ಕೃಷ್ಣ ಅವಧಿಯಲ್ಲಿ ನಡೆದಿತ್ತು ಈ ವ್ಯವಹಾರ : ಎಚ್‌ಡಿಕೆಗೆ ಎದುರಾಯ್ತು ಹೊಸ ಸಮಸ್ಯೆ

By Kannadaprabha NewsFirst Published Oct 28, 2020, 9:30 AM IST
Highlights

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನೀಡಿದ ಹೇಳಿಕೆಯೊಂದು ಅವರಿಗೆ ಯೂ ಟರ್ನ್ ಹೊಡೆದಿದೆ. ಏನದು ಹೇಳಿಕೆ 

ಬೆಂಗಳೂರು (ಅ.28): ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅವರ 10-12 ಮಂದಿ ಸಂಬಂಧಿಕರಿಗೆ ಮತ್ತು ಆಪ್ತರಿಗೆ ಅಧಿಕಾರವಧಿಯಲ್ಲಿ ‘ಕ್ಲಾಸ್‌-1’ ಹುದ್ದೆ ಕೊಡಿಸಿರುವುದಾಗಿ ಹೇಳಿಕೆ ನೀಡಿದ ಆರೋಪ ಹೊರಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ದೂರು ದಾಖಲಾಗಿದೆ. 

ನಿವೃತ್ತ ವಿಂಗ್‌ ಕಮಾಂಡರ್‌ ಜಿ.ಬಿ.ಅತ್ರಿ ಅವರು ಸ್ಪೀಡ್‌ ಪೋಸ್ಟ್‌ ಮೂಲಕ ಎಸಿಬಿಗೆ ದೂರು ನೀಡಿದ್ದಾರೆ. ‘ಮುಖ್ಯಮಂತ್ರಿಯಾಗಿದ್ದ ವೇಳೆ ಕೆಪಿಎಸ್‌ಸಿ ನೇಮಕಾತಿಯಲ್ಲಿ ಪುಟ್ಟಣ್ಣ ಸಂಬಂಧಿಕರು ಮತ್ತು ಆಪ್ತರಿಗೆ ಕ್ಲಾಸ್‌-1 ಹುದ್ದೆ ಕೊಡಿಸಲಾಗಿದೆ. 1999-2000ನೇ ಸಾಲಿನಲ್ಲಿ ಕೆಪಿಸಿಎಸ್‌ ಅಧ್ಯಕ್ಷರಾಗಿ ಎಚ್‌.ಎನ್‌.ಕೃಷ್ಣ ಅವರು ಇದ್ದರು. ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆ ಈ ಬಗ್ಗೆ ತಿಳಿಸಿದ್ದು, ಮಾಧ್ಯಮಗಳಲ್ಲಿ ವರದಿಯಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಾನು ಯಾವತ್ತೂ ಹೀರೋ, ವಿಲನ್ ಅಲ್ಲವೇ ಅಲ್ಲ: ಎಚ್‌ಡಿಕೆಗೆ ಸಿದ್ದು ಗುದ್ದು..! .

ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಹುದ್ದೆಯಲ್ಲಿದ್ದ ವ್ಯಕ್ತಿ ಸರ್ಕಾರಿ ನೇಮಕಾತಿಯಲ್ಲಿ ಪ್ರಭಾವ ಬೀರಿರುವುದು ಕಾನೂನು ಉಲ್ಲಂಘನೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಭ್ರಷ್ಟಾಚಾರ ತಡೆ ಕಾಯ್ದೆ 1998ರ ಸೆಕ್ಷನ್‌ 8 ಮತ್ತು 9ರ ಉಲ್ಲಂಘನೆ ಮಾಡಲಾಗಿದೆ. ಹೀಗಾಗಿ ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಜಿ.ಬಿ.ಅತ್ರಿ ಹೇಳಿದ್ದಾರೆ.

click me!