ಪರಮೇಶ್ವರ್ ಖಜಾನೆ ಜಾಲಾಡಿದ IT: 100 ಕೋಟಿ ಅಘೋಷಿತ ಆಸ್ತಿ ಪತ್ತೆ

By Web DeskFirst Published Oct 11, 2019, 9:41 PM IST
Highlights

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಕ್ರಮ ಸಂಪತ್ತು ಜಾಲಾಡುತ್ತಿರುವ ಐಟಿ| ಡಾ.ಜಿ.ಪರಮೇಶ್ವರ್ ಕೋಟ್ಯಾನುಗಟ್ಟಲೇ ಅಘೋಷಿತ ಆಸ್ತಿ ಪತ್ತೆ| ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮಾಧ್ಯಮ ಪ್ರಕಟಣೆ|ಹವಾಲಾ ಹಣದ ವಹಿವಾಟಿ ನಂಟಿನಲ್ಲಿ ಡಾ.ಜಿ.ಪರಮೇಶ್ವರ್|ಡಾ.ಜಿ.ಪರಮೇಶ್ವರ್ ಅಕ್ರಮ ವಹಿವಾಟು ಬೆನ್ನಿತ್ತಿದ ಐಟಿ.

ಬೆಂಗಳೂರು/ತುಮಕೂರು, [ಅ.11]:  2ನೇ ದಿನವೂ ಮಾಜಿ ಡಿಸಿಎಂ ಪರಮೇಶ್ವರ್‌ಗೆ ಐಟಿ ಶಾಕ್ ಮೇಲೆ ಶಾಕ್ ಕೊಟ್ಟಿದೆ. ಇಂದು [ಶುಕ್ರವಾರ] ಕೂಡ 6 ಕಾರುಗಳಲ್ಲಿ ಬಂದಂತಹ ಐಟಿ ಅಧಿಕಾರಿಗಳ ತಂಡ, ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರ ಶೋಧ ಕಾರ್ಯ ನಡೆಸಿದೆ. 

ಈ ವೇಳೆ 40 ಲಕ್ಷ ದೇವಾಲಯದ ಹುಂಡಿ ಹಣ ಸಿಕ್ಕಿರುವ ಬಗ್ಗೆ ಮಾಹಿತಿಯಿದ್ದು, ಬಗೆದಷ್ಟು ಅಕ್ರಮ ಆಸ್ತಿ ಹೊಂದಿರುವುದು ಬಟಾಬಯಲಾಗುತ್ತಿದೆ.

ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಕಾಲೇಜ್‌ನಲ್ಲಿ ಸಿಕ್ತು ಕಂತೆ ಕಂತೆ ಹಣ..!

ಬೆಂಗಳೂರಿನ ಸದಾಶಿವನಗರದಲ್ಲಿ ನಿರಂತರ ಕಾರ್ಯಾಚರಣೆ ಮಾಡಿದ ಐಟಿ ಅಧಿಕಾರಿಗಳು, ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ಹಾಗೂ ಬೆಲೆ ಬಾಳು ವಸ್ತುಗಳ ಸಂಪೂರ್ಣ ಮಾಹಿತಿ ಕಲೆಹಾಕಿದ್ದಾರೆ. ಇದಲ್ಲದೇ ಪರಂ ಮತ್ತೋರ್ವ ಆಪ್ತ ನೆಲಮಂಗಲದ ಬೇಗೂರು ರಂಗನಾಥ್ ಮನೆ ಮೇಲೂ ದಾಳಿ ಮಾಡಿ ಮಾಹಿತಿ ಪಡೆದಿದ್ದಾರೆ.

ಇತ್ತ ಐಟಿ ಅಧಿಕಾರಿಗಳ ದಾಳಿ ಜೋರಾಗ್ತಿದ್ದಂತೆ ಪರಮೇಶ್ವರ್ ಅವರ 7 ಪರ್ಸನಲ್ ಬ್ಯಾಂಕ್ ಅಕೌಂಟ್ ಗಳು, ಪತ್ನಿಯ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗಳ ಜೊತೆಗೆ, ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿದ್ದ ಸುಮಾರು 120ಕ್ಕೂ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಐಟಿ ಇಲಾಖೆ ಸದ್ಯಕ್ಕೆ ಸೀಜ್ ಮಾಡಿದೆ.

IT ಶಾಕ್! ಪರಂ ಕುಟುಂಬಸ್ಥರ ಬ್ಯಾಂಕ್ ಖಾತೆ ಸೀಜ್

ಪರಂ ಬಳಿ 100 ಕೋಟಿ ಅಕ್ರಮ ಆಸ್ತಿ
ಹೌದು...ಇದು ಶಾಕ್ ಆದರೂ ನಿಜ. ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಳಿ 100 ಕೋಟಿ ರೂ ಅಘೋಷಿತ ಆಸ್ತಿ ಇರುವುದು ಖಚಿತವಾಗಿದೆ. ಈ ಬಗ್ಗೆ  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ಖಚಿತಪಡಿಸಿದ್ದಾರೆ.

ಪರಮೇಶ್ವರ್ ಟೈಪಿಸ್ಟ್ ರಮೇಶ್ ಐಟಿ ಅಧಿಕಾರಿಗಳ ವಶಕ್ಕೆ

ಇದುವರೆಗೂ 8 ಕೋಟಿ 82 ಲಕ್ಷ ರೂ ಅಘೋಷಿತ ಆಸ್ತಿ ಜಪ್ತಿ ಮಾಡಲಾಗಿದೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆ ಉದ್ಯೋಗಿಗಳ ಹೆಸರಲ್ಲಿ 4.6 ಕೋಟಿ 4.6 ಕೋಟಿ ಅಕ್ರಮ ಹಣ 8 ಉದ್ಯೋಗಿಗಳ ಹೆಸರಲ್ಲಿ ಠೇವಣಿ, ಮೆಡಿಕಲ್ ಸೀಟು ಗೋಲ್ ಮಾಲ್ ಮಾಡಿದ್ದ ಅಕ್ರಮ ಹಣದ ಬಗ್ಗೆ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಪರಂ ಅಕ್ರಮ ಸಾಮ್ರಾಜ್ಯಕ್ಕೆ IT ಬಾಂಬ್
* ಪರಂ ಅಕ್ರಮ ಆಸ್ತಿ 100 ಕೋಟಿ, 8.82 ಕೋಟಿ ಆಸ್ತಿ-ಹಣ ಜಪ್ತಿ
*ಪರಮೇಶ್ವರ್ ಗೆ ಸೇರಿದ್ದ 4 ಕೋಟಿ 22 ಲಕ್ಷ ರೂ ಹಣವೂ ಪತ್ತೆ
*ಪರಮೇಶ್ವರ್ ಮನೆಯಲ್ಲಿ ಸಿಕ್ಕಿದ್ದು 89 ಲಕ್ಷ ರೂಪಾಯಿ ನಗದು
*ಸಿದ್ದಾರ್ಥ ಸಂಸ್ಥೆ 8 ಉದ್ಯೋಗಗಳ ಹೆಸರಲ್ಲಿ 4.6 ಕೋಟಿ ಠೇವಣಿ
*ವಿವಿಧ ಬ್ಯಾಂಕುಗಳಲ್ಲಿ 4ಕೋಟಿ 60ಲಕ್ಷ ಠೇವಣಿ ಇರಿಸಿದ್ದ ಪರಂ
*185 ಮೆಡಿಕಲ್ ಸೀಟುಗಳನ್ನು 50ರಿಂದ 65 ಲಕ್ಷ ರೂ.ಗೆ ಮಾರಾಟ
* 8 ಕೋಟಿ 82 ಲಕ್ಷ ರೂ ಮೌಲ್ಯದ ಅಕ್ರಮ ಆಸ್ತಿ ಮತ್ತು ಹಣ ಜಪ್ತಿ

ಎಂಸಿಸಿಯಿಂದ ಕೌನ್ಸೆಲಿಂಗ್​ ಆಗಿ, ಮೆರಿಟ್​ ಮೂಲಕ ಹಂಚಿಕೆಯಾಗಬೇಕಿದ್ದ ಸೀಟುಗಳನ್ನು ದುರುದ್ದೇಶ ಪೂರ್ವಕವಾಗಿ ಸಾಂಸ್ಥಿಕ ಕೋಟಾ ಸೀಟುಗಳನ್ನಾಗಿ ಪರಿವರ್ತಿಸಲಾಗಿದ್ದು, ಬಹು ಶಿಕ್ಷಣ ಸಂಸ್ಥೆ ಹೊಂದಿರುವ ಕರ್ನಾಟಕದ ಪ್ರಾಮಿನಂಟ್ ಬಿಸಿನೆಸ್ ಗ್ರುಪ್ ಮೇಲೆ ನಡೆದ ದಾಳಿ ವೇಳೆ ಸಿಕ್ಕ ದಾಖಲೆಗಳ ಪರಿಶೀಲನೆಯಿಂದ ತಿಳಿದುಬಂದಿದೆ ಎಂದು ಐಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವೃತ್ತಿಪರ ಸೀಟುಗಳು ನಗದು ರೂಪದಲ್ಲಿ ಮಧ್ಯವರ್ತಿಗಳ ಮೂಲಕ ಹಂಚಿಕೆಯಾಗಿದ್ದಕ್ಕೆ ಸಾಕ್ಷ್ಯಾಧಾರ ಸಿಕ್ಕಿದೆ. ಎಂಬಿಬಿಎಸ್​ ಮತ್ತು ಪಿಜಿ ಸೀಟುಗಳನ್ನೂ ಬಹುಮಧ್ಯವರ್ತಿಗಳ ಮೂಲಕ ವಿಲೇವಾರಿ ಮಾಡಿರುವುದು ಸ್ಪಷ್ಟವಾಗಿದೆ. ಟ್ರಸ್ಟಿಗಳ ಮೂಲಕ ಬರುವ ಪೇಮೆಂಟ್​ಗಳನ್ನು ಹೊಟೆಲ್​ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಐಟಿ ತಿಳಿಸಿದೆ.

ಮುಖ್ಯ ಟ್ರಸ್ಟಿಯ ಮನೆಯಲ್ಲಿ 4.22 ಕೋಟಿ 84 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಸೀಟುಗಳ ಹಂಚಿಕೆಯಾಗುವ ವೇಳೆ ಹಣ ನೀಡಿದ ವಿದ್ಯಾರ್ಥಿಗಳ ಹೇಳಿಕೆಗಳನ್ನೂ ಪಡೆಯಲಾಗಿದೆ. ನಗದು ವರ್ಗಾವಣೆ, ಸೀಟುಗಳ ಮಾರಾಟದ ಪ್ರಕರಣದಲ್ಲಿ ಏಜೆಂಟರು, ಬ್ರೋಕರ್​ಗಳು ಸಾಕ್ಷಿಯಾಗಿದ್ದಾರೆ ಎನ್ನವುದನ್ನು ಐಟಿ ಹೊರಡಿಸಿದ ಮಧ್ಯಮ ಪ್ರಕಟಣೆಯಿಂದ ತಿಳಿದುಬಂದಿದೆ.

ಒಟ್ಟಾರೆ ಪರಂ ಬೆನ್ನು ಬಿದ್ದಿರುವ ಐಟಿ ತಂಡ ಸದ್ಯ ನಿರಂತರವಾಗಿ ಪರಂ ಆಸ್ತಿ ಖಜಾನೆಯನ್ನು ಜಾಲಾಡುತ್ತಿದೆ. ಈ ವೇಳೆ ಮಹತ್ವದ ದಾಖಲೆಗಳು ಸಿಕ್ಕಿರುವುದರಿಂದ ತನಿಖೆ ಮುಂದುವರೆಯುವ ಸಾಧ್ಯತೆಗಳಿವೆ.

click me!