ನಿರುದ್ಯೋಗಿಗಳ ಪರ ಕಾಂಗ್ರೆಸ್ ಮಿಸ್ಡ್ ಕಾಲ್ ಅಭಿಯಾನ| ನಿರುದ್ಯೋಗಿಗಳನ್ನು ಪ್ರತಿಭಟನೆಗೆ ಅಣಿಗೊಳಿಸುವ ಉದ್ದೇಶ
ಬೆಂಗಳೂರು[ಜ.24]: ‘ಶಿಕ್ಷಣ ಪಡೆದರೂ ನಿಮಗೆ ಉದ್ಯೋಗ ಸಿಕ್ಕಿಲ್ಲವೇ? ಕೆಲಸಕ್ಕಾಗಿ ಅಲೆದಾಡಿ ಸುಸ್ತಾಗಿದ್ದೀರಾ? ನಿರುದ್ಯೋಗಿಗಳಾಗಿದ್ದೀರಾ? ಹಾಗಾದರೆ ಮಿಸ್ಡ್‌ಕಾಲ್ ಮಾಡಿ.’
ದೇಶದ ನಿರುದ್ಯೋಗ ಸಮಸ್ಯೆ ನಿಭಾಯಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷವು, ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯದ ಯುವ ಜನಾಂಗವನ್ನು ಪ್ರತಿಭಟನೆಗೆ ಅಣಿಗೊಳಿಸಲು ನಡೆಸಿರುವ ವಿನೂತನ ಅಭಿಯಾನವಿದು.
undefined
ವಿರೋಧಿಗಳ ನೆಲದಲ್ಲಿ ಧೈರ್ಯವಾಗಿ ಸಿಎಎ ಸಮರ್ಥಿಸಿಕೊಂಡ ಧೀರ!
ಈಗಾಗಲೇ ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಿದೆ. ‘ಭಾರತದ ಭರವಸೆಯ ಬೆಳಕಾಗಬೇಕಿದ್ದ ಯುವಕರ ಬದುಕು ತೀವ್ರ ನಿರುದ್ಯೋಗ ಸಮಸ್ಯೆಯಿಂದ ಕತ್ತಲಿಗೆ ಸರಿಯುತ್ತಿದೆ. ಇಷ್ಟಾದರೂ ಪ್ರಧಾನಿ ನರೇಂದ್ರಮೋದಿ ಅವರ ಸರ್ಕಾರ ಇನ್ನೂ ಮೌನವಾಗೇ ಇದೆ. ಬನ್ನಿ ಈ ಅಪಾಯದ ವಿರುದ್ಧ ದನಿಯೆತ್ತೋಣ. 8151994411 ಸಂಖ್ಯೆಗೆ ಮಿಸ್ಡ್‌ಕಾಲ್ ನೀಡುವ ಮೂಲಕ ನಿರುದ್ಯೋಗ ಅಭಿಯಾನದಲ್ಲಿ ಪಾಲ್ಗೊಳ್ಳೊಣ’ ಎಂದು ಟ್ವೀಟ್ ಮಾಡಿದೆ.
ದೇಶದ ಭರವಸೆಯ ಬೆಳಕಾಗಬೇಕಿದ್ದ ಯುವಜನತೆ ನಿರುದ್ಯೋಗ ಸಮಸ್ಯೆಯೊಂದಿಗೆ ಸೆಣಸುತ್ತಿದ್ದಾರೆ,
ಆದರೂ ಸರ್ಕಾರ ಉದ್ಯೋಗ ಸೃಷ್ಟಿಯ ಬಗ್ಗೆ ತಾತ್ಸಾರ ತೋರುತ್ತಿದೆ.
ಬನ್ನಿ ಈ ಅಪಾಯದ ವಿರುದ್ಧ ದನಿಯೆತ್ತೋಣ,
8151994411 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿರುದ್ಯೋಗ ನೊಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳೋಣ. pic.twitter.com/QMkY0JJ8Ml
ಹಾಗೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಮಿಸ್ಡ್‌ಕಾಲ್ ನೀಡುವ ಮೂಲಕ ‘ನಿರುದ್ಯೋಗ ನೋಂದಣಿ ಅಭಿಯಾನ’ದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅನರ್ಥ ಆರ್ಥಿಕತೆ ಮತ್ತು ದೂರದೃಷ್ಟಿಯಿಲ್ಲದ ಆಡಳಿತಾತ್ಮಕ ಕ್ರಮಗಳಿಂದ ದೇಶದ ಯುವಕರು ಕಂಗಾಲಾಗಿದ್ದು ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಬನ್ನಿ ಬಿಜೆಪಿ ಸುಳ್ಳುಗಳ ವಿರುದ್ಧ ದನಿಯೆತ್ತೋಣ ಎಂದು ಕರೆ ನೀಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇಟ್ಟಆರೋಪಿ ಆದಿತ್ಯ ರಾವ್ ನಿರುದ್ಯೋಗದಿಂದ ಈ ಕೃತ್ಯ ಎಸಗಿದ್ದ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ದೇಶದಲ್ಲಿ ಆರ್ಥಿಕತೆ ಕುಸಿತದಿಂದ ಯುವಜನರು ಉದ್ಯೋಗವಿಲ್ಲದೆ ಪರದಾಡುತ್ತಿರುವುದನ್ನು ಮುಂದಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಮಿಸ್ಡ್‌ಕಾಲ್ ಅಭಿಯಾನ ಆರಂಭಿಸಿದೆ.
ಎನ್‌ಆರ್‌ಸಿ: ಮೋದಿ ಮಾತು ನಿಜವೊ, ಶಾ ಮಾತೋ?
ಈ ಹಿಂದೆ ಪೌರತ್ವ ಕಾಯ್ದೆ ಪರವಾಗಿ ಬಿಜೆಪಿ ಮಿಸ್ಡ್‌ಕಾಲ್ ಅಭಿಯಾನ ಆರಂಭಿಸಿತ್ತು. ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಮಿಸ್‌ಕಾಲ್ ನೀಡುವ ಮೂಲಕ ನಿರುದ್ಯೋಗ ಅಭಿಯಾನ ಪ್ರಾರಂಭಿಸಿದೆ ಎನ್ನಲಾಗಿದೆ.
ನಿರುದ್ಯೋಗಿಗಳು 8151994411 ಸಂಖ್ಯೆಗೆ ಮಿಸ್ಡ್‌ಕಾಲ್ ನೀಡುವ ಮೂಲಕ ‘ನಿರುದ್ಯೋಗ ನೋಂದಣಿ ಅಭಿಯಾನ’ದಲ್ಲಿ ಪಾಲ್ಗೊಳ್ಳಬಹುದು.