ರಾಯಚೂರಲ್ಲಿ ಶಾಸಕರ ಮಕ್ಕಳ ವಿವಾಹ ವಿವಾದ

By Web DeskFirst Published Jan 30, 2019, 9:40 AM IST
Highlights

ರಾಯಚೂರಲ್ಲಿ ವಿವಾದ ವಿವಾದವೀಗ ಭುಗಿಲೆದ್ದಿದೆ. ಕೃಷಿ ವಿವಿ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಅವರ ಪುತ್ರ ಸಮನ್ ಮತ್ತು ಶಾಸಕ ಶರಣಬಸಪ್ಪ ದರ್ಶನಾಪುರ ಅವರ ಪುತ್ರಿ ಸೌಜನ್ಯರ ಮದುವೆ ಸಮಾರಂಭ ಹಮ್ಮಿಕೊಂಡಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. 

ರಾಯಚೂರು: ಇಲ್ಲಿನ ಕೃಷಿ ವಿವಿ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಅವರ ಪುತ್ರ ಸಮನ್ ಮತ್ತು ಶಾಸಕ ಶರಣಬಸಪ್ಪ ದರ್ಶನಾಪುರ ಅವರ ಪುತ್ರಿ ಸೌಜನ್ಯರ ಮದುವೆ ಸಮಾರಂಭ ಹಮ್ಮಿಕೊಂಡಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. 

ಇದೇ ಫೆ.1 ರಂದು ವಿವಿ ಆವರಣ ದಲ್ಲಿ ಈ ಶಾಸಕದ್ವಯರ ಮಕ್ಕಳ ವಿವಾ ಹದ ಸಿದ್ಧತೆಗಳು ಸಾಗಿದ್ದು, ಇದಕ್ಕಾಗಿ ಬೃಹತ್ ಪೆಂಡಾಲ್, ವಾಹನಗಳಿಗೆ ಪಾರ್ಕಿಂಗ್ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. 

ಇದರಿಂದ ಶೈಕ್ಷ ಣಿಕ ವಾತಾವರಣಕ್ಕೆ ಅಡ್ಡಿಯಾಗುತ್ತದೆ. ಸರ್ಕಾರಿ ಜಾಗದಲ್ಲಿ ಮದುವೆ, ಖಾಸಗಿ ಸಮಾರಂಭವನ್ನು ಆಯೋಜಿ ಸುವ ಪದ್ಧತಿ ಸರಿಯಲ್ಲ ಎಂದು ಸಾರ್ವಜನಿಕರು ಟೀಕಿಸಿದ್ದಾರೆ. ಹಿಂದೆ ಕೃಷಿ ಕಾಲೇಜು ಇದ್ದಾಗ ಮಾಜಿ ಸಚಿವ ಎಂ.ಎಸ್. ಪಾಟೀಲ್ ಅವರ ಮಗನ ಮದುವೆ ಇದೇ ಸ್ಥಳ ದಲ್ಲಿ ನೆರವೇರಿತ್ತು. ಆ ಸಂದರ್ಭದಲ್ಲಿ ಯೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. 

ಹೀಗಾಗಿ ನಂತರ ಕೃಷಿ ವಿವಿ ಆಡಳಿತ ಮಂಡಳಿಯ ಸದಸ್ಯರು ಸೇರಿಕೊಂಡು ಕೃಷಿ ವಿವಿಯಲ್ಲಿ ಕೆಲಸ ಮಾಡಿದವರಿಗೆ ರಿಯಾಯಿತಿ ದರದಲ್ಲಿ ಮತ್ತು ಅನ್ಯರಿಗೆ ಬೇರೆ ದರವನ್ನು ನಿಗದಿಪಡಿಸಿ ಸಮಾರಂಭ ಮಾಡಲು ನಿರ್ಧರಿಸಿತು. 

ಅದರಂತೆ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ ಅವರು ಎರಡ್ಮೂರು ವರ್ಷ ಕೃಷಿ ವಿವಿಯಲ್ಲಿ ಕೆಲಸ ಮಾಡಿದ್ದರಿಂದ ರಿಯಾಯಿತಿ ದರದಲ್ಲಿ ನೀಡಲಾಗಿದೆ ಎಂದು ವಿವಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

click me!