
ಮಂಗಳೂರು (ಮೇ.1): ಹಿಂದೂಗಳು ತಮ್ಮ ಮನೆಯಲ್ಲಿ ಒಂದೊಂದು ತಲ್ವಾರ್ ಇಟ್ಟುಕೊಳ್ಳಿ. ಹಿಂದೂ ಮಹಿಳೆಯರು ವ್ಯಾನಿಟಿ ಬ್ಯಾಗ್‌ನಲ್ಲಿ ಚೂರಿ ಇಟ್ಟುಕೊಳ್ಳಿ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಕೇರಳ ರಾಜ್ಯ ಮಂಜೇಶ್ವರದ ವರ್ಕಾಡಿಯಲ್ಲಿ ಹಿಂದೂ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದು, ಜಾಲತಾಣದಲ್ಲಿ ಪರ- ವಿರೋಧ ಅಭಿಪ್ರಾಯಗಳಿಗೆ ಕಾರಣವಾಗಿದೆ.
ಪಹಲ್ಗಾಮ್ ದಾಳಿ ವೇಳೆ ಉಗ್ರರಿಗೆ ತಲ್ವಾರ್ ತೋರಿಸಿದ್ದರೂ ಸಾಕಿತ್ತು. ಓಡಿ ಹೋಗ್ತಿದ್ರು. ಹಿಂದೂಗಳು ಕೇವಲ ತಲ್ವಾರ್ ತೋರಿಸಿದ್ದರೆ ಕಥೆಯೇ ಬೇರೆಯಾಗುತ್ತಿತ್ತು ಎಂದು ಹೇಳಿದ ಅವರು, ಹಿಂದೂಗಳು ಮನೆಯಲ್ಲಿ ಒಂದೊಂದು ತಲ್ವಾರ್ ಇಟ್ಟುಕೊಳ್ಳಲು ಕರೆ ನೀಡಿದರು.
ಇದನ್ನೂ ಓದಿ: ಮಂಗಳೂರಲ್ಲಿ ಕೇರಳ ಮೂಲದ ಮುಸ್ಲಿಂ ಯುವಕನ ಹತ್ಯೆ ಪ್ರಕರಣ; ಬಿಗ್ ಅಪ್ಡೇಟ್ಸ್!
ಹೆಣ್ಣುಮಕ್ಕಳು ವ್ಯಾನಿಟಿ ಬ್ಯಾಗಿನಲ್ಲಿ ಪೌಡರ್, ಬಾಚಣಿಗೆ ಜತೆಗೆ ಚೂರಿ ಇಟ್ಟುಕೊಳ್ಳಿ. 6 ಇಂಚಿನ ಚೂರಿ ಇಟ್ಟುಕೊಳ್ಳಲು ಲೈಸೆನ್ಸ್ ಬೇಡ. ಸಂಜೆ ಮೇಲೆ ಓಡಾಡಿದ್ರೆ ನಿಮ್ಮ ಮೇಲೆ ಖಂಡಿತಾ ಅಕ್ರಮಣ ಮಾಡುತ್ತಾರೆ. ಆಕ್ರಮಣ ಮಾಡಬೇಡಿ ಎಂದು ಬೇಡಿಕೊಂಡರೆ ನಿಮ್ಮ ಕಥೆ ಮುಗೀತು. ಅದರ ಬದಲು ಚೂರಿ ತೋರಿಸಿ ಸಾಕು, ಹೆದರಿ ಓಡುತ್ತಾರೆ ಎಂದಿದ್ದಾರೆ.
ಹಿಂದೂ- ಮುಸ್ಲಿಂ ಗಲಾಟೆ ಅಂದರೆ ಮುಸ್ಲಿಮರು ಹೊಡೀತಾರೆ, ಹಿಂದೂಗಳು ಓಡುತ್ತಾರೆ ಅಂತ ಇತ್ತು. ಆದರೆ ಈಗ ಹಿಂದೂ ತಿರುಗಿ ಬಿದ್ದಿದ್ದಾನೆ, ಆದರೂ ಇನ್ನೂ ಹೊಡೆಯಲು ಶುರು ಮಾಡಿಲ್ಲ. ನಾವು ಎದ್ದು ನಿಲ್ಲಬೇಕು ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ