ನಿಷೇಧಿತ ಲಸಿಕೆ ಹಾಕಿದ ಆಸ್ಪತ್ರೆ : ಐಎಎಸ್ ಅಧಿಕಾರಿ ದೂರು

By Web DeskFirst Published Oct 15, 2018, 10:23 AM IST
Highlights

ತಮ್ಮಮಗುವಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಷೇಧಿತ ಪೊಲಿಯೋ ಲಸಿಕೆ ಹಾಕಿದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ಇದೀಗ ಆಸ್ಪತ್ರೆ ವಿರುದ್ಧ ದೂರು ದಾಖಲು ಮಾಡಿದ್ದಾರೆ. 

ಬೆಂಗಳೂರು :  ಐಎಎಸ್ ಅಧಿಕಾರಿಯೋರ್ವರು ತಮ್ಮ 10 ತಿಂಗಳ ಮಗುವಿಗೆ ಪೊಲಿಯೋ ಲಸಿಕೆ ಹಾಕಿಸಿದ ಬಳಿಕ ಬೆಂಗಳೂರಿನ ಇಂದಿರಾನಗರದ ಚಿನ್ಮಯಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. 

ಆಡಳಿತ ಸುಧಾರಣಾ ಇಲಾಖೆಯ  ಜಂಟಿ ಕಾರ್ಯದರ್ಶಿ ಆಗಿರುವ ಪಲ್ಲವಿ ಅಕುರಾತಿ ದೂರು ದಾಖಲು ಮಾಡಿದ್ದಾರೆ. ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ಎಸಗಿದ್ದಾಗಿ ಇಲ್ಲಿನ ವೈದ್ಯರಾದ ಡಾ. ಸುರೇಶ್ ಮತ್ತು ಹಿರಿಯ ಸ್ಟಾಫ್ ನರ್ಸ್ ಎಎನ್ ಎಂ ಕೃಷ್ಣಮ್ಮ ವಿರುದ್ಧ ದೂರು ದಾಖಲು ಮಾಡಿದ್ದು, ಇಂದಿರಾ ನಗರ ಠಾಣೆಯಲ್ಲಿ ಎಫ್ಐ ಆರ್ ದಾಖಲು ಮಾಡಲಾಗಿದೆ. 

ಪಲ್ಲವಿ ಅವರ 10 ತಿಂಗಳ ಮಗುವನ್ನು  ಪರೀಕ್ಷೆ ಮಾಡಿದ್ದು  ನಾಲ್ಕು ವ್ಯಾಕ್ಸಿನ್ ಗಳನ್ನು ಹಾಕಲು ಸೂಚಿಸಿದ್ದರು.  ನಾಲ್ಕನೆಯ ದಾಗಿ ಒಪಿವಿ ಹಾಕಿಸಲು ಸೂಚಿಸಿದ್ದು ಆದರೆ ಆಸ್ಪತ್ರೆಯಲ್ಲಿ  ಇದು ಲಭ್ಯವಿರಲಿಲ್ಲ.

ಒಪಿವಿ ಎಂದು ನರ್ಸ್ ಪಿಂಕ್ ಡ್ರಾಪ್ಸ್ ನ್ನು ಮಗುವಿಗೆ ನೀಡಿದ್ದರು.  ಬಳಿಕ ಮಗುವಿಗೆ ನೀಡಿದ ಒಪಿವಿ ಪರಿಶೀಲಿಸಿದ್ದು, ಅದು  ಬ್ಯಾನ್ ಮಾಡಿದ ಕಂಪನಿಯದೆಂದು ತಿಳಿದು ಬಂದಿದೆ.  ಇದಾದ ಬಳಿಕ ಪಲ್ಲವಿ ಅವರು ಅಸ್ಪತ್ರೆ ವಿರುದ್ಧ ನಿರ್ಲಕ್ಷ್ಯ ಪ್ರಕರಣವನ್ನು ದಾಖಲು ಮಾಡಿದ್ದಾರೆ.  

click me!