ಸಿದ್ಧಗಂಗಾ ಶ್ರೀಗಳ ಸಂತಾಪದ ವೇಳೆ ಎಡವಟ್ಟು : ಕ್ಷಮೆ ಕೇಳಿದ ಮೇಯರ್

By Web DeskFirst Published Jan 30, 2019, 9:00 AM IST
Highlights

ಶಿವೈಕ್ಯರಾದ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳಿಗೆ ಸಂತಾಪ ಸೂಚಿಸಲು ಕರೆದಿದ್ದ ಸಭೆಯಲ್ಲಿ ಬಿಬಿಎಂಪಿ ಸದಸ್ಯರು ಎಡವಟ್ಟು ಮಾಡಿದ್ದು, ಈ ಸಂಬಂಧ ಮೇಯರ್ ಕ್ಷಮೆಯಾಚಿಸಿದ್ದಾರೆ. 

ಬೆಂಗಳೂರು: ಇತ್ತೀಚೆಗೆ ಶಿವೈಕ್ಯರಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಸಂತಾಪ ಸೂಚಿಸಲು ಕರೆದಿದ್ದ ಸಭೆಯಲ್ಲಿ ಶ್ರೀಗಳ ಭಾವಚಿತ್ರದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಮಾಡಿದ ಎಡವಟ್ಟಿ ನಿಂದಾಗಿ ಬಿಬಿ ಎಂಪಿ ಮೇಯರ್ ಗಂಗಾಂಬಿಕೆ ಕ್ಷಮೆ ಕೇಳಿದ ಪ್ರಸಂಗ ನಡೆಯಿತು. 

ಮಂಗ ವಾರ ಸಿದ್ಧಗಂಗಾ ಶ್ರೀಗಳಿಗೆ ಸಂತಾಪ ಸೂಚಿಸಲು ಕೆಂಪೇಗೌಡ ಪೌರ  ಸಭಾಂಗಣದ ಆವರಣದಲ್ಲಿ ಶ್ರೀಗಳ ಭಾವಚಿತ್ರ ಇಡಲಾಗಿತ್ತು. ಆದರೆ, ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಶ್ರೀಗಳ ಭಾವಚಿತ್ರದ ಮೇಲೆ ‘ಅ’ ದೇವರು ನಿಮ್ಮ ಆತ್ಮಕ್ಕೆ ಶಾಂತಿ ‘ನೀಡಲ್ಲಿ’ ಎಂದು ತಪ್ಪಾಗಿ ಬರೆಯಲಾಗಿತ್ತು. ಜೊತೆಗೆ ಇಮೋಜಿ ಬಳಕೆ ಮಾಡಲಾಗಿತ್ತು. 

ಅಧಿಕಾರಿ, ಸಿಬ್ಬಂದಿ ಮಾಡಿದ ಎಡವಟ್ಟು ತಿಳಿಯುತ್ತಿದ್ದಂತೆ ಮೇಯರ್ ಗಂಗಾಂಬಿಕೆ ಸರಿಪಡಿಸುವಂತೆ ಸೂಚನೆ ನೀಡಿದರು. ಅಲ್ಲದೇ ಆಗಿರುವ ತಪ್ಪಿಗೆ ಸಾಮಾನ್ಯಸಭೆಯಲ್ಲಿ ಕ್ಷಮೆ ಕೇಳಿದರು.

click me!