
ಬೆಂಗಳೂರು (ಆ.11) ನೋ..ನೋ..ನೋ..ರಾಜೀನಾಮೆ ಬೇಡ, ವಜಾ ಆದೇಶ ಆಗಬೇಕು. ಸಂಜೆ 6 ಗಂಟೆ ವರೆಗೆ ಸಮಯ ಕೊಡುತ್ತೇವೆ. ಇದು ಕೆನ್ ರಾಜಣ್ಣ ಕುರಿತು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೊಟ್ಟ ಸ್ಪಷ್ಟ ಸಂದೇಶ. ಈ ಸಂದೇಶ ಸಿಕ್ಕಿದ ಬೆನ್ನಲ್ಲೇ ತಮ್ಮ ಆಪ್ತ ಕೆಎನ್ ರಾಜಣ್ಣ ಉಳಿಸಿಕೊಳ್ಳಲು ಸಿದ್ದರಾಮಯ್ಯ ಶತ ಪ್ರಯತ್ನ ನಡೆಸಿದ್ದಾರೆ. ಆದರೆ ಎಲ್ಲಾ ಬಾಗಿಲು ಮುಚ್ಚಿದಾಗ ಬೇರೆ ದಾರಿಯಿಲ್ಲದೆ ವಜಾ ಆದೇಶ ನೀಡಬೇಕಾಗಿ ಬಂದಿದೆ. ಕೆಎನ್ ರಾಜಣ್ಣ ತಲೆದಂಡದ ಮಾಹಿತಿ ಬಹಿರಂಗವಾಗಿದೆ. ಬೆಳಗ್ಗೆ 11 ಗಂಟೆಯಿಂದ ಆರಂಭಗೊಂಡ ಈ ಮಾತುಕತೆ, ಚರ್ಚೆ, ಕೊನೆಗೆ ವಜಾ ಆದೇಶದೊಂದಿದೆ ಸ್ಫೋಟಗೊಂಡಿತ್ತು.
ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಡುವಂತೆ ಕಾಂಗ್ರೆಸ್ ಹೈಕಮಾಂಡ್ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೂಚನೆ ನೀಡಿತ್ತು. ಯಾವುದೇ ಕಾರಣಕ್ಕೂ ಕೆಎನ್ ರಾಜಣ್ಣ ಸಂಪುಟದಲ್ಲಿ ಇರಬಾರದು ಎಂದು ಸೂಚಿಸಿತ್ತು. ಇದೇ ವೇಳೆ ಕೆಎನ್ ರಾಜಣ್ಣ ಪರ ಮಾತನಾಡಲು ಮುಂದಾದ ಸಿದ್ದರಾಮಯ್ಯಗೆ ಒಂದೇ ಮಾತಿನಲ್ಲಿ ಕಾಂಗ್ರೆಸ್ ಹೈಮಾಂಡ್ ಸಂದೇಶ ರವಾನಿಸಿತ್ತು. ವರಿಷ್ಠರನ್ನು ಒಪ್ಪಿಸಲು ಸಿದ್ದರಾಮಯ್ಯ ನಡೆಸಿದ ಪ್ರಯತ್ನಗಳು ವಿಫಲಗೊಂಡಿತ್ತು. ಕಾರಣ ರಾಜಣ್ಣ ಪರ ಸಿದ್ದರಾಮಯ್ಯ ಏನೇ ಹೇಳಿದರೂ ಅದನ್ನು ಕೇಳಿಸಿಕೊಳ್ಳಲು ಹೈಕಮಾಂಡ್ ತಯಾರಿರಲಿಲ್ಲ.
ಹೇಳಿ ಕೇಳಿ ಸಿದ್ದರಾಮಯ್ಯ ಆಪ್ತ ಕೆಎನ್ ರಾಜಣ್ಣ. ಯಾವುದೇ ಸಂದರ್ಭದಲ್ಲೂ ಸಿದ್ದರಾಮಯ್ಯ ಬಿಟ್ಟುಕೊಟ್ಟಿಲ್ಲ. ಹೀಗಾಗಿ ತನ್ನ ಆಪ್ತ ರಾಜಣ್ಣನ ಉಳಿಸುವ ಪ್ರಯತ್ನಗಳು ವಿಫಲವಾಗಿತ್ತು. ಹೀಗಾಗಿ ರಾಜಣ್ಣಗೆ ಮಾಹಿತಿ ನೀಡಿದ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ರಾಜಣ್ಣ ಮನ ಒಲಿಸಿದ ಸಿದ್ದರಾಮಯ್ಯ, ರಾಜೀನಾಮೆ ಪಡೆದುಕೊಂಡಿದ್ದರು. ಬಳಿಕ ರಾಜಣ್ಣ ರಾಜೀನಾಮೆ ಪಡೆದುಕೊಂಡಿದ್ದೇನೆ ಎಂದು ಹೈಕಮಾಂಡ್‌ಗೆ ಸೂಚಿಸಿದ್ದಾರೆ.
ಸಿದ್ದರಾಮಯ್ಯ ಪರಿಸ್ಥಿತಿಯನ್ನು ತಿಳಿಗೊಳಿಸಿ, ಆಪ್ತನ ವಿರುದ್ದ ವಜಾ ಕ್ರಮ ಕೈಗೊಳ್ಳುವುದಕ್ಕಿಂತ ರಾಜೀನಾಮೆ ಲೇಸು ಎಂದು ಈ ಪ್ರಯತ್ನ ನಡೆಸಿದ್ದರು. ಆದರೆ ಹೈಕಮಾಂಡ್ ಮಾತ್ರ ರಾಜೀನಾಮೆ ಬೇಡ ಎಂದಿತ್ತು. ರಾಜೀನಾಮೆ ಅಲ್ಲ, ವಜಾ ಆದೇಶ ನೀಡಬೇಕು. ಸಂಪುಟದಿಂದ ರಾಜಣ್ಣ ವಜಾ ಮಾಡಿ ಎಂದು ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿತ್ತು. ರಾಹುಲ್ ಗಾಂಧಿಯಿಂದ ಸ್ಪಷ್ಟ ಸೂಚನೆ ಇದೆ ಎಂದು ಕೆಸಿ ವೇಣುಗೋಪಾಲ್, ರಣದೀಪ್ ಸುರ್ಜೆವಾಲಾ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೂಚಿಸಿದ್ದಾರೆ. ರಾಜೀನಾಮೆ ಪಡೆದು ಅಂಗೀಕರಿಸದಂತೆ ಸೂಚಿಸಿದ್ದಾರೆ.
ಸಿದ್ದರಾಮಯ್ಯ ಆಪ್ತರಾಗಿರುವ ರಾಜಣ್ಣಗೆ ವಜಾ ಆದೇಶ ನೀಡುವ ಸಾಧ್ಯತೆಯನ್ನು ಕಾಂಗ್ರೆಸ್ ಹೈಕಮಾಂಡ್ ಚರ್ಚಿಸಿದೆ. ಹೀಗಾಗಿ ಒಂದು ವೇಳೆ ಸಿದ್ದರಾಮಯ್ಯ ವಜಾ ಆದೇಶ ನೀಡಿದ್ದರೆ ಪ್ಲಾನ್ ಬಿ ರೆಡಿ ಮಾಡಿತ್ತು. ಇದಕ್ಕಾಗಿ ಸಿದ್ದರಾಮಯ್ಯಗೆ ಸಂಜೆ 6 ಗಂಟೆ ವರೆಗೆ ಸಮಯ ನೀಡಲಾಗಿತ್ತು. ಈ ಸಮಯದೊಳಗೆ ವಜಾ ಮಾಡದಿದ್ದರೆ, ಕೆಎನ್ ರಾಜಣ್ಣ ಅವರ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲು ಹೈಕಮಾಂಡ್ ಮುಂದಾಗಿತ್ತು. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿತ್ತು.
ಆಪ್ತ ಕೆಎನ್ ರಾಜಣ್ಣ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಎಲ್ಲಾ ಪ್ರಯತ್ನ ಮಾಡಿದ್ದರು . ಆದರೆ ಹೈಕಮಾಂಡ್ ನಿಲುವು ಬದಲಾಗಲಿಲ್ಲ. ಹೀಗಾಗಿ ಕೆಎನ್ ರಾಜಣ್ಣಗೆ ಮನವರಿಕೆ ಮಾಡಿದ್ದಾರೆ. ಬಳಿಕ ವಜಾ ಆದೇಶ ಹೊರಡಿಸಿದ್ದಾರೆ.
ಹೈಕಮಾಂಡ್ ನಿರ್ಧಾರದಂತೆ ವಜಾ ಆದೇಶ ನೀಡಿದ್ದೇನೆ. ಎಲ್ಲಾ ಪ್ರಯತ್ನ ಮಾಡಿದ್ದೇನೆ. ಆದರೆ ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಿಎಂ ಸಿದ್ದರಾಮಯ್ಯ, ಕೆಎನ್ ರಾಜಣ್ಣಗೆ ಹೇಳಿದ್ದಾರೆ. ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಲು ಸೂಚನೆ ನೀಡಿದ್ದಾರೆ. ನಾನು ಜೊತೆಗಿದ್ದೇನೆ ಎಂದು ಕೆಎನ್ ರಾಜಣ್ಣಗೆ ಸಮಾಧಾನ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ