ಪಾಕ್ ವಿರುದ್ಧ ಕ್ರಿಕೆಟ್‌ನಲ್ಲಿ ಗೆದ್ದರೆ ಯುದ್ಧ ಗೆದ್ದಂತೆ ಅಲ್ಲ: ಬಿಕೆ ಹರಿಪ್ರಸಾದ್

Published : Sep 29, 2025, 01:37 PM IST
BK Hariprasad on Pakistan cricket:

ಸಾರಾಂಶ

BK Hariprasad:  ಜಾತಿ ಗಣತಿಗೆ ಅಸಹಕಾರ ತೋರುವ ಸರ್ಕಾರಿ ನೌಕರರಿಗೆ ಬಿ.ಕೆ. ಹರಿಪ್ರಸಾದ್ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುತ್ತಾರೆ. ಇದು ಹಣಕ್ಕಾಗಿ ನಡೆಸುತ್ತಿರುವ ವ್ಯವಹಾರವೇ ಹೊರತು ದೇಶಪ್ರೇಮವಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು (ಸೆ.29): ಜಾತಿ ಗಣತಿಯಲ್ಲಿ ಸರ್ಕಾರಿ ನೌಕರರು ಅಸಹಕಾರ ತೋರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಕೆ ಹರಿಪ್ರಸಾದ್ ಎಚ್ಚರಿಕೆ ನೀಡಿದರು.

ದಾವಣಗೆರೆ, ಹುಬ್ಬಳ್ಳಿಯಲ್ಲಿ ಶೈಕ್ಷಣಿಕ ಸಮೀಕ್ಷೆಗೆ ಗೈರು, ಅಲಕ್ಷ್ಯ ತೋರಿರುವ ಸರ್ಕಾರಿ ಸಿಬ್ಬಂದಿಯನ್ನ ಅಮಾನತ್ತು ಮಾಡಿರುವ ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೆಲವು ಅಧಿಕಾರಿಗಳು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಇತರರಿಗೆ ಅವಕಾಶ ನೀಡದಿರುವ ಆರೋಪ ಕೇಳಿಬಂದಿದೆ. ಇಂತಹವರನ್ನು ಕೆಲಸದಿಂದ ತೆಗೆಯಲು ಕಾನೂನು ಇದೆ ಎಂದರು.

ನವೆಂಬರ್ ನಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಇದು ಸಿಎಂ ಡಿಸಿಎಂ ಅವರಿಗೆ ಸಂಬಂಧಿಸಿದ್ದು ಅವರೇ ಉತ್ತರ ಕೊಡ್ತಾರೆ ಎಂದರು. ಇದೇ ವೇಳೆ ಗುತ್ತಿಗೆದಾರರ ಡಬಲ್ ಕಮಿಷನ್ ಆರೋಪಕ್ಕೆ ತಿರುಗೇಟು ನೀಡಿದ ಬಿಕೆ ಹರಿಪ್ರಸಾದ್, ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದಾಯಿತು. ಡಬಲ್ ಕಮಿಷನ್ ಆಗಿದೆ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿರು.

ಇದನ್ನೂ ಓದಿ: India vs Pakistan: ಭಯೋತ್ಪಾದಕರ ಮೇಲೆ ಪಾಕ್ ತಂಡದ ಪ್ರೀತಿ, ಪಂದ್ಯ ಶುಲ್ಕವನ್ನ ಉಗ್ರ ಮಸೂದ್ ಅಜರ್ ಕುಟುಂಬಕ್ಕೆ ದಾನ, ಕ್ಯಾಪ್ಟನ್ ಆಘಾ ಬಹಿರಂಗ ಘೋಷಣೆ!

ಕ್ರಿಕೆಟ್ ಆಟದಿಂದ ದೇಶಪ್ರೇಮ ಬೆಳೆಯಲು ಸಾಧ್ಯವಿಲ್ಲ:

ಕ್ರಿಕೆಟ್ ಆಟದಿಂದ ದೇಶ ಪ್ರೇಮ, ದೇಶ ಭಕ್ತಿ ಅಳಿಯಲು ಸಾಧ್ಯ ಇಲ್ಲ. ಕ್ರಿಕೆಟ್ ಆಟ ನೋಡಿ ಅದು ದೇಶಭಕ್ತಿ, ದೇಶ ಪ್ರೇಮ ಅಂದ್ರೆ ಅದು ಹುಂಬುತನವಾದೀತು. ಪೆಹಲ್ಗಾವ್ ಘಟನೆ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಪಾಕ್ ಉಗ್ರರ ಹೇಯಕೃತ್ಯದ ರಕ್ತ ಇನ್ನು ಇದೆ. ಇಂಥ ಹೊತ್ತಲ್ಲಿ ಇವರು ಹೋಗಿ ಪಾಕ್ ಜೊತೆ ಕ್ರಿಕೆಟ್ ಆಡುವುದಾ? ಇವರು ನಿಜವಾದ ದೇಶಪ್ರೇಮಿಗಳಾಗಿದ್ರೆ ಅವರ ಜೊತೆ ಕ್ರಿಕೆಟ್ ಆಡಬಾರದಿತ್ತು. ಹಿಂದೆ ಕಾರ್ಗಿಲ್ ಯುದ್ದ ಆದ ಬಳಿಕ ಆಗಿನ ಬಿಜೆಪಿ ನಾಯಕರ ಸಂಬಂಧಿಕರು ಪಾಕ್ ಜೊತೆ ವ್ಯವಹಾರ ಇಟ್ಟುಕೊಂಡಿದ್ರು. ಈಗ ಗಡಿಪಾರು ಆಗಿರುವ ಅಮಿತ್ ಶಾ ಪುತ್ರನ ವ್ಯಾಪಾರ ಮಾಡಲು ಪಾಕ್ ಜೊತೆ ಕ್ರಿಕೆಟ್ ಆಡೋದು.ಏಕೆಂದ್ರೆ ಪಾಕ್ ಜೊತೆ ಆಡವಾಡಿದ್ರೆ ದುಡ್ಡು ಜಾಸ್ತಿ ಬರುತ್ತೆ ಅಂತ ಇದರಿಂದ ಸಾವಿರಾರು ಕೋಟಿ ವ್ಯವಹಾರ ಆಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಆಡಿಸಿರೋದು. ಇವರಿಗೆ ದೇಶಪ್ರೇಮ ಇದ್ದರೆ ಆಡಿಸುತ್ತಿದ್ದರಾ? ಅವರ ವ್ಯವಹಾರಕ್ಕಾಗಿ ದೇಶದ ಸ್ವಾಭಿಮಾನ ಕಾಲಿನ ಕೇಳಗೆ ಹಾಕಿದವರು ಬಿಜೆಪಿ ಅವರು ಇಂಥವರಿಂದ ಕಾಂಗ್ರೆಸ್ ಗೆ ದೇಶ ಭಕ್ತಿಯ ಪಾಠ ಕಲಿಯೋದೇನಿಲ್ಲ. ಪಾಕ್ ನವರು ಶತ್ರುಗಳು ಅಂತ ಬಿಜೆಪಿಯವರು ಹೇಳ್ತಾರೆ, ಆದ್ರೆ ಅವರ ಜೊತೆ ಬಿರಿಯಾನಿ ತಿನ್ನಲು ಹೋಗ್ತಾರೆ, ಕ್ರಿಕೆಟ್ ಆಡಿ ಮಜಾ ಮಾಡಲು ಹೋಗ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪಾಕ್‌ ವಿರುದ್ಧ ಕ್ರಿಕೆಟ್ ಗೆದ್ದರೆ ಯುದ್ಧ ಗೆದ್ದಂತಲ್ಲ: 

1965 ನೇ ಇಸವಿಯಿಂದ 1993 ರ ತನಕ ಪಾಕ್ ಜೊತೆ ಆಟವೇ ಆಡಿರಲಿಲ್ಲ. ಈ ಬಿಜೆಪಿಯವರು ಒಂದು ಕಡೆ ಪಾಕಿಸ್ತಾನ ಶತ್ರುಗಳು ಅಂತಾರೆ, ಇನ್ನೊಂದು ಕಡೆ ಅವರ ಜೊತೆ ಕ್ರಿಕೆಟ್ ಆಡಲು ಹೋಗ್ತಾರೆ. ಮಜಾ ಮಾಡಲು ಹೋಗ್ತಾರೆ. ಅವರ ನಿಲುವಿನಲ್ಲೇ ಗೊಂದಲ ಇದೆ. ಬಿಜೆಪಿಯವರಿಗೆ ಬೇರೆ ವಿಚಾರಗಳ ಬಗ್ಗೆ ಮಾತಾಡುವ ಯೋಗ್ಯತೆಯೇ ಇಲ್ಲ. ದೇಶದ ಪ್ರಧಾನಿಯಾಗಿ ಒಂದು ಕ್ರಿಕೆಟ್ ಆಟವನ್ನು 'ಆಪರೇಷನ್ ಸಿಂದೂರ್‌'ಗೆ ಹೋಲಿಕೆ ಮಾಡುವುದು ಸರಿಯೇ? ಪಾಕ್ ಜೊತೆ ಕ್ರಿಕೆಟ್ ಗೆದ್ದರೆ ಯುದ್ಧ ಗೆದ್ದಂತೆ ಅಲ್ಲ. ಟ್ರಂಪ್ ಹೇಳಿಕೆಗೆ ಪ್ರಧಾನಿ ಮೋದಿ ಮೊದಲು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌