ಜೈಲು ಸೇರಿರುವ ಡಿ.ಕೆ.ಶಿವಕುಮಾರ್‌ಗೆ ಕಡೆಗೂ ಕುರ್ಚಿ ಸಿಕ್ತು!

By Kannadaprabha NewsFirst Published Oct 16, 2019, 11:15 AM IST
Highlights

ಡಿ.ಕೆ. ಶಿವಕುಮಾರ್‌ ಅಂತೂ ಚತುರ ರಾಜಕಾರಣಿ. ತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅವರಿಗೆ ಕುರ್ಚಿ ಸಮಸ್ಯೆ ಎದುರಾಗಿದೆ. ಕುರ್ಚಿಯಲ್ಲಿ ಕೂರಲು ಅವಕಾಶ ನೀಡುವಂತೆ ಅವರು ನ್ಯಾಯಾಲಯವನ್ನು ಬೇಡುವಂತಾಗಿದೆ!
 

ನವದೆಹಲಿ [ಅ.16]:  ರಾಜಕಾರಣಿಗಳು ಕುರ್ಚಿಗಾಗಿ ನಾನಾ ರೀತಿಯ ರಾಜಕೀಯ ಪಟ್ಟುಗಳನ್ನು ಹಾಕುವುದರಲ್ಲಿ ನಿಸ್ಸೀಮರು. ಅದರಲ್ಲೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅಂತೂ ಚತುರ ರಾಜಕಾರಣಿ. ತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅವರಿಗೆ ಕುರ್ಚಿ ಸಮಸ್ಯೆ ಎದುರಾಗಿದೆ. ಕುರ್ಚಿಯಲ್ಲಿ ಕೂರಲು ಅವಕಾಶ ನೀಡುವಂತೆ ಅವರು ನ್ಯಾಯಾಲಯವನ್ನು ಬೇಡುವಂತಾಗಿದೆ!

ಹೌದು, ಅಕ್ರಮ ಹಣಕಾಸು ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ತಿಹಾರ್‌ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್‌ ಅವರ ನ್ಯಾಯಾಂಗ ಬಂಧನ ಅವಧಿ ಮುಕ್ತಾಯಗೊಂಡಿದ್ದರಿಂದ ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹಾರ್‌ ಅವರ ಮುಂದೆ ಹಾಜರು ಪಡಿಸಲಾಯಿತು. ಕೋರ್ಟ್‌ಗೆ ಹಾಜರಾಗುತ್ತಲೇ ಡಿ.ಕೆ.ಶಿವಕುಮಾರ್‌ ಅವರು, ನನಗೆ ಜೈಲಿನಲ್ಲಿ ಕುರ್ಚಿಯಲ್ಲಿ ಕೂರಲು ಅವಕಾಶ ಸಿಗುತ್ತಿಲ್ಲ, ಇದನ್ನು ನ್ಯಾಯಾಲಯ ದಲ್ಲಿ ಉಲ್ಲೇಖಿಸಿ ಎಂದು ವಕೀಲರಿಗೆ ಸೂಚಿಸಿದರು. ಪ್ರಕರಣದ ವಿಚಾರಣೆ ಮುಕ್ತಾಯಗೊಂಡರೂ ವಕೀಲರು ಕುರ್ಚಿ ವಿಷಯ ಪ್ರಸ್ತಾಪಿಸದಿರುವುದನ್ನು ಗಮನಿಸಿದ ಡಿ.ಕೆ. ಶಿವಕುಮಾರ್‌ ಕೊನೆಗೆ ತಾವೇ ಖುದ್ದು ನ್ಯಾಯಾಲಯದ ಮುಂದೆ ಕುರ್ಚಿ ಸಮಸ್ಯೆ ಬಿಚ್ಚಿಟ್ಟರು.

ಕರ್ನಾಟಕದ ಜಿಲ್ಲೆಗಳಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ನನಗೆ ಗಂಭೀರವಾದ ಬೆನ್ನು ನೋವಿನ ಸಮಸ್ಯೆಯಿದೆ. ಬ್ಯಾರಕ್‌ನ ಹೊರಗೆ ಸಣ್ಣ ಲೈಬ್ರರಿಯಿದೆ. ನಾನು ಬ್ಯಾರಕ್‌ನ ಹೊರಗೆ ಹೋದಾಗ ಅಲ್ಲಿ ಕುರ್ಚಿಗಳಿದ್ದರೂ ಪೊಲೀಸರು ನನ್ನನ್ನು ಕೂರಲು ಬಿಡುತ್ತಿಲ್ಲ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಜತೆಗೆ, ನಾನು 30 ವರ್ಷಗಳ ಹಿಂದೆ ಬಂಧೀಖಾನೆ ಸಚಿವನಾಗಿದ್ದೆ. ನನಗೆ ಬಂಧೀಖಾನೆಯ ನೀತಿ, ನಿಯಮಗಳ ಅರಿವಿದೆ. ನಾನು ಬೇರೆ ಯಾವುದೇ ರಿಯಾಯಿತಿ, ವಿನಾಯಿತಿ ಕೇಳುವುದಿಲ್ಲ. ನನಗೆ ಕುರ್ಚಿಯಲ್ಲಿ ಕೂರಲು ಅವಕಾಶ ಮಾಡಿಕೊಡಿ ಎಂದು ನ್ಯಾಯಾಲಯವನ್ನು ಕೋರಿದರು. ಡಿ.ಕೆ.ಶಿವಕುಮಾರ್‌ ಅವರ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು, ಕುರ್ಚಿಯಲ್ಲಿ ಕೂರಲು ಮತ್ತು ಟಿ.ವಿ. ನೋಡಲು ಅವಕಾಶ ನೀಡಿದರು.

click me!