ಮುಡಾ ಸುಳಿಯಲ್ಲಿ ಸಿಲುಕಿ ಚಾಮುಂಡಿ ತಾಯಿಗೆ ಶರಣಾದ ಸಿದ್ದರಾಮಯ್ಯ, ಅರ್ಚಕರಿಂದ ಕುಂಕುಮ ಹಚ್ಚಿಸಿಕೊಂಡ ಸಿಎಂ!

By Gowthami K  |  First Published Sep 3, 2024, 12:35 PM IST

ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಇಂದು ಮತ್ತೆ ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 23 ದಿನಗಳಲ್ಲಿ ಎರಡನೇ ಬಾರಿಗೆ ಚಾಮುಂಡಿ ತಾಯಿ ದರ್ಶನ ಪಡೆದ ಸಿಎಂ, ನಾಡದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ಮೈಸೂರು (ಸೆ.3): ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಇಂದು ಮತ್ತೆ ಮೈಸೂರು ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕರಿಂದ ಹಣೆಗೆ ಕುಂಕುಮ ಹಚ್ಚಿಸಿಕೊಂಡರು.  23 ದಿನಗಳಲ್ಲಿ ಎರಡನೇ ಬಾರಿಗೆ ಚಾಮುಂಡಿ ತಾಯಿ ದರ್ಶನ ಪಡೆದ ಸಿಎಂ, ನಾಡದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಗಣಪತಿ, ಆಂಜನೇಯ ಸೇರಿದಂತೆ ಇತರ ದೇವರುಗಳಲ್ಲೂ ಪ್ರಾರ್ಥನೆ ಮಾಡಿದರು.

ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ತಾಯಿ ಚಾಮುಂಡೇಶ್ವರಿ ಮುಂದೆ ಪ್ರಾರ್ಥಿಸಿ ಈಡುಗಾಯಿ ಒಡೆದರು. ತೆಂಗಿನಕಾಯಿ ಮೇಲೆ ಕರ್ಪೂರ ಹಚ್ಚಿ,  ಆರತಿ ಮಾಡಿ ತಾಯಿಗೆ ಪೂಜಿಸಿ ಈಡುಗಾಯಿ ಒಡೆದರು. ವಿಶೇಷವೆಂದರೆ ಧಾರ್ಮಿಕ ನಂಬಿಕೆಗಳ ಬಗ್ಗೆ  ಅಷ್ಟಾಗಿ ನಂಬದಿರುವ ಸಿದ್ದರಾಮಯ್ಯ ಇಂದು ವಿಶೇಷ ಪ್ರಾರ್ಥನೆ ಮಾಡಿ, ಅರ್ಚಕರಿಂದ ಹಣೆಗೆ ಕುಂಕುಮ ಹಚ್ಚಿಸಿಕೊಂಡಿದ್ದು, ಈಡುಗಾಗಿ ಒಡೆದಿದ್ದು ವಿಶೇಷವಾಗಿತ್ತು. ಹೀಗಾಗಿ ಮುಡಾ ಹಗರಣದ ಸಂಕಷ್ಟದ ಬಳಿಕ ದೇವರ ಮೊರೆ ಹೋಗಿರುವುದು ಸಿದ್ದರಾಮಯ್ಯ ಅವರಲ್ಲಿ ಧಾರ್ಮಿಕ ನಂಬಿಕೆಯನ್ನು ಹೆಚ್ಚಿಸಿದಂತಿದೆ.

Tap to resize

Latest Videos

ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌: ಇನ್ನೂ 1 ವಾರ ಸಿಎಂ ಸಿದ್ದರಾಮಯ್ಯ ನಿರಾಳ

ಚಾಮುಂಡೇಶ್ವರಿ ದೇವಿ ಭೇಟಿ ವೇಳೆ ಸಿಎಂ ಜೊತೆಗೆ ಹೆಚ್.ಸಿ.ಮಹದೇವಪ್ಪ ಕೂಡ ಸಾಥ್ ನೀಡಿದರು. ಈ ವೇಳೆ ಸಿಎಂ ಚಾಮುಂಡೇಶ್ವರಿ ದೇವಿಯ ಕುಂಕುಮ ಹಾಗೂ ಹೂ ಪಡೆದುಕೊಂಡರೆ. ಈ ವೇಳೆ ಮಹದೇವಪ್ಪಗೂ ಪ್ರಸಾದ ನೀಡಲು  ಅರ್ಚಕರು ಮುಂದಾದರು. ಈ ವೇಳೆ  ಕೈ ಸನ್ನೆಯಲ್ಲೇ ನನಗೆ ಬೇಡಾ ಎಂದು ಮಹದೇವಪ್ಪ ಹೇಳಿದರು.

ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಬಳಿಕ ಸಿಎಂ ಸಿದ್ದರಾಮಯ್ಯ‌. ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಭಾಗಿ‌ಯಾಗಿದ್ದಾರೆ. ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಸಭೆ ನಡೆಯುತ್ತಿದೆ ‌. ಸಭೆಯಲ್ಲಿ ಸಿಎಂ ಸಚಿವ ಕೆ.ವೆಂಕಟೇಶ್,ಮಹದೇವಪ್ಪ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಶಾಸಕ ಕೆ.ಹರೀಶ್ ಗೌಡ,ಕೆ.ರವಿಶಂಕರ್  ಪುತ್ರ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಸೇರಿ ಹಲವರು ಭಾಗಿಯಾಗಿದರು.

ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

click me!