ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಕಂಪ್ಲಿ ಶಾಸಕ ರೌಡಿ ಶೀಟರ್, ಇಲ್ಲಿದೆ ಪ್ರೂಫ್..

By Web DeskFirst Published Jan 21, 2019, 12:03 PM IST
Highlights

ಆಪರೇಷನ್ ಕಮಲ ಭೀತಿಯಿಂದ ರೆಸಾರ್ಟ್ ವಾಸ್ತವ್ಯ ನಡೆಸಿದ್ದ ಕಾಂಗ್ರೆಸ್‌ನ ಶಾಸಕರಿಬ್ಬರ ಮಧ್ಯೆ ಮದ್ಯದ ಅಮಲಿನಲ್ಲಿ ಮಾರಾಮಾರಿ ನಡೆದಿದ್ದು, ಈ ಘಟನೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರು ವಿಜಯನಗರ ಶಾಸಕ ಆನಂದಸಿಂಗ್ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಗಣೇಶ್ ಹೆಸರು ಕೆಲ ವರ್ಷಗಳ ಹಿಂದೆ ರೌಡಿ ಶೀಟರ್ ಪಟ್ಟಿಯಲ್ಲಿತ್ತು ಎನ್ನುವುದು ತಿಳಿದುಬಂದಿದೆ. 

ಬಳ್ಳಾರಿ :  ‘ಮುಂಗೋಪಿ’ ಗಣೇಶ್ ಹಲ್ಲೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2005 ರಲ್ಲಿ ಚಪ್ಪರದಹಳ್ಳಿ ನಗರಸಭೆ ಸದಸ್ಯ ಚಿದಾನಂದ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. 

ಈ ಕುರಿತು ಐಪಿಸಿ 324/ 323/ 504 ಹಾಗೂ 506 ಕಲಂ ಅಡಿ ಪ್ರಕರಣ ದಾಖಲಾಗಿತ್ತು. 2006 ರಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಐಪಿಸಿ 143/ 147/ 323 /353/ 504 ಕಲಂ ಅಡಿ  ಪ್ರಕರಣ ದಾಖಲಾಗಿತ್ತು. ಗಣೇಶ್ ಅವರ ಹಲ್ಲೆ ಮತ್ತಿತರ ಪ್ರಕರಣಗಳು ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿತ್ತು. 

ಈ ಸಂಬಂಧ ಅವರ ವಿರುದ್ಧ 2006 ರಲ್ಲಿ ರೌಡಿಶೀಟ್ ತೆರೆಯಲಾಗಿತ್ತು. ನಂತರ 2015 ರಲ್ಲಿ ರೌಡಿಶೀಟರ್ ಫೈಲ್ ಕ್ಲೋಸ್ ಮಾಡಲಾಗಿತ್ತು.

click me!