
ಮಧುಗಿರಿ (ತುಮಕೂರು): ತಮಿಳುನಾಡಿನಲ್ಲಿ ಮುಖ್ಯಮಂತ್ರಿ ವಿಜಯ್ ಅವರು ದೇಗುಲ ಮತ್ತು ಶಾಲೆಗಳ ಬಳಿಯ 700 ಬಾರ್‌ಗಳನ್ನು ಏಕಾಏಕಿ ಬಂದ್ ಮಾಡುವುದಾಗಿ ಕೈಗೊಂಡಿರುವ ನಿರ್ಧಾರ ಸರಿಯಲ್ಲ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಿಜಯ್ ಅವರಿಗೆ ಆಡಳಿತದ ಅನುಭವವಿಲ್ಲ. ಸರ್ಕಾರಕ್ಕೆ ಆದಾಯವನ್ನು ತರುವ ಬಾರ್‌ಗಳನ್ನು ಬಂದ್ ಮಾಡುವುದು ಆತುರದ ನಿರ್ಧಾರ. 700 ಬಾರ್‌ಗಳನ್ನು ಮುಚ್ಚುವ ಬದಲಾಗಿ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು, ದೇಗುಲಗಳ ಬಳಿ ಅವುಗಳನ್ನು ತೆರೆಯದಂತೆ ಕ್ರಮ ವಹಿಸಬಹುದಾಗಿತ್ತು’ ಎಂದು ಸಲಹೆ ನೀಡಿದರು.
ಭಾವಾವೇಶದಿಂದ ಭರವಸೆಗಳನ್ನು ನೀಡುವುದರಿಂದ ಮುಂಬರುವ ಸಮಸ್ಯೆ-ಸವಾಲು ಹೇಗೆ ಎದುರಿಸುವರೋ ನೋಡಬೇಕು. ವಿಜಯ್‌ರ ಹಾದಿ ಮುಳ್ಳಿನಿಂದ ಕೂಡಿದ್ದು, ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ