ಬಳ್ಳಾರಿ ಉಪ ಚುನಾವಣೆ : ಕಾಂಗ್ರೆಸ್ ನಲ್ಲಿ ಅಚ್ಚರಿಯ ಬೆಳವಣಿಗೆ

Published : Oct 16, 2018, 07:17 AM IST
ಬಳ್ಳಾರಿ ಉಪ ಚುನಾವಣೆ : ಕಾಂಗ್ರೆಸ್ ನಲ್ಲಿ ಅಚ್ಚರಿಯ ಬೆಳವಣಿಗೆ

ಸಾರಾಂಶ

ಬಳ್ಳಾರಿಯಲ್ಲಿ ನಡೆಯುವ ಲೋಕಸಭಾ ಉಪ ಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಕಾಂಗ್ರೆಸ್ ನಿಂದ ಉಗ್ರಪ್ಪ ಅವರನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. 

ಬೆಂಗ​ಳೂರು :  ಅಚ್ಚ​ರಿಯ ಬೆಳ​ವ​ಣಿ​ಗೆ​ಯೊಂದ​ರಲ್ಲಿ ಹಿರಿಯ ನಾಯಕ ವಿ.ಎಸ್‌. ಉಗ್ರ​ಪ್ಪ ಅವ​ರನ್ನು ಬಳ್ಳಾರಿ ಲೋಕ​ಸಭಾ ಕ್ಷೇತ್ರದ ಉಪ ಚುನಾ​ವ​ಣೆ ಅಭ್ಯ​ರ್ಥಿ​ಯಾಗಿ ಕಾಂಗ್ರೆಸ್‌ ಪ್ರಕ​ಟಿ​ಸಿದೆ.

ಕಡೆ ಕ್ಷಣ​ದ​ವ​ರೆಗೂ ಬಳ್ಳಾರಿ ಕ್ಷೇತ್ರದ ಟಿಕೆಟ್‌ ಶಾಸಕ ನಾಗೇಂದ್ರ ಅವರ ಸಹೋ​ದರ ವೆಂಕ​ಟೇಶ್‌ ಪ್ರಸಾದ್‌ ಅವ​ರಿಗೆ ಲಭಿ​ಸ​ಲಿದೆ ಎಂದೇ ಹೇಳ​ಲಾ​ಗಿತ್ತು. ಆದರೆ, ಸೋಮ​ವಾರ ಎಐ​ಸಿ​ಸಿಯು ಬಳ್ಳಾ​ರಿಗೆ ವಿ.ಎಸ್‌. ಉಗ್ರಪ್ಪ ಹಾಗೂ ಜಮ​ಖಂಡಿ ವಿಧಾ​ನ​ಸಭಾ ಕ್ಷೇತ್ರದ ಉಪ ಚುನಾ​ವ​ಣೆಗೆ ಆನಂದ ನ್ಯಾಮ​ಗೌಡ ಅವರ ಹೆಸ​ರನ್ನು ಘೋಷಿ​ಸಿ​ದೆ.

ತೀವ್ರ ಲಾಬಿ ನಡೆ​ಸಿದ ವೆಂಕ​ಟೇಶ್‌ ಪ್ರಸಾದ್‌ ಅವರನ್ನು ಕಡೆ ಕ್ಷಣ​ದಲ್ಲಿ ಕೈಬಿಟ್ಟು ಉಗ್ರಪ್ಪ ಅವ​ರನ್ನು ಆಯ್ಕೆ ಮಾಡಲು ಪ್ರಸಾದ್‌ಗೆ ಟಿಕೆಟ್‌ ನೀಡಿ​ದರೆ ಬಳ್ಳಾ​ರಿ ಶಾಸ​ಕರ ಒಂದು ಬಣ ಒಳ ಏಟು ನೀಡ​ಬ​ಹುದು ಎಂಬ ಭೀತಿ ಕಾರ​ಣ​ವಾ​ಗಿದೆ ಎನ್ನ​ಲಾ​ಗಿದೆ. ಬಳ್ಳಾ​ರಿ​ಯಲ್ಲಿ ಶಾಸ​ಕರ ಎರಡು ಬಣ ನಿರ್ಮಾಣವಾಗಿದೆ. ಈ ಬಣ​ಗಳು ಪರಸ್ಪರ ಕಾಲೆ​ಳೆ​ಯು​ವಲ್ಲಿ ನಿರ​ತವಾಗಿ​ವೆ ಎಂಬ ಗುಮಾನಿ ರಾಜ್ಯ ನಾಯ​ಕ​ರಿಗೆ ಇದೆ. ರಾಜ್ಯ ಕಾಂಗ್ರೆಸ್‌ ನಾಯ​ಕರು ಹಾಗೂ ಹೈಕ​ಮಾಂಡ್‌ ನಾಯ​ಕರ ಒತ್ತಡದ ಪರಿ​ಣಾ​ಮ​ವಾಗಿ ಯಾರಿಗೆ ಟಿಕೆಟ್‌ ನೀಡಿ​ದರೂ ಕೆಲಸ ಮಾಡು​ವು​ದಾಗಿ ಶಾಸ​ಕರು ಹೇಳು​ತ್ತಿ​ದ್ದರೂ, ಅಂತಿ​ಮ​ವಾಗಿ ಒಳ ಏಟು ನೀಡ​ಬ​ಹುದು ಎಂಬ ಆತಂಕವೇ ಟಿಕೆಟ್‌ ವಿ.ಎಸ್‌. ಉಗ್ರಪ್ಪ ಅವರ ಪಾಲಾ​ಗಲು ಕಾರಣ ಎಂದು ವ್ಯಾಖ್ಯಾ​ನಿ​ಸ​ಲಾ​ಗು​ತ್ತಿ​ದೆ.

ಈ ಕ್ಷೇತ್ರಕ್ಕೆ ಹಲವು ಪ್ರಭಾವಿಗಳು ಟಿಕೆ​ಟ್‌​ಗಾಗಿ ತೀವ್ರ ಪೈಪೋಟಿ ನಡೆ​ಸಿ​ದ್ದ​ರಿಂದ ಟಿಕೆಟ್‌ ಹಂಚಿಕೆ ಕಾಂಗ್ರೆಸ್‌ ಪಾಲಿಗೆ ಬಿಸಿ ತುಪ್ಪ​ವಾ​ಗಿತ್ತು. ಬಳ್ಳಾ​ರಿಯ ಶಾಸ​ಕ​ರಿಂದ ಹಿಡಿದು ರಾಜ್ಯಮಟ್ಟದ ನಾಯ​ಕ​ರ​ವ​ರೆಗೂ ಒಬ್ಬೊಬ್ಬರು ಒಬ್ಬೊಬ್ಬ ಅಭ್ಯರ್ಥಿ ಪರ​ವಾಗಿ ಲಾಬಿ ನಡೆ​ಸಿ​ದ್ದ​ರಿಂದ ಈ ಕಗ್ಗಂಟು ನಿವಾ​ರಿ​ಸಲು ಕಾಂಗ್ರೆಸ್‌ ಸಾಕಷ್ಟುಸರ್ಕಸ್‌ ಕೂಡ ಮಾಡಿತ್ತು. ನಾಗೆæೕಂದ್ರ ಸಹೋದರ ವೆಂಕ​ಟೇಶ್‌ ಪ್ರಸಾದ್‌, ಸತೀಶ್‌ ಜಾರ​ಕಿ​ಹೊಳಿ ಸಂಬಂಧಿ ದೇವೇಂದ್ರಪ್ಪ, ಸ್ಥಳೀಯರಾದ ನಾಗ​ರಾಜ್‌ ಗುಜ್ಜಲ್‌, ನೆಟ್ಟ​ಕ​ಲ್ಲಪ್ಪ ಅವರು ತೀವ್ರ ಪೈಪೋಟಿ ನಡೆ​ಸಿ​ದ್ದರು. ಈ ನಡುವೆ, ಲೋಕ​ಸಭಾ ಚುನಾ​ವ​ಣೆ​ಗೆ ರಾಜ್ಯಮಟ್ಟದ ನಾಯ​ಕ​ರೊ​ಬ್ಬ​ರನ್ನು ಕಣಕ್ಕೆ ಇಳಿ​ಸುವ ಚಿಂತನೆ ಹಿನ್ನೆ​ಲೆ​ಯಲ್ಲಿ ವಿ.ಎಸ್‌.ಉಗ್ರಪ್ಪ ಅವರ ಹೆಸರು ಚಾಲನೆಗೆ ಬಂದಿತ್ತು. ಪಕ್ಷ ಟಿಕೆಟ್‌ ನೀಡಿ​ದರೆ ಸ್ಪರ್ಧಿ​ಸು​ವು​ದಾಗಿ ಉಗ್ರಪ್ಪ ತಿಳಿಸಿದ್ದರು.

ಆದರೆ, ಪಕ್ಷದ ಅಭ್ಯರ್ಥಿ ಆಯ್ಕೆ​ಗಾಗಿ ರಾಜ್ಯ ನಾಯ​ಕರು ನಡೆಸಿದ ಸಭೆಗಳಲ್ಲಿ ಹೆಚ್ಚಾಗಿ ವೆಂಕ​ಟೇಶ್‌ ಪ್ರಸಾದ್‌ ಹಾಗೂ ದೇವೇಂದ್ರಪ್ಪ ಅವರ ಹೆಸರಿನ ಕುರಿತು ಚರ್ಚೆ ನಡೆ​ದಿತ್ತು. ಬಳ್ಳಾ​ರಿಯ ಬಿಜೆ​ಪಿಯ ಅಭ್ಯ​ರ್ಥಿ​ಗಳು ಅಬ್ಬ​ರದ ಪ್ರಚಾರ ನಡೆ​ಸ​ಲಿದ್ದು, ಆರ್ಥಿಕ ಸಂಪ​ನ್ಮೂ​ಲವೂ ಭರ್ಜ​ರಿ​ಯಾ​ಗಿದೆ. ಹೀಗಾಗಿ ಅವ​ರಿಗೆ ತಕ್ಕ ಪೈಪೋಟಿ ನೀಡು​ವಂತ​ಹ​ವರಿಗೆ ಟಿಕೆಟ್‌ ನೀಡ​ಬೇಕು ಎಂಬ ಚಿಂತನೆ ಹಿನ್ನೆ​ಲೆ​ಯಲ್ಲಿ ನಾಯಕ ಸಮಾ​ಜ​ದ​ವರೇ ಹಾಗೂ ಆರ್ಥಿ​ಕ​ವಾಗಿ ಬಲ​ವಾ​ಗಿ​ರುವ ವೆಂಕ​ಟೇಶ್‌ ಪ್ರಸಾದ್‌ ಹಾಗೂ ದೇವೆಂದ್ರಪ್ಪ ಅವರ ಹೆಸರು ಚರ್ಚೆ​ಯಾ​ಗಲು ಕಾರ​ಣ​ವಾ​ಗಿ​ತ್ತು.

ಈ ನಡುವೆ, ಲೋಕ​ಸ​ಭೆಯಂತಹ ದೊಡ್ಡ ಚುನಾ​ವ​ಣೆ​ಯಲ್ಲಿ ಕೇವಲ ಹಣ​ದಿಂದಲೇ ಗೆಲ್ಲು​ವುದು ಸಾಧ್ಯ​ವಿಲ್ಲ. ಸೀಮಿತ ವ್ಯಾಪ್ತಿ ಹೊಂದಿ​ರುವ ವಿಧಾ​ನ​ಸಭೆ ಚುನಾ​ವ​ಣೆ​ಗ​ಳಲ್ಲಿ ಹಣ ಹೆಚ್ಚು ಕೆಲಸ ಮಾಡ​ಬ​ಹುದು. ಆದರೆ, ಲೋಕ​ಸಭೆ ಚುನಾ​ವ​ಣೆ​ಯಲ್ಲಿ ರಾಷ್ಟ್ರ ಮಟ್ಟದ ವಿಚಾ​ರ​ಗಳು ಹಾಗೂ ಅಭ್ಯ​ರ್ಥಿಯ ವರ್ಚಸ್ಸು ಕೆಲಸ ಮಾಡು​ತ್ತದೆ. ಹೀಗಾಗಿ ಆರ್ಥಿಕ ಸಾಮ​ರ್ಥ್ಯ​ಕ್ಕಿಂತಲೂ ವರ್ಚಸ್ವಿ ನಾಯ​ಕ​ರನ್ನು ಕಣಕ್ಕೆ ಇಳಿ​ಸ​ಬೇಕು ಎಂದು ಕೆ.ಸಿ.ಕೊಂಡಯ್ಯ ಅವ​ರಂತಹ ನಾಯ​ಕ​ರು ವಾದ ಮಂಡಿ​ಸಿ​ದ್ದ​ರು.

ಇಂತಹ ವರ್ಚಸ್ವಿ ನಾಯ​ಕರ ಪೈಕಿ ವಾಲ್ಮೀಕಿ ಸಮಾ​ಜ​ದ​ವ​ರಾದ ಸತೀಶ್‌ ಜಾರ​ಕಿ​ಹೊಳಿ ಅಥವಾ ವಿ.ಎಸ್‌.ಉಗ್ರಪ್ಪ ಅವ​ರನ್ನು ಕಣಕ್ಕೆ ಇಳಿ​ಸು​ವುದು ಉತ್ತಮ. ಸತೀಶ್‌ ಜಾರ​ಕಿ​ಹೊಳಿ ಅವರು ವಾಲ್ಮೀಕಿ ಜನಾಂಗದ ಮೇಲೆ ಹಿಡಿತ ಹೊಂದಿ​ದ್ದಾರೆ. ಕ್ಷೇತ್ರದ ಹೊರ​ಗಿ​ನ​ವ​ರಾ​ದರೂ ರಾಜ್ಯ ಮಟ್ಟದ ವರ್ಚಸ್ಸು ಹೊಂದಿ​ದ್ದಾರೆ. ಹೀಗಾಗಿ ಅವರು ಸೂಚಿ​ಸು​ತ್ತಿ​ರುವ ದೇವೇಂದ್ರಪ್ಪ ಅವ​ರಿ​ಗಿಂತ ಅವ​ರನ್ನೇ ಕಣಕ್ಕೆ ಇಳಿ​ಸ​ಬೇಕು ಎಂದು ವಾದ ಮಾಡ​ಲಾ​ಗಿ​ತ್ತು.

ಆದರೆ, ಬಳ್ಳಾ​ರಿ​ಯಿಂದ ಸ್ಪರ್ಧಿ​ಸಲು ಸತೀಶ್‌ ಜಾರ​ಕಿ​ಹೊ​ಳಿ ಸ್ಪಷ್ಟ​ವಾಗಿ ನಿರಾ​ಕ​ರಿ​ಸಿ​ದ್ದ​ರಿಂದ ರಾಜ್ಯ ಮಟ್ಟದ ವರ್ಚಸ್ಸು ಹೊಂದಿ​ರುವ ಹಾಗೂ ಬಿಜೆಪಿ ಅಧಿ​ಕಾ​ರ​ದ​ಲ್ಲಿದ್ದ ಅವ​ಧಿ​ಯಲ್ಲಿ ಬಳ್ಳಾ​ರಿಯ ಗಣಿ ಧಣಿ​ಗಳ ವಿರುದ್ಧ ಹೋರಾಟ ರೂಪು​ಗೊ​ಳ್ಳಲು ಪ್ರಮುಖ ಪ್ರೇರ​ಕ​ರಲ್ಲಿ ಒಬ್ಬ​ರಾ​ಗಿದ್ದ ವಿ.ಎಸ್‌. ಉಗ್ರ​ಪ್ಪ ಅವ​ರ ಹೆಸ​ರನ್ನು ಪರಿ​ಗ​ಣಿ​ಸ​ಬೇಕು ಎಂದು ಆಗ್ರ​ಹಿ​ಸ​ಲಾ​ಗಿ​ತ್ತು.

ಇಷ್ಟಾ​ಗಿಯೂ ರಾಜ್ಯ ಮಟ್ಟದ ನಾಯ​ಕರ ಸಭೆ​ಗ​ಳಲ್ಲಿ ವೆಂಕ​ಟೇಶ್‌ ಪ್ರಸಾದ್‌ ಹಾಗೂ ದೇವೇಂದ್ರಪ್ಪ ಅವರ ಹೆಸರೇ ಮುಂಚೂ​ಣಿ​ಯ​ಲ್ಲಿತ್ತು. ಆದರೆ, ಈ ಇಬ್ಬರ ಪೈಕಿ ಯಾರನ್ನು ಆಯ್ಕೆ ಮಾಡಿ​ದರೂ ಕಾಂಗ್ರೆ​ಸ್‌ನ ಒಂದು ಬಣ ವಿರು​ದ್ಧ​ವಾಗಿ ಕೆಲಸ ಮಾಡುವ ಸಾಧ್ಯತೆ ಕಂಡು ಬಂದ ಹಿನ್ನೆ​ಲೆ​ಯಲ್ಲಿ ಪರ್ಯಾಯ ಅಭ್ಯರ್ಥಿ ಹುಡು​ಕಾ​ಟ ನಡೆ​ಸಿದ ಕಾಂಗ್ರೆಸ್‌ ನಾಯ​ಕ​ರಿಗೆ ವಿ.ಎಸ್‌. ಉಗ್ರಪ್ಪ ಅಪ್ಯಾ​ಯ​ಮಾ​ನ​ವಾಗಿ ಕಂಡರು ಎಂದು ಮೂಲಗಳು ಹೇಳು​ತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Yellapur Ranjitha murder case: ಶಾಸಕ ಶಿವರಾಮ್ ಹೆಬ್ಬಾರ್ ಕೆಂಡಾಮಂಡಲ, ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ
ರಾಯಚೂರು: ಅಂಬಾ ದೇವಿಯ ದರ್ಶನ ಆಗಿದ್ದು ನನ್ನ ಪುಣ್ಯ - ಸಿಎಂ ಸಿದ್ದರಾಮಯ್ಯ