ನಮ್ಮ ಮೆಟ್ರೋದಲ್ಲಿ ಸಂಚರಿಸಿದ ನಿಮ್ಮ ಅನುಭವ ಹೇಗಿದೆ? ಬಿಎಂಆರ್‌ಸಿಎಲ್‌ನಿಂದ ಮೇ 6ರವರೆಗೆ ಸರ್ವೆ

By Suvarna NewsFirst Published Apr 8, 2024, 2:47 PM IST
Highlights

ಬೆಂಗಳೂರು ಮೆಟ್ರೋ ರೈಲು ನಿಗಮವು ‘ಮೆಟ್ರೋ ಪ್ರಯಾಣಿಕರ ತೃಪ್ತಿ ಸಮೀಕ್ಷೆ’ ಯನ್ನು ಏ.8ರಿಂದ ಮೇ 6ರವರೆಗೆ ಕೈಗೊಂಡಿದೆ.

ಬೆಂಗಳೂರು (ಏ.08): ಬೆಂಗಳೂರು ಮೆಟ್ರೋ ರೈಲು ನಿಗಮವು ‘ಮೆಟ್ರೋ ಪ್ರಯಾಣಿಕರ ತೃಪ್ತಿ ಸಮೀಕ್ಷೆ’ ಯನ್ನು ಏ.8ರಿಂದ ಮೇ 6ರವರೆಗೆ ಕೈಗೊಂಡಿದೆ. ಮೆಟ್ರೋ ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಅಗತ್ಯವಾಗಿ ಆಗಬೇಕಾದ ಬದಲಾವಣೆ ಮಾಡಿಕೊಳ್ಳಲು ಈ ಸಮೀಕ್ಷೆ ನಡೆಸಲಾಗುವುದು. ಜೊತೆಗೆ ಲಂಡನ್‌ನ ಇಂಪೀರಿಯಲ್‌ ಕಾಲೇಜ್‌ ಮೆಟ್ರೋಗಾಗಿ ನಡೆಸಲಿರುವ ಕಾರ್ಯಸೂಚಿ ಅಧ್ಯಯನಕ್ಕೂ ನೆರವಾಗಲಿದೆ. ಕನ್ನಡ, ಇಂಗ್ಲಿಷ್‌ನಲ್ಲಿ ಸಮೀಕ್ಷೆ ನಡೆಯಲಿದ್ದು, ಪ್ರಯಾಣಿಕರು www.bmrc.co.in ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಸಮೀಕ್ಷೆಯ ಕ್ಯೂಆರ್‌ ಕೋಡ್‌ನ್ನು ರೈಲ್ವೇ ನಿಲ್ದಾಣದಲ್ಲಿ ಪ್ರದರ್ಶಿಸಲಾಗುವುದು. ಹೆಚ್ಚಿನ ಮಾಹಿತಿಗೆ 1800-425-12345ಗೆ ಸಂಪರ್ಕಿಸಬಹುದು.

ಬೆಂಗಳೂರು: ಮೆಟ್ರೋಗೆ ವರ್ಷಾಂತ್ಯಕ್ಕೆ ಹೆಚ್ಚುವರಿ ರೈಲು ಸೇರ್ಪಡೆ

BMRCL ಪ್ರಕಾರ, Namma Metro ಗಾಗಿ ಪ್ರಮುಖ ಕಾರ್ಯಕ್ಷಮತೆ ಸೂಚಕಗಳನ್ನು ರೂಪಿಸಲು ಈ ಸಮೀಕ್ಷೆಯು ಲಂಡನ್‌ನ ಇಂಪೀರಿಯಲ್ ಕಾಲೇಜ್‌ಗೆ ಪ್ರಮುಖ ಅಧ್ಯಯನವಾಗಿಯೂ ಕಾರ್ಯನಿರ್ವಹಿಸುತ್ತದೆ.

ಬೆಂಗಳೂರು: ಜೆ.ಪಿ.ನಗರ-ಕಡಬಗೆರೆ ಮೆಟ್ರೋ ಕಾಮಗಾರಿ ವರ್ಷಾಂತ್ಯಕ್ಕೆ ಶುರು?

ನಮ್ಮ ಮೆಟ್ರೋದಲ್ಲಿ ಜನವರಿಯಿಂದ ಮಾರ್ಚ್ ವರೆಗೆ 21 ಲಕ್ಷ ಜನ ಸಂಚರಿಸಿದ್ದು, ಹೀಗಾಗಿ ದಟ್ಟಣೆ ತಪ್ಪಿಸಲು ಭೋಗಿಗಳ ಸಂಖ್ಯೆ ಹೆಚ್ಚಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಮಾರ್ಚ್‌ 7 ಲಕ್ಷ, ಫೆಬ್ರವರಿ 7.5 ಲಕ್ಷ, ಜನವರಿ 6.72 ಲಕ್ಷ ಜನ ಮೆಟ್ರೋದಲ್ಲಿ ಓಡಾಡಿದ್ದಾರೆ.

 

Passenger Satisfaction Survey on Namma Metro. Below is the QR Code to access the feedback page.
The survey Link is as follows
https://t.co/021uc4rFvohttps://t.co/CnFXPWX0ED
Public are requested to participate in large numbers & give their valuable feedback. pic.twitter.com/nx0XjX7rlK

— ನಮ್ಮ ಮೆಟ್ರೋ (@OfficialBMRCL)
click me!