ಬಿಜೆಪಿ ಸರಕಾರದ ಅನುದಾನ ತಡೆ ಹಿಡಿದ ಕಾಂಗ್ರೆಸ್ ಸರಕಾರ, ಗುತ್ತಿಗೆದಾರರು ಕಂಗಾಲು

By Gowthami KFirst Published May 27, 2023, 5:23 PM IST
Highlights

ನೂತನ ಕಾಂಗ್ರೆಸ್ ಸರಕಾರ ಬಿಜೆಪಿ ಸರಕಾರ ಆದೇಶ ಮಾಡಿದ್ದ ಕಾಮಗಾರಿಗಳು ಮತ್ತು ಅನುದಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದು, ಆದಷ್ಟು ಬೇಗ ಆದೇಶ ವಾಪಸ್ ಪಡೆಯಬೇಕೆಂದು ಗುತ್ತಿಗೆದಾರರು ಒತ್ತಾಯಿಸಿದ್ದಾರೆ.

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ  ನ್ಯೂಸ್

ಧಾರವಾಡ (ಮೇ.27): ಎರಡು ರಾಷ್ಟ್ರೀಯ ಪಕ್ಷದಿಂದ‌ ರಾಜ್ಯದಲ್ಲಿ ಅಭಿವೃದ್ದಿ ಅನ್ನೋದು ಕುಂಠಿತವಾಗಿದೆ ಅನ್ನೋದಕ್ಕೆ ಇದೊಂದು ಉದಾಹರಣೆ ಅಂತ ಹೇಳಬಹುದು.  ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಸರಕಾರ ಬಿಜೆಪಿ ಸರಕಾರ ಆದೇಶ ಮಾಡಿದ್ದ ಕಾಮಗಾರಿಗಳು ಮತ್ತು ಕಾಮಗಾರಿಗೆ ಬಿಡುಗಡೆಯಾಗಿದ್ದ ಅನುದಾನವನ್ನ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಸರಕಾರ ತಡೆ ಹಿಡಿದು ಮೇ 22 ರಂದು ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕದ ಗುತ್ತಿಗೆದಾರರು ಕಂಗಾಲಾಗಿದ್ದಾರೆ.

ಈ ಬಗ್ಗೆ ಧಾರವಾಡದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಗುತ್ತಿಗೆದಾರರಿಂದ 40% ಸರಕಾರ ಎಂದು ಇಗಾಗಲೆ ರಾಜ್ಯದಲ್ಲಿ ಬಿಜೆಪಿ ಸರಕಾರ ಹಣೆ ಪಟ್ಟಿಯನ್ನ ಹೊತ್ತಿತ್ತು. ಅದರ ಬೆನ್ನಲ್ಲೆ ರಾಜ್ಯದ ಗುತ್ತಿಗೆದಾರರು ಸಂಘದಿಂದ ಪ್ರಧಾನಿಗೆ ಪತ್ರ ಕೂಡಾ ಬರೆದಿದ್ದರು. ಆದರೆ ಈ ಭಾರಿ ಸ್ಪಷ್ಠ ಬಹುಮತದಿಂದ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ.  ಆದರೆ ಸದ್ಯಕ್ಕೆ ಬಿಜೆಪಿ ಸರಕಾರದ ಅವಧಿಯಲ್ಲಿ ಕಳೆದ 6 ತಿಂಗಳಿಂದ ಮಾಡಿರುವ ವಿವಿಧ ಇಲಾಖೆಗಳ ಕಾಮಗಾರಿಗಳು ಮತ್ತು ಆಯಾ ಕಾಮಗಾರಿಗಳಿಗೆ ಬಿಡುಗಡೆಯಾಗದ ಹಣವನ್ನ ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸಿಎಂ ಸಿದ್ದರಾಮಯ್ಯ ಅವರು ಮೇ 22 ,2023 ರಂದು ಸರಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿ, ಡಾ.ಏಕರೂಪ್ ಅವರಿಗೆ ಪತ್ರವನ್ನ ಬರೆದಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ಗುತ್ತಿಗೆದಾರರು ಕಂಗಾಲಾಗಿದ್ದಾರೆ.

ನಾವು ಈಗಾಗಲೇ ಬಿಜೆಪಿ ಸರಕಾರಕ್ಕೆ 40% ಹಣ ಕೊಟ್ಟು ಕಂಗಾಲಾಗಿದ್ದೆವೆ. ಆದರೆ ಈ ಭಾರಿ ಗುತ್ತಿಗೆದಾರರೆಲ್ಲರೂ ಸರಕಾರ ಬದಲಾವಣೆ ಮಾಡಲಿಕ್ಕೆ ನಾವು ಕೈ ಜೋಡಿಸಿದ್ದೆವೆ. ಕಾಂಗ್ರೆಸ್ ಸರಕಾರ ಆಡಳಿತ ಕ್ಕೆ ಬಂದ ಮೆಲೆ ನಮಗೆ ಬರುವ ಬಾಕಿ ಬಿಲ್ ನ್ನು ಸುಮಾರು 7,000 ಕೋಟಿ ಕೇವಲ ಉತ್ತರ ಕರ್ನಾಟಕದಲ್ಲಿ ಬಾಕಿ ಇದೆ ಆ ಬಾಕಿ ಹಣವನ್ನ ಸರಕಾರ ಬಿಡುಗಡೆ ಮಾಡಬೇಕು. ಸದ್ಯ ತಾತ್ಕಾಲಿಕವಾಗಿ ಹೊರಡಿಸಿದ ಆದೇಶವನ್ನ ಸಿದ್ದರಾಮಯ್ಯ ಅವರು ವಾಪಸ್ ಪಡೆಯಬೇಕು ಮತ್ತು ಸದ್ಯ ಬಾಕಿ ಇರುವ ಬಿಲ್ ಅನ್ನು ಕೂಡಲೇ ಸರಕಾರ ಬಿಡುಗಡೆ ಮಾಡಬೇಕು , ಸರಕಾರ ಎಲ್ಲ ಕಾಮಗಾರಿಗಳನ್ನ ವೀಕ್ಷಣೆ ಮಾಡಲಿ , ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ , ಕಳೆದ 6 ತಿಂಗಳ ಹಿಂದೆ ಕೈಗೊಂಡ ಕಾಮಗಾರಿಗಳನ್ನ ತಡೆ ಹಿಡಿದಿದೆ ಆದರೆ ಎಲ್ಲವನ್ನು ಮಾಡಿದ ಆದೇಶವನ್ನ ಕೈ ಬಿಡಬೇಕು ಎಂದು  ಒತ್ತಾಯಿಸಿದ್ದಾರೆ.

ಪರಮೇಶ್ವರ್‌ಗೆ ಗೃಹ ಖಾತೆ, ಜಾರ್ಜ್‌ಗೆ ಇಂಧನ, ಸಿದ್ದರಾಮಯ್ಯ ಸಂಪುಟದ ಎಲ್ಲಾ ಸಚಿವರಿಗೆ ಖಾತೆ

ಟೆಂಡರಗಳಲ್ಲಿ ಗುತ್ತಿಗೆದಾರರು ಸರಕಾರ ನಿಗದಿ ಪಡಿಸಿದ ( SR ) ದರಕ್ಕಿಂತ 5% ಕ್ಕಿಂತ ಹೆಚ್ಚಿಗೆ ದರಗಳನ್ನ ನಮೂದಿಸಿದಲ್ಲಿ ಅದನ್ನು ಸರಕಾರಕ್ಕೆ ಕಳಿಸುವ ನಿಯಮವಿದ್ದು ಈ ನಿಯಮವನ್ನ ಬದಲಿಸಿ ಮೊದಲು ಚಾಲ್ತಿಯಲ್ಲಿದ್ದ ನಿಯಮವನ್ನು ಮತ್ತೆ ಸರಕಾರ ಜಾರಿಗೆ ತರಬೇಕು ಎಂದು ವಿನಂತಿ ಮಾಡಿದರು. ಅಧಿಕ್ಷಕ ಅಭಿಯಂತರರು ಅಂತಿಮ ಬಿಲ್ಲುಗಳಿಗಾಗಿ ಮಾಡುವ ಮೇಲು ರುಜು ಅವಶ್ಯಕತೆ ಇರುವುದಿಲ್ಲ. ಇದರಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ವಿಳಂಬವಾಗುತ್ತಿದೆ ಈ ನಿಯಮವನ್ನ ತೆಗೆದು ಹಾಕಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

ಮುಂದಿನ ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ: ಸಿಎಂ ಸಿದ್ದರಾಮಯ್ಯ

ಒಟ್ಟಿನಲ್ಲಿ ಸರಕಾರ ಬದಲಾದರೂ ಗುತ್ತಿಗೆದಾರರ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದೆ. ಇನ್ನು ಸಿಎಂ ಸಿದ್ದರಾಮಯ್ಯ ಮಾಡಿದ ಆದೇಶವನ್ನ‌ ವಾಪಸ್ಸು ಪಡೆಯಬೇಕು. ಮತ್ತು ಬಾಕಿ ಇರುವ ಬಿಲ್ ಗಳನ್ನ ಕೂಡಲೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

click me!