರ್‌ಟಿಪಿಸಿಆರ್ ಪರೀಕ್ಷೆ ಸೇರಿ ಒಟ್ಟು 1,26,904 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಶನಿವಾರ 1.25 ಲಕ್ಷ ಪರೀಕ್ಷೆ ನಡೆಸಿದ್ದೇ ಇದುವರೆಗಿನ ದಾಖಲೆಯಾಗಿತ್ತು.
ಬೆಂಗಳೂರಲ್ಲಿ 1039 ಪ್ರಕರಣ:
ಭಾನುವಾರ ಬೆಂಗಳೂರಿನಲ್ಲಿ 1039 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿರುವ ವರದಿಯಾಗಿದೆ. ಉಳಿದಂತೆ ಮೈಸೂರು 100, ದಕ್ಷಿಣ ಕನ್ನಡ 46, ಹಾಸನ 44, ಬೆಂಗಳೂರು ಗ್ರಾಮಾಂತರ 42, ಮಂಡ್ಯ, ಬೆಳಗಾವಿ, ರಾಯಚೂರು ತಲಾ 32, ವಿಜಯಪುರ 27, ಹಾವೇರಿ 25,ದಾವಣಗೆರೆ 24, ಉಡುಪಿ, ಉತ್ತರ ಕನ್ನಡ ತಲಾ 23, ಬಳ್ಳಾರಿ 22, ಶಿವಮೊಗ್ಗ, ಕೊಪ್ಪಳ ತಲಾ 21, ಚಿತ್ರದುರ್ಗ 18, ಚಾಮರಾಜನಗರ 16, ತುಮಕೂರು, ಕೋಲಾರ ತಲಾ 14, ಕಲಬುರಗಿ, ಧಾರವಾಡ ತಲಾ 12, ಚಿಕ್ಕಮಗಳೂರು 11, ಕೊಡಗು, ಗದಗ ತಲಾ 10, ರಾಮನಗರ, ಯಾದಗಿರಿ ತಲಾ 9, ಚಿಕ್ಕಬಳ್ಳಾಪುರ 7, ಬೀದರ್ 6, ಬಾಗಲಕೋಟೆ 4 ಪ್ರಕರಣಗಳು ದೃಢಪಟ್ಟಿವೆ.
ಭಾನುವಾರದ ಸಾವಿನ ಪ್ರಕಣಗಳಲ್ಲಿ ಬೆಂಗಳೂರಿನಲ್ಲಿ 10 ಮಂದಿ, ಬಳ್ಳಾರಿ, ಧಾರವಾಡ ಮತ್ತು ಮೈಸೂರಿನಲ್ಲಿ ತಲಾ ಒಬ್ಬರು ಸೋಂಕಿತರು ಮೃತಪಟ್ಟಿದ್ದಾರೆ ಎಂದು ಇಲಾಖೆ ವರದಿ ನೀಡಿದೆ.