
ನವದೆಹಲಿ, [ಅ.17]: ದೆಹಲಿ ಹೈಕೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಅಂತ್ಯವಾಗಿದ್ದು, ಅಂತಿಮ ತೀರ್ಪು ಪ್ರಕಟವಾಗುವುದೊಂದೆ ಬಾಕಿ ಇದೆ.
ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಅಂತ್ಯವಾಗಿರುವ ಬಗ್ಗೆ ಡಿಕೆಶಿ ಸಹೋದರ, ಬೆಂಗಳೂರು ಗ್ರಾಮಾಮತರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಕೊನೆಗೂ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಅಂತ್ಯ: ಆದ್ರೆ ಇವತ್ತೂ ರಿಲೀಫ್ ಸಿಗ್ಲಿಲ್ಲ
ಹೈಕೋರ್ಟ್ ಕಲಾಪದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುರೇಶ್, ಇವತ್ತಿನ ವಾದ-ಪ್ರತಿವಾದ ಮುಗಿದಿದೆ. ಸುಧೀರ್ಘವಾಗಿ ನ್ಯಾಯದೀಶರು ವಾದವನ್ನ ಆಲಿಸಿದ್ದು, ನ್ಯಾಯಾಲಯ ತೀರ್ಪುನ್ನ ಕಾಯ್ದಿರಿಸಿದೆ ಎಂದರು.
ಸರ್ಕಾರಿ ವಕೀಲರು ತಡವಾಗಿ ಬಂದಿದ್ದರಿಂದ ವಾದ ತಡವಾಗಿ ಆರಂಭವಾಯ್ತು. ಸರ್ಕಾರಿ ವಕೀಲರು ಆನೇಕ ಆರೋಪಗಳನ್ನ ಮಾಡಿದ್ದಾರೆ. 300 ಹೆಚ್ಚು ಆಸ್ತಿ ಹೊಂದಿದ್ದಾರೆ ಅಂತ ಆರೋಪ ಮಾಡಿದ್ದಾರೆ ಎಂದು ತಿಳಿಸಿದರು.
ಇದರ ಬಗ್ಗೆ ನಾವೇ ಹೇಳಿದ್ದೇವೆ, ನಾವೇ ಕೊಟ್ಟಿದ್ದೇವೆ. ಸರ್ಕಾರಿ ವಕೀಲರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾದುನೋಡಣ ನಮಗೆ ಒಳ್ಳಯದ್ದಾಗುತ್ತೆ ಅಂತ ಭರವಸೆ ಇಟ್ಟುಕೊಂಡಿದ್ದೇವೆ ಎಂದು ಜಾಮೀನು ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆ ಸುರೇಸ್ ಅವರನ್ನೂ ಸಹ ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಆದ್ರೆ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಅಲ್ಲ. ಬದಲಾಗಿ ಬೇನಾಮಿ ಆಸ್ತಿ ಬಗ್ಗೆ ವಿಚಾರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇವರು ಮಾತ್ರವಲ್ಲದೇ ಡಿಕೆಶಿ ಮಗಳು ಐಶ್ವರ್ಯಳನ್ನು ಇಡಿ ಅಧಿಕಾರಿಗಳು ನವದೆಹಲಿಯಲ್ಲಿ ವಿಚಾರಣೆ ನಡೆಸಿದ್ದರು. ಈಗ ಡಿಕೆಶಿ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ವಿಚಾರಣೆ ಇಡಿ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಸಮನ್ಸ್ ಸಹ ನೀಡಿತ್ತು. ಆದ್ರೆ ದೆಹಲಿ ಹೈರ್ಕೋರ್ಟ್ 10 ದಿನಗಳ ವರೆಗೆ ಸಮನ್ಸ್ ನೀಡಬೇಡಿ ಎಂದು ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬಚಾವ್ ಆಗಿರುವ ಗೌರಮ್ಮ ಹಾಗೂ ಉಷಾ ಅವರಿಗೆ 10 ದಿನಗಳ ಬಳಿಕ ಸಮನ್ಸ್ ಜಾರಿ ಮಾಡಲಾಗುವುದು ಎಂದು ಇಡಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ