ಅವಳಿ ನಗರದಲ್ಲಿ ರೌಡಿಗಳಿಗೆ ಶುರುವಾಯ್ತು ನಡುಕ: ಖಡಕ್ ಎಚ್ಚರಿಕೆ ನೀಡಿದ ಕಮಿಷನರ್ ಶಶಿಕುಮಾರ್

By Govindaraj SFirst Published Jul 8, 2024, 12:18 PM IST
Highlights

ಕಳೆದ ಒಂದು ವರ್ಷದಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹಾಳಾಗಿತ್ತು. ಎಲ್ಲೆಂದರಲ್ಲೆ ಕೊಲೆಗಳು, ಚಾಕು ಇರಿತ ಪ್ರಕರಣಗಳು, ಕಳ್ಳತನ ಪ್ರಕರಣಗಳು, ಹಲ್ಲೆಗಳಂತಹ ಸಾಕಷ್ಟು ಕೇಸಗಳು ಆಗುತ್ತಿದ್ದವು. 

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಜು.08): ಕಳೆದ ಒಂದು ವರ್ಷದಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹಾಳಾಗಿತ್ತು. ಎಲ್ಲೆಂದರಲ್ಲೆ ಕೊಲೆಗಳು, ಚಾಕು ಇರಿತ ಪ್ರಕರಣಗಳು, ಕಳ್ಳತನ ಪ್ರಕರಣಗಳು, ಹಲ್ಲೆಗಳಂತಹ ಸಾಕಷ್ಟು ಕೇಸಗಳು ಆಗುತ್ತಿದ್ದವು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯಗಳನ್ನ ಕೆಲ ದುಷ್ಟ ವ್ಯಕ್ತಿಗಳು ಮಾಡುತ್ತಾ ಬಂದಿದ್ದರು. ಆದರೆ ಅಂತವರನ್ನ ಇಲ್ಲಿಯವರಗೆ ದೊಡ್ಡ ಮಟ್ಟದಲ್ಲಿ ಮಟ್ಡ ಹಾಕುವಂತಹ ಗೋಜಿಗೆ ಪೋಲಿಸ್ ಇಲಾಖೆ ಹೋಗಿರಲಿಲ್ಲ. ಆದರೆ ಇದಿಗ ಬಂದ ನೂತನ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ, ಎಲ್ ಆ್ಯಂಡ ಓ ಡಿಸಿಪಿ ನಂದಗಾವಿ, ಮತ್ತು ಡಿಸಿಪಿ ರವಿಶ್ ಅವಳಿ ನಗರದಲ್ಲಿ ಭಾರಿ ಕಾರ್ಯಾಚರಣೆಯನ್ನು ಮಾಡುತ್ತಿದ್ದಾರೆ.

Latest Videos

ಕಳೆದ ಮೂರು ತಿಂಗಳ ಹಿಂದೆ ನೇಹಾ ಹಿರೆಮಠ ಮತ್ತು ಅಂಜಲಿ ಕೊಲೆ ಕೇಸ್ ಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು ರಾಜ್ಯದಲ್ಲಿ ಧಾರವಾಡ ಜಿಲ್ಲೆಯ ಕೊಲೆ ಕೇಸಗಳು ಭಾರಿ ಮುಜುಗುರಕ್ಕೆ ಇಡಾಗಿದ್ದವು. ಆದರೆ ಹಿಂದಿನ ಪೋಲಿಸ್ ಕಮಿಷನರ್ ಮಹಿಳಾ ಕಮಿಷನರ್ ಇರೋದರಿಂದ ಎಲ್ಲೋ ಒಂದು ಕಡೆ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿಡಲು ಆಗಿರಲಿಲ್ಲ.ಸದ್ಯ ಕಳೆದ ವಾರವೆ ಅಧಿಕಾರ ವಹಿಸಿಕ್ಕೊಂಡ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ ಅವರು ಜೊತೆಗೆ ಡಿಸಿಪಿಗಳಾದ ನಂದಗಾವಿ, ಮತ್ತು ರವೀಶ್ ಸಾಥ್ ಕೊಟ್ಡಿದ್ದಾರೆ..

ಕಳೆದ ನಾಲ್ಕು ದಿನಗಳಿಂದ ಅವಳಿ ನಗರದಲ್ಲಿ ಶಾಂತಿ ಸುವ್ಯಸ್ಥೆ ಕಾಪಾಡಲು ಮುಂದಾದ ಪೋಲಿಸ್ ಕಮಿಷನರ್ ಶಶಿಕುಮಾರ ಅಧಿಕಾರಿ ವಹಿಸಿಕ್ಕೊಂಡು ನಾಲ್ಕೆ ದಿನದಲ್ಲಿ ಸಿಟಿರೌಂಡ್ಸ್ ಮಾಡುತ್ತಿದ್ದಾರೆ ಇದರಿಂದ  ರೌಡಿಶಿಟಗಳಿಗೆ ಎದೆಯಲ್ಲಿ ಢವ ಢವ ಶುರುವಾಗಿದೆ ಪುಂಡ ಪೋಕರಿಗಳಿಗೆ, ಶಾಂತಿ ಹಾಳು ಮಾಡುವವರಿಗೆ, ರೌಡಿ ಶೀಟರ್ ಗಳಿಗೆ ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ ಕಳೆದ ನಾಲ್ಕೈದು ದಿನದಲ್ಲಿ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಸುಮಾರು 260 ಕ್ಕೂ ರೌಡಿ ಶೀಡರ್ ಮತ್ತು ಶಾಂತಿ ಹಾಳು ಮಾಡುವರಿಗೆ ವಶಕ್ಕೆ ಪಡೆದು ಖಡಕ್ ವಾರ್ನಂಗ್ ಮಾಡಿದ್ದಾರೆ ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯ 68 ಜನ ರೌಡಿಶೀಟರ್, 10 ಜನ ಎಂಓಬಿ, ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆ ಕೊಡುತ್ತಿದ್ದ 80 ಜನ ರನ್ನ ವಶಕ್ಕೆ ಪಡೆದು ಬರೊಬ್ಬರಿ 158 ಜನರ ಮೆಲೆ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕೆಪಿ ಆ್ಯಕ್ಟ ಪ್ರಕಾರ ದೂರು ದಾಖಲು ಮಾಡಿ ಎಲ್ಲರಿಗೂ ಎಚ್ಚರಿಕೆ ನೀಡಿ ಇಂತವರ ಮೆಲೆ ನಿಗಾ ಇಡಲು ಕಮಿಷನರ್ ಠಾಣಾ ಪಿಐ ಗಳಿಗೆ ಸೂಚನೆ ನಿಡಿದ್ದಾರೆ.

ಗ್ರಾಮ ಪಂಚಾಯತಿಗಳಿಗೆ ರಾಜ್ಯ ಸರ್ಕಾರ ಡೆಂಘೀ ಅಲರ್ಟ್: ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಇಲ್ಲಿಯವರೆಗೆ ಅವಳಿ ನಗರದಲ್ಲಿ ಕಮಿಷನರ್ ವ್ಯಾಪ್ತಿಯಲ್ಲಿ 260 ಕ್ಕೂ ಹೆಚ್ಚು ಜನರಿಗೆ ಎಚ್ಚರಿಕೆ ನಿಡಿದ್ದಾರೆ.ಒಂದಂತೂ ಸತ್ಯ ಅಂದುಕ್ಕೊಂಡಂತೆ ಕ್ರೈಂ ತಡೆಗಟ್ಟುವಲ್ಲಿ ನೂತನ ಪೋಲಿಸ್ ಕಮೀಷನರ್ ಮುಂದಾಗಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಅವಳಿ ನಗರದಲ್ಲಿ ಹಾಳಾಗಿದ್ದ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಮುಂದಾಗಿರೋದು ಜನಸಾಮಾನ್ಯರು ಇನ್ನ ಮೆಲೆ ಭಯ ಬೀತಿ ಇಲ್ಲದಂತೆ ಓಡಾಡುವ ಸಂಗತಿಯನ್ನ ಹುಟ್ಟುಹಾಕಿದ್ದಾರೆ.  ಜೊತೆಗೆ ಜನಸಾಮಾನ್ಯರ ನೀರಿಕ್ಷೆಗಿಂತಲೂ ಕೆಲಸ ಮಾಡಲು ಮುಂದಾದ ಖಡಕ್ ಕಮಿಷನರ್ ಎನ್ ಶಶಿಕುಮಾರ, ಡಿಸಿಪಿ ನಂದಗಾವಿ, ಮತ್ತು ಡಿಸಿಪಿ ರವೀಶ್ ಅವರಿಗೆ ಜನಸಾಮಾನ್ಯರು ಸೆಲ್ಯೂಟ್ ಹೊಡೆಯುತ್ತಿದ್ದಾರೆ.

click me!