ತುಳು ಭಾಷೆಗೆ ಸಾಂವಿಧಾನಿಕ ‌ಮಾನ್ಯತೆ ನೀಡಿ: ತುಳುನಾಡಿನಲ್ಲಿ ಟ್ವಿಟ್ಟರ್ ಅಭಿಯಾನ!

Published : Jun 13, 2021, 01:52 PM ISTUpdated : Jun 13, 2021, 02:19 PM IST
ತುಳು ಭಾಷೆಗೆ ಸಾಂವಿಧಾನಿಕ ‌ಮಾನ್ಯತೆ ನೀಡಿ: ತುಳುನಾಡಿನಲ್ಲಿ ಟ್ವಿಟ್ಟರ್ ಅಭಿಯಾನ!

ಸಾರಾಂಶ

* ತುಳು ಭಾಷೆಗೆ ಸಾಂವಿಧಾನಿಕ ‌ಮಾನ್ಯತೆಗೆ ಒತ್ತಾಯಿಸಿ ಕರಾವಳಿಯಲ್ಲಿ ಟ್ವಿಟ್ಟರ್ ಅಭಿಯಾನ * ಭಾರತದ ಟ್ವಿಟರ್ ಟ್ರೆಂಡಿಂಗ್ ನಲ್ಲಿ #TuluOfficialinKA_Klಗೆ 31ನೇ ಸ್ಥಾನ * ಬೆಳಿಗ್ಗಿನಿಂದ ಈವರೆಗೆ ಸಾವಿರಾರು ಜನರಿಂದ ಟ್ವೀಟ್

ಮಂಗಳೂರು(ಜೂ.13): ರಾಜ್ಯದ ಮಂಗಳೂರು ಉಡುಪಿ ಭಾಗಕ್ಕೆ ಹೋದರೆ ಇಲ್ಲಿ ಜನರ ಬಾಯಲ್ಲಿ ಕೇಳಲು ಸಿಗೋದು ಒಂದೇ ಭಾಷೆ, ಅದು ತುಳು. ಈ ಭಾಗದ ಜನರು ತುಳುವರೆಂದೇ ಗುರುತಿಸಿಕೊಳ್ಳುತ್ತಾರೆ. ಇಲ್ಲಿನ ಜನತೆಯೂ ಅಷ್ಟೇ ತಮ್ಮನ್ನು ತಾವು 'ತುಳುವಪ್ಪೆನ ಜೋಕುಲು'(ತುಳು ಅಮ್ಮನ ಮಕ್ಕಳು) ಎಂದೇ ಕರೆಸಿಕೊಳ್ಳುತ್ತಾರೆ. ಅಂದರೆ ಈ ಭಾಷೆಗೆ ಅವರು ತಾಯಿ ಸ್ಥಾನವನ್ನೇ ನೀಡಿದ್ದಾರೆ.  ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೇ ನಾನಾ ಧರ್ಮದ ಜನರಿದ್ದರೂ ಇವರನ್ನೆಲ್ಲಾ ಒಂದಾಗಿಸಿರುವುದು ತುಳು ಭಾಷೆ. ಧರ್ಮ ಎಂಬ ಗಡಿಯನ್ನು ತಳ್ಳಿ ಕರಾವಳಿ ಭಾಗದ ಜನರನ್ನು ಒಂದಾಗಿಸಿದೆ ಈ ಭಾಷೆ. ಸದ್ಯ ಈ ತುಳು ಭಾಷೆಗೆ ಸಾಂವಿಧಾನಿಕ ‌ಮಾನ್ಯತೆ ನೀಡುವಂತೆ ಒತ್ತಾಯಿಸಿ ಕರಾವಳಿಯಲ್ಲಿ ಟ್ವಿಟರ್ ಅಭಿಯಾನ ಆರಂಭವಾಗಿದೆ.

ತುಳು ಧ್ವಜಕ್ಕೆ ಅವಮಾನ: ಆಕ್ರೋಶ ವ್ಯಕ್ತ ಪಡಿಸಿದ ನಟಿ ಅದ್ವಿತಿ ಶೆಟ್ಟಿ

ಇಂದು ಭಾನುವಾರ ತುಳು ಸಂಘಟನೆಗಳು ಮತ್ತು ತುಳು ಭಾಷಿಗರರಿಂದ ಆರಂಭವಾಗಿರುವ ಈ ಅಭಿಯಾನ ಬೆಂಬಲಿಸಿ ಸಾವಿರಾರು ಟ್ವೀಟ್ ಗಳು ಹರಿದು ಬರಲಾರಂಭಿಸಿವೆ. ಭಾರತದ ಟ್ವಿಟರ್ ಟ್ರೆಂಡಿಂಗ್‌ನಲ್ಲಿ #TuluOfficialinKA_Kl ಹ್ಯಾಷ್‌ ಟ್ಯಾಗ್ 31ನೇ ಸ್ಥಾನದಲ್ಲಿದೆ. ತುಳು ಭಾಷೆಗೆ ಸಾಂವಿಧಾನಿಕ ‌ಮಾನ್ಯತೆ ನೀಡುವಂತೆ ಒತ್ತಾಯಿಸಿ ಅಭಿಯಾನ ಆರಂಭವಾದಾಗಿನಿಂದ ಈವರೆಗೂ ಒಟ್ಟು 95 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳಾಗಿದ್ದು, ತುಳುನಾಡಿನ ಜನತೆಯ ಒಗ್ಗಟ್ಟು ಪ್ರದರ್ಶನವಾಗಿದೆ.

ತುಳು ಭಾಷೆಯ 'ತುಳು ಬರವು' ಯೂನಿಕೋಡ್ ಲಿಪಿ ಬಿಡುಗಡೆ!

ಈ ಹಿಂದೆಯೂ ತುಳುಭಾಷೆಯ ಸ್ಥಾನಮಾನಕ್ಕಾಗಿ ಟ್ವೀಟ್‌ ಅಭಿಯಾನ ಮಾಡಲಾಗಿತ್ತು. ಆದರೆ ಸರ್ಕಾರ ತುಳುವರ ಕೂಗಿಗೆ ಕಿವಿಯಾಗಿಲ್ಲ, ಕರಾವಳಿ ಭಾಗದ ರಾಜಕಾರಣಿಗಳು ಅಸಕ್ತಿ ತೋರಿಸಿರಲಿಲ್ಲ. ಹೀಗಾಗಿ ಮತ್ತೆ ಜೈ ತುಳುನಾಡು ಸಂಘಟನೆ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ಆರಂಭಿಸಲಾಗಿದೆ. ಸಂಜೆಯವರೆಗೂ ನಡೆಯಲಿರುವ ಅಭಿಯಾನದಲ್ಲಿ ದೇಶ-ವಿದೇಶಗಳ ತುಳುವರು ಭಾಗಿಯಾಗಲಿದ್ದಾರೆ. 

ಇನ್ನು ಅಭಿಯಾನದಡಿಯಲ್ಲಿ ಟ್ವೀಟ್‌ ಮಾಡುತ್ತಿರುವವರು ಪ್ರಧಾನಿ, ಮುಖ್ಯಮಂತ್ರಿ ಸೇರಿದ ಜನಪ್ರನಿಧಿಗಳಿಗೂ ಟ್ಯಾಗ್ ಮಾಡಿ ತುಳು ಭಾಷೆಗೆ ಸಾಂವಿಧಾನಿಕ ‌ಮಾನ್ಯತೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ